CONNECT WITH US  

ಮಗು ಮಾರಾಟ: ಆಂಧ್ರದಲ್ಲಿ ಮಗು ಪತ್ತೆ

ತುಮಕೂರು: ಪಾವಗಡ ತಾಲೂಕಿನ ಬೂಪೂರು ತಾಂಡಾದಲ್ಲಿ ಬಡತನದ ಕಾರಣಕ್ಕೆ ಹೆತ್ತವರಿಂದಲೇ ಮಾರಾಟವಾಗಿದ್ದ ಹೆಣ್ಣು ಮಗುವನ್ನು ಆಂಧ್ರದ ಕಂಬದೂರಿನಲ್ಲಿ ಪತ್ತೆಹಚ್ಚಿ, ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ. ಬೂಪೂರು ಗ್ರಾಮದ ಕಾರ್ಮಿಕ ರಾಮಚಂದ್ರನಾಯ್ಕ ಹಾಗೂ ಸೌಂದರ್ಯ ದಂಪತಿ ಪಾವಗಡ ಪಟ್ಟಣದ ಲಾಲ್‌ಬಾಷಾ ಎಂಬಾತನ ಮುಖಾಂತರ ಆತನ ಸಂಬಂಧಿಕರೆನ್ನಲಾದ ಆಂಧ್ರದ ಕಮ್ಮದೂರಿನ ಮಕ್ಕಳಿಲ್ಲದ ಮುಸ್ಲಿಂ ದಂಪತಿಗೆ 3 ತಿಂಗಳ ಹಿಂದೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದರು. ಅಂಗನವಾಡಿ ಕೇಂದ್ರದ ಸಿಬ್ಬಂದಿಯಿಂದ ಮಗುವಿನ ನಾಪತ್ತೆ ವಿಷಯ ಬಹಿರಂಗಗೊಂಧಿಡಿಧಿತ್ತು. ಮಗು ಆರೋಗ್ಯವಾಗಿದ್ದು ಜಿಲ್ಲಾಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.

Trending videos

Back to Top