CONNECT WITH US  

​ನಿವೃತ್ತ ಐಎಎಸ್‌ ಅಧಿಕಾರಿಯ ಪುತ್ರಿಯ ಮೇಲೆ ಮೈದುನನಿಂದ ರೇಪ್‌

ಬೆಂಗಳೂರು : ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರ ಮಗಳ ಮೇಲೆ ಆಕೆಯ ಪತಿಯ ಸಹೋದರನೆ ಅತ್ಯಾಚಾರ ನಡೆಸಿದ ಬಗ್ಗೆ ಪೂರ್ವ ವಲಯ ಡಿಸಿಪಿ ಸತೀಶ್‌ ಅವರಿಗೆ ದೂರು ನೀಡಲಾಗಿದೆ ಎಂದು ಶುಕ್ರವಾರ ವರದಿಯಾಗಿದೆ. 

ನಿವೃತ್ತ ಐಎಎಸ್‌ ಅಧಿಕಾರಿ ನೀಡಿದ ದೂರಿನಲ್ಲಿ ಮೈಸೂರಿನ ಪ್ರಸಿದ್ದ ಉದ್ಯಮಿಯ ವಿರುದ್ದ ಅತ್ಯಾಚಾರ ಆರೋಪ ಮಾಡಲಾಗಿದೆ. ಅಲ್ಲದೆ ತಮ್ಮ ಮಗಳಿಗೆ ಆಕೆಯ ಪತಿ, ಅತ್ತೆ ಮತ್ತು ಮಾವ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಘಟನೆ ಮೈಸೂರಿನಲ್ಲಿ ನಡೆದ ಹಿನ್ನಲೆಯಲ್ಲಿ ಪ್ರಕರಣವನ್ನು ಡಿಸಿಪಿ ಸತೀಶ್‌ ಮೈಸೂರಿಗೆ ವರ್ಗಾವಣೆ ಮಾಡಿದ್ದಾರೆ. 
ಮೈಸೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. 

Trending videos

Back to Top