CONNECT WITH US  

ಭೇಟಿ ಉದ್ದೇಶವೇನು?; ಡಿಕೆಶಿ ನಿವಾಸಕ್ಕೆ ಬಿಜೆಪಿ ಕಾರ್ಪೋರೇಟರ್ಸ್ ಭೇಟಿ

ಬೆಂಗಳೂರು: ಬಿಬಿಎಂಪಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಬಿಜೆಪಿ ಕಾರ್ಪೋರೇಟರ್ಸ್ ಮಂಗಳವಾರ ಕಾಂಗ್ರೆಸ್ ಮುಖಂಡ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಸಚಿವ ಡಿಕೆಶಿ ಮನೆಗೆ ಹಂಪಿ ನಗರ ವಾರ್ಡ್ ಕಾರ್ಪೊರೇಟರ್ ಆನಂದ್ ಹೊಸೂರು, ಮಾರೇನಹಳ್ಳಿ ವಾರ್ಡ್ ಬಿಜೆಪಿ ಕಾರ್ಪೋರೇಟರ್ ಮಧುಕುಮಾರಿ ಪತಿ ವಾಗೇಶ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಸೆಪ್ಟೆಂಬರ್ 11ರಂದು ಬಿಬಿಎಂಪಿ ಮೇಯರ್ ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ 73 ಕಾರ್ಪೋರೇಟರ್ಸ್ ಗಳು ಮತ್ತು ಪಕ್ಷೇತರ ಸದಸ್ಯರು ಈಗಾಗಲೇ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿದ್ದಾರೆ. ಏತನ್ಮಧ್ಯೆ ಬಿಜೆಪಿ ಕಾರ್ಪೋರೇಟರ್ ಗಳು ಡಿಕೆಶಿ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆದರೆ ನಾವು ರಾಜಕೀಯದ ವಿಷಯವಾಗಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿಲ್ಲ. ವಿದ್ಯುತ್ ಸಮಸ್ಯೆ ಕುರಿತು ಚರ್ಚಿಸಲು ಭೇಟಿಯಾಗಿರುವುದಾಗಿ ಸಮಜಾಯಿಷಿ ನೀಡಿದ್ದಾರೆ.

Trending videos

Back to Top