CONNECT WITH US  

ಬಿಜೆಪಿಯಿಂದ ಮತ್ತೆ ಆಪರೇಶನ್‌ ಕಮಲ: ಬಿಜೆಪಿಯ ಆಫ‌ರ್‌ ತಿರಸ್ಕಾರ !

ಬೆಂಗಳೂರು: ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಸದ್ದು ಮಾಡಿದ್ದ "ಆಪರೇಷನ್‌ ಕಮಲ', ಈಗ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆಯಲ್ಲೂ ಸದ್ದು ಮಾಡಿದೆ. ಕಾರ್ಪೊರೇಟರ್‌ ಸ್ಥಾನಕ್ಕೆ ತಮ್ಮ ಪತ್ನಿಯಿಂದ ರಾಜೀನಾಮೆ ಕೊಡಿಸುವಂತೆ ಬಿಜೆಪಿ ನಾಯಕರು ತಮಗೆ ಹಣದ ಆಮಿಷವೊಡ್ಡಿದರು ಎಂದು ಚೌಡೇಶ್ವರಿ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಪದ್ಮಾವತಿ ಅವರ ಪತಿ ಅಮರನಾಥ್‌ ಆರೋಪಿಸಿದ್ದಾರೆ.

ಶುಕ್ರವಾರ "ಉದಯವಾಣಿ'ಯೊಂದಿಗೆ ಮಾತನಾ ಡಿದ ಅವರು, "ನಿಮ್ಮ ಪತ್ನಿಯಿಂದ ರಾಜೀನಾಮೆ ಕೊಡಿಸಿದರೆ, ಚುನಾವಣಾ ಗೆಲುವಿಗೆ ಮಾಡಿದ ಸಾಲ ತೀರಿಸುವುದರ ಜತೆಗೆ ಸುಮಾರು ಎರಡೂವರೆ ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗುವುದು. ಅಷ್ಟೇ ಅಲ್ಲ, ವಾರ್ಡ್‌ನ ಮರುಚುನಾವಣೆ ನಡೆದಾಗ ಬಿಜೆಪಿಯಿಂದಲೇ "ಬಿ-ಫಾರಂ' ಕೊಟ್ಟು, ಚುನಾವಣಾ ಖರ್ಚು- ವೆಚ್ಚವನ್ನೂ ಸಂಪೂರ್ಣವಾಗಿ ಭರಿಸಿ ಗೆಲ್ಲಿಸಿಕೊಳ್ಳಲಾಗು ವುದು' ಎಂದು ತಮಗೆ ಆಮಿಷವೊಡ್ಡಲಾಯಿತು ಎಂದರು. ಬ್ಯಾಟರಾಯನಪುರದ ಬಿಜೆಪಿ ನಾಯಕ ರೊಬ್ಬರು ಮೊಬೈಲ್‌ ಮೂಲಕ ಸೆ. 1ರಂದು ರಾತ್ರಿ 8.35ರ ಸುಮಾರಿಗೆ ಕರೆ ಮಾಡಿ, ಹಣ ಸೇರಿದಂತೆ ಹಲವು ಆಮಿಷಗಳನ್ನು ಮುಂದಿಟ್ಟಿದ್ದಾರೆ. ಆದರೆ, ಅದನ್ನು ನಾನು ಅಷ್ಟೇ ನಯವಾಗಿ ತಳ್ಳಿಹಾಕಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

ಕರೆ ಮಾಡಿದ ಬ್ಯಾಟರಾಯನಪುರದ ನಾಯಕ, ಆ ಪಕ್ಷದ ಹಿರಿಯ ಮುಖಂಡ ರೊಬ್ಬರಿಂದಲೂ ರಾಜೀನಾಮೆ ಮತ್ತು ಪಕ್ಷಾಂತರಕ್ಕೆ ಒತ್ತಾಯಿಸಿದರು. ಆ ಹಿರಿಯ ಮುಖಂಡ ಸುಮಾರು 45 ಸೆಕೆಂಡ್‌ ಸಂಭಾಷಣೆ ನಡೆಸಿದ್ದಾರೆ. ಆದರೆ, ಈ ಸಂಭಾಷಣೆಯನ್ನು ನಾನು ಧ್ವನಿ ಮುದ್ರಣ ಮಾಡಿಲ್ಲ ಎಂದೂ ಅಮರನಾಥ್‌ ಸ್ಪಷ್ಟಪಡಿಸಿದರು.

ಸಂಭಾಷಣೆ ವಿವರ ಹೀಗಿದೆ: ಶನಿವಾರ (ಆಗಸ್ಟ್‌ 29) ಸಂಜೆ ಕರೆ ಮಾಡಿದ ಬಿಜೆಪಿ ನಾಯಕರು, "ಅಮರನಾಥ್‌, ಗೆದ್ದಿದ್ದು ಕೇಳಿ ತುಂಬಾ ಖುಷಿ ಆಯ್ತು. ಒಳ್ಳೆಯದಾಗಲಿ...' ಎಂದು ಶುಭಾಶಯ ಹೇಳಿದರು. ಭಾನುವಾರ (ಆಗಸ್ಟ್‌ 30) ಸಂಜೆ ಅದೇ ಸಮಯಕ್ಕೆ ಮತ್ತೆ ಕರೆ ಮಾಡಿದ ಬಿಜೆಪಿ ನಾಯಕ, "ನೀವು ಗೆದ್ದಿದ್ದಕ್ಕೆ ಮತ್ತೂಮ್ಮೆ ಅಭಿನಂದನೆ. ಆದರೆ, ಗೆಲುವಿಗೆ ಸಾಲ-ಸೋಲ ಮಾಡಿರಿ¤àರಾ. ಎಷ್ಟಾಗಿದೆ ಸಾಲ?' ಎಂದು ಕೇಳಿದರು. ಅದಕ್ಕೆ "ಕೆಲವು ಲಕ್ಷ (ಮಾಧ್ಯಮಕ್ಕೆ ಬಹಿರಂಗಪಡಿಸಲು ಇಚ್ಛಿಸಲಿಲ್ಲ) ಆಗಿದೆ ಸಾರ್‌' ಎಂದು ತಿಳಿಸಿದೆ. "ಆ ಸಾಲ ಎಲ್ಲಾ ನಾವು ತೀರಿಸ್ತೀವಿ. ಜತೆಗೆ ಎರಡೂವರೆ ಕೋಟಿ ರೂ. ಕೂಡ ಕೊಡ್ತೀವಿ. ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿಬಿಡು. ಅದೇ ವಾರ್ಡ್‌ಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಕೊಡಿಸ್ತೀವಿ. ಅಷ್ಟೇ ಅಲ್ಲ, ಚುನಾವಣಾ ಖರ್ಚು-ವೆಚ್ಚವನ್ನೂ ಭರಿಸ್ತೀವಿ. ನೀನೊಬ್ಬನೇ ಅಲ್ಲ. ಒಟ್ಟು ಆರು ಕಾರ್ಪೋರೇಟರ್‌ಗಳ ಜತೆ ಮಾತಾಡಿದ್ದೇವೆ. ಒಳ್ಳೆಯ ಅವಕಾಶ ನೋಡು' ಎಂದರು. ಅದಕ್ಕೆ ನಾನು, "ಇದೆಲ್ಲಾ ನನಗೆ ಇಷ್ಟ ಇಲ್ಲ ಸಾರ್‌...' ಎಂದು ತಿಳಿಸಿದೆ.

ಆಮೇಲೆ ನಮ್ಮ ನಾಯಕರು ಮಾತಾಡ್ತಾರೆ ಕೊಡ್ತೀನಿ ಎಂದರು. ಬಿಜೆಪಿ ರಾಜ್ಯ ನಾಯಕರೊಬ್ಬರು, "ಒಳ್ಳೆಯ ಅವಕಾಶ, ಸದುಪಯೋಗ ಮಾಡಿಕೊಳ್ಳಿ...' ಎಂದು ಹೇಳಿದರು. ನಾನು ನೋಡೋಣ ಸಾರ್‌ ಎಂದಷ್ಟೇ ಹೇಳಿರುವುದಾಗಿ ಅಮರನಾಥ್‌ ವಿವರಿಸಿದರು.

ನನಗೆ ಗೊತ್ತಿಲ್ಲ: ಪದ್ಮಾವತಿ

ಅಮರನಾಥ್‌ ಪತ್ನಿ ಹಾಗೂ ಚೌಡೇಶ್ವರಿ ವಾರ್ಡ್‌ ಸದಸ್ಯೆ ಪದ್ಮಾವತಿ ಈ ಬಗ್ಗೆ "ಉದಯವಾಣಿ' ಜತೆ ಮಾತನಾಡಿ, "ನನ್ನನ್ನು ಯಾವುದೇ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ. ನನ್ನ ಪತಿ ಅಮರನಾಥ್‌ ಅವರನ್ನು ಸಂಪರ್ಕಿಸಿದ್ದಾರಂತೆ. ಅವರು ಏನು ಮಾತಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ. ಮಂಗಳವಾರ ರಾತ್ರಿ ಬಿಜೆಪಿ ನಾಯಕರೊಬ್ಬರು ನನ್ನ ಪತಿಗೆ ಕರೆ ಮಾಡಿ, ಆಮಿಷವೊಡ್ಡಿದ್ದರಂತೆ. ಯಾರು ಕರೆ ಮಾಡಿದ್ದರು, ಏನು ಹೇಳಿದರು ಎಂಬುದಾವುದೂ ನನಗೆ ಗೊತ್ತಿಲ್ಲ ಎಂದು ಹೇಳಿದರು.


Trending videos

Back to Top