CONNECT WITH US  

ಕಾರ್ನಾಡ್‌ಗೆ ಅರಿವಿಲ್ಲವೇ?

ಬೆಂಗಳೂರು: ಪುರಭವನದ ಮುಂಭಾಗ ಗೋಮಾಂಸ ಭಕ್ಷಿಸಿದವರು ಜೀವಂತ ಹಸು ಅಥವಾ ಕರು ಕೊಂದು ತಿಂದಿದ್ದರೆ ಅವರನ್ನು ಜೈಲಿಗೆ ಹಾಕಬೇಕು ಎಂದು ಸ್ವಾತಂತ್ರ್ಯ ಯೋಧ ಎಚ್‌.ಎಸ್‌. ದೊರೆಸ್ವಾಮಿ ಆಗ್ರಹಿ ಸಿದ್ದಾರೆ.

ಜೀವಂತ ಗೋವನ್ನು ಕೊಂದು ತಿನ್ನುವುದು ಕಾನೂನು ರೀತಿ ಅಪರಾಧ. ಈ ಸಂಬಂಧ 1963ರಿಂದಲೂ ಈ ಕಾನೂನು ಜಾರಿಯಲ್ಲಿದೆ. ಸಾಹಿತಿಗಳಾದ ಗಿರೀಶ್‌ ಕಾರ್ನಾಡ್‌, ಮರುಳಸಿದ್ದಪ್ಪ ಅವರಂತಹವರೂ ಈ ಬಗ್ಗೆ ಅರಿವಿಲ್ಲದವರಂತೆ ಚಳವಳಿ ನಡೆಸಿರುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ. ಸಮಾ ರಂಭವೊಂದರಲ್ಲಿ ಅವರು ಮಾತನಾಡಿ, ಪುರ ಭವನದ ಮುಂದೆ ಗೋಮಾಂಸ ಭಕ್ಷಿಸಿದವರು ತಾನಾಗೇ ಸತ್ತ ಹಸು-ಕರುವಿನ ಮಾಂಸ ಸೇವಿಸಿದ್ದರೆ ಅದು ಅಪರಾಧವಲ್ಲ, ಗೋವನ್ನು ಕೊಂದು ತಿಂದಿದ್ದರೆ ಅದು 3 ವರ್ಷ ಕಠಿಣ ಶಿಕ್ಷೆಯ ಅಪರಾಧ ಎಂದರು. ಸಂಶೋಧಕ ಚಿಮೂ ಮಾತನಾಡಿ, ಸೋಮವಾರ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

Trending videos

Back to Top