CONNECT WITH US  

ಖಂಡಿಸಿ ನಾಟಕ ಮಾಡಿದರೂ ಖುಷಿ: ಕಾರ್ನಾಡ್‌

ಉಡುಪಿ: "ನನ್ನ ನಾಟಕದ ಅನೇಕ ಪ್ರಯೋಗಗಳನ್ನು ಮಾಡಿರುವ ಉಡುಪಿಯ ರಂಗಭೂಮಿ ಸಂಸ್ಥೆಗೆ ನನ್ನ ತುಂಬು ಹೃದಯದ ಕೃತಜ್ಞತೆ. ಆದರೆ, ನಾಟಕಕ್ಕೂ ಗೋಮಾಂಸ ಭಕ್ಷಣೆ ಕುರಿತ ನನ್ನ ಹೇಳಿಕೆಗೂ ಯಾವ ಸಂಬಂಧವೂ ಇಲ್ಲ. ರಂಗಭೂಮಿ ಸಂಸ್ಥೆ ನನ್ನ ಹೇಳಿಕೆ ಖಂಡಿಸುತ್ತಲೇ ನಾಟಕ ಪ್ರದರ್ಶಿಸಿದ್ದರೂ ನನಗೆ ಅಷ್ಟೇ ಖುಷಿ' ಎಂದು ಜ್ಞಾನಪೀಠ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಪ್ರತಿಕ್ರಿಯೆ ನೀಡಿದ್ದಾರೆ. ಮಣಿಪಾಲದ ನರಸಿಂಗೆ ದೇವಸ್ಥಾನದಲ್ಲಿ ಗುರುವಾರ ಕಾರ್ನಾಡರ "ನಾಗಮಂಡಲ' ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ, ಗೋಮಾಂಸ ಭಕ್ಷಣೆ ಕುರಿತು ಕಾರ್ನಾಡ್‌ ಹೇಳಿಕೆ ನೀಡಿದ ಕಾರಣ ದೇವಸ್ಥಾನದ ಆಡಳಿತ ಮಂಡಳಿ ನಾಟಕ ಪ್ರದರ್ಶನ ರದ್ದುಗೊಳಿಸಿತ್ತು. ದೇವಸ್ಥಾನದಿಂದ ಆಕ್ಷೇಪಣೆ ಬಂದಿರುವ ಕಾರಣ "ಕಾರ್ನಾಡರನ್ನು ಖಂಡಿಸಿಯೇ ನಾಟಕ ಪ್ರದರ್ಶನ ಮಾಡುತ್ತೇವೆ' ಎಂದು ರಂಗಭೂಮಿ ಸಂಸ್ಥೆಯವರು ಹೇಳಿಕೆ ನೀಡಿದ್ದಾರೆ ಎಂದು ಸುದ್ದಿ ಹರಡಿತ್ತು.

Trending videos

Back to Top