CONNECT WITH US  

ಶ್ರೀಗಂಧದ ಮೇಲಿನ ತೆರಿಗೆ ಕಡಿತ ಪರಿಶೀಲನೆ

ಸಾಗರ: ಗುಡಿಕೈಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಗುಡಿಕೈಗಾರಿಕೆಗಳಿಗೆ ಪೂರೈಕೆಯಾಗುವ ಶ್ರೀಗಂಧದ ಮೇಲೆ ವಿಧಿಧಿಸುತ್ತಿರುವ ತೆರಿಗೆ ಕಡಿತಗೊಳಿಸುವತ್ತ ಗಮನ ಹರಿಸಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು. ಪಟ್ಟಣದಲ್ಲಿರುವ ಶ್ರೀಗಂಧ ಸಂಕೀರ್ಣದಲ್ಲಿ ಗುರುಕುಲ ಪದ್ಧತಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕರಕುಶಲ ಕಲೆಯನ್ನು ಪುನರುಜ್ಜೀವಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸ್ಥಳೀಯ ಕುಶಲಕರ್ಮಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಇಲಾಖೆಯ ಮೂಲಕ ಸಣ್ಣ ಹಾಗೂ ಗುಡಿ, ಗೃಹ ಕೈಗಾರಿಕೆ ಉತ್ತೇಜನ ನೀಡುವ ಕುರಿತು ಅಧಿಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ ಎಂದರು. ಕುಶಲಕರ್ಮಿಗಳಿಗೆ ಮಾಸಾಶನ ನೀಡುವ ಬಗ್ಗೆ ಚಿಂತನೆ ನಡೆದಿದೆ. ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ, ತನ್ಮೂಲಕ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Trending videos

Back to Top