CONNECT WITH US  

ಸಿದ್ದು ಬ್ರ್ಯಾಂಡ್‌ ಎಂದರೆ ನಿದ್ರೆ: ಅಶೋಕ್‌ ಲೇವಡಿ

ಬೆಂಗಳೂರು: "ದೇವರು ಜಗತ್ತಿನ ಸಕಲ ಜೀವಿಗಳಿಗೂ ನಿದ್ರೆಗಾಗಿ ಸಮಯ ನಿಗದಿಪಡಿಸಿದ್ದಾನೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿದ್ರೆಗೆ ಮಾತ್ರ ಸಮಯ ನಿಗದಿಪಡಿಸಿಲ್ಲ' ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ. ಶುಕ್ರವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಮಹಾಸಂಪರ್ಕ ಅಭಿಯಾನದ ಪೂರ್ವಭಾವಿ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬ್ರಾÂಂಡ್‌ ಎಂದರೆ ನಿದ್ರೆ ಎಂದರು. ಸಿದ್ದರಾಮಯ್ಯ ಅವರು ಸಭೆ- ಸಮಾರಂಭಗಳಲ್ಲಿ ಎಲ್ಲೆಂದರಲ್ಲಿ ನಿದ್ರೆ ಮಾಡುತ್ತಾರೆ. ಅದರ ಪರಿಣಾಮ ರಾಜ್ಯ ಸರ್ಕಾರವೂ ನಿಷ್ಕ್ರಿಯಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸಿದ್ದರಾಮಯ್ಯ ಎಂದರೆ ಜಾತಿವಾದಿ. ಜಾತಿ ಜಾತಿಗಳ ನಡುವೆ ಸಂಘರ್ಷ, ಕಂದಕ ಉಂಟು ಮಾಡುತ್ತಿದ್ದಾರೆ. ಹೊಸದಾಗಿ ಜಾತಿಗಳನ್ನು ಉತ್ಪಾದಿಸುತ್ತಿದ್ದಾರೆ. ಜಾತಿಗಳ ಮೂಲಕ ಸಮಾಜವನ್ನು ಒಡೆದದ್ದಾಯಿತು. ಈಗ ಬೆಂಗಳೂರನ್ನು ಒಡೆಯಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಪ್ರಹ್ಲಾದ್‌ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಹಾಜರಿದ್ದರು.

Trending videos

Back to Top