CONNECT WITH US  

ಜಿಲ್ಲಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ಮರಣೆ

ರಾಮನಗರ: ಗಾಂಧೀಜಿ ಅವರ ಆದರ್ಶಗಳು, ಸಿದ್ಧಾಂತಗಳು, ತತ್ವಗಳು ಸರ್ವಕಾಲಿಕ ಎಂದು ಜಿಲ್ಲಾಧಿಕಾರಿ ಎಫ್.ಆರ್‌.ಜಮಾದಾರ್‌ ಹೇಳಿದರು.

ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಛಲ, ಆತ್ಮವಿಶ್ವಾಸವಿದ್ದರೆ ಸಾಧನೆ ಸುಲಭವಾಗಿದೆ. ಗಾಂಧಿ ತತ್ವಾದರ್ಶಗಳನ್ನು ರೂಢಿಸಿಕೊಳ್ಳುವಂತೆ ಯುವ ಸಮುದಾಯಕ್ಕೆ ಸಲಹೆ ನೀಡಿದರು.
ಗಾಂಧೀಜಿಗೆ ಯಾರೂ ಸಮನಾದವರಿಲ್ಲ:
ಡಿಡಿಎಲ್‌ಆರ್‌ ವೇಣುಗೋಪಾಲ್‌ ಮಾತನಾಡಿ, ವಿಶ್ವದಲ್ಲಿ ಗಾಂಧೀಜಿಯವರಿಗೆ ಸಮನಾದವರೂ ಯಾರೂ ಇಲ್ಲ. ವಿಶ್ವದ ಬಹುತೇಕರಿಗೆ ಭಾರತಕ್ಕಿಂತ, ಗಾಂಧೀಜಿ ಹೆಸರೇ ಹೆಚ್ಚು ಪರಿಚಯ, ಭಾರತವನ್ನು ಅವರು ಗಾಂಧೀಜಿ ನಾಡು ಎಂತಲೇ ಗುರುತಿಸುತ್ತಾರೆ. ಜೀವನದುದ್ದಕ್ಕೂ ಸಮಾಜಿಕ ಕರ್ತವ್ಯವೇ ದೇವರು ಎಂದು ನಂಬಿದ್ದ ಬಾಪೂಜಿ ಅವರ ತ್ಯಾಗ, ಅಹಿಂಸಾ ಹೋರಾಟವನ್ನು ಸದಾ ಸ್ಮರಿಸಬೇಕು ಎಂದರು.

ರಕ್ತಪಾತವಿಲ್ಲದೇ ಸ್ವಾತಂತ್ರ್ಯ:
ಅಪರ ಜಿಲ್ಲಾಧಿಕಾರಿ ಡಾ.ಪ್ರಶಾಂತ್‌ ಮಾತನಾಡಿ, ಆಂಗ್ಲರನ್ನು ಭಾರತದಿಂದ ಅಹಿಂಸಾತ್ಮಕ ಹೋರಾಟದಿಂದಲೇ ತೊಲಗಿಸಿದ್ದಾಗಿದೆ. ವಿಶ್ವದ ಬಲಿಷ್ಠ ರಾಷ್ಟ್ರವಾಗಿದ್ದ ಬ್ರಿಟನ್‌ನನ್ನು ರಕ್ತ ಪಾತವಿಲ್ಲದೇ ಹಿಮ್ಮೆಟ್ಟಿಸಿದ ಕೀರ್ತಿ ಭಾರತದ್ದು, ಇದಕ್ಕೆ ಮಹಾತ್ಮ ಗಾಂಧೀಜಿ ಅವರ ತತ್ವಗಳಾದಳಿಂದ ಸಾಧ್ಯವಾಗಿದೆ ಎಂದರು.

ಸಂಧಾನದಿಂದಲೇ ಪರಿಹಾರ:
ಉಪವಿಭಾಗಾಧಿಕಾರಿ ಡಾ.ಎಂ.ಎನ್‌.ರಾಜೇಂದ್ರ ಪ್ರಸಾದ್‌ ಮಾತನಾಡಿ, ಇಲ್ಲಿಯವರೆಗೂ ನಡೆದಿರುವ ಯುದ್ಧಗಳಿಂದ ಏನೂ ಪರಿಹಾರ ಸಾಧ್ಯವಾಗಿಲ್ಲ. ಯುದ್ಧದ ನಡುವೆ ಮತ್ತು ಯುದ್ಧದ ನಂತರ ನಡೆಯುವ ಚರ್ಚೆಗಳು, ಸಂಧಾನಗಳ ಮೂಲಕ ಮಾತ್ರ ಪರಿಹಾರ ಲಭಿಸಿದೆ. ಗಾಂಧೀಜಿ ಸಂಧಾನ, ಚರ್ಚೆಗಳ ಮೂಲಕ, ಅಹಿಂಸಾ ತತ್ವಗಳನ್ನು ಪ್ರತಿಪಾದಿಸಿದ್ದರು. ಇದೇ ತತ್ವಗಳ ಮೂಲಕ ಭಾರತಕ್ಕೆ ಸ್ವಾತಂತ್ರÂ ತಂದುಕೊಟ್ಟಿದ್ದಾರೆ ಎಂದರು.

ಗಾಂಧೀಜಿ ತತ್ವಾದರ್ಶಗಳು ಅವರ ಜಯಂತಿ ದಿನ ವೇದಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿವರ್ಷ ಮಹನೀಯರ ಜಯಂತಿಗಳನ್ನು ಅವರ ಒಂದೊಂದು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರಕ್ಕಾಗಿ ಸಂಘಟನೆ:
ನಗರಸಭೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, 1600ರಿಂದ ಆರಂಭಿಸಿ ಭಾರತಕ್ಕೆ ಬಂದ ಯೂರೋಪಿಯನ್ನರು, ಡಚ್ಚರು, ಫ್ರೆಂಚರು, ಆಂಗ್ಲರನ್ನು ಭಾರತದಿಂದ ತೊಲಗಿಸಲು ಪ್ರಯತ್ನಗಳಾದರೂ ಕೂಡ ಸಂಘಟನೆಯ ಕೊರತೆಯಿಂದಾಗಿ ಸಾಧ್ಯವಾಗಿರಲಿಲ್ಲ.

1919ರಲ್ಲಿ ಗಾಂಧೀಜಿ ಸ್ವಾತಂತ್ರÂ ಸಂಗ್ರಾಮಕ್ಕೆ ಆಗಮಿಸಿದ ವೇಳೆಯಲ್ಲಿ ಭಾರತದಲ್ಲಿ ಸ್ವಾತಂತ್ರಕ್ಕಾಗಿ ಮಂದಗಾಮಿ, ತೀವ್ರಗಾಮಿ ಹಾಗೂ ಕ್ರಾಂತಿಕಾರಿಗಳು ಸ್ವಾತಂತ್ರÂಕ್ಕಾಗಿ ಹೋರಾಟ ನಡೆಸುತ್ತಿದ್ದರು. ವಿಭಿನ್ನ ಧೋರಣೆಗಳು ಇದ್ದಿದ್ದರಿಂದ ಆಂಗ್ಲರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಆದರೆ ಗಾಂಧೀಜಿ ಒಂದು ವರ್ಷಗಳ ಕಾಲ ಭಾರತದ ಉದ್ದಗಲಕ್ಕೂ ಸಂಚರಿಸಿ ಸ್ವಾತಂತ್ರÂ ಸಂಗ್ರಾಮಕ್ಕೆ ಭಾರತೀಯರನ್ನು ಸಂಘಟಿಸಿದರು. ಶಾಂತಿ, ಅಹಿಂಸಾ ಮಾರ್ಗದಿಂದ ಆಂಗ್ಲರಿಂದ ಭಾರತಕ್ಕೆ ಸ್ವಾತಂತ್ರÂ ತಂದುಕೊಡಲು ಇದು ಸಾಧ್ಯವಾಯಿತು. ಹೀಗಾಗಿಯೆ ಗಾಂಧೀಜಿಯವರನ್ನು ಜನತೆ ಪ್ರೀತಿಯಿಂದ ಮಹಾತ್ಮ ಎಂದು ಕರೆದಿದ್ದಾರೆ ಎಂದರು.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌, ಲೆನಿನ್‌, ಸ್ಟಾಲಿನ್‌ ಅವರ ತತ್ವಗಳನ್ನೆಲ್ಲ ಸಮ್ಮಿಲನಗೊಳಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸಹನೆ, ಶಾಂತಿ, ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಜಿಪಂ ಸಿಇಒ ಕೆ.ಎಸ್‌.ಮಂಜುನಾಥ್‌ ಮಾತನಾಡಿ, ತಾವು ಇತ್ತೀಚೆಗೆ ಗುಜರಾತ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾಗಿ, ಜೀವನದಲ್ಲಿ ಪ್ರತಿಯೊಬ್ಬ ಭಾರತೀಯನು ಆಶ್ರಮಕ್ಕೊಮ್ಮೆ ಭೇಟಿ ನೀಡಿ ಸಾರ್ಥಕತೆ ಪಡೆಯಬೇಕು ಎಂದರು.
ತಹಶೀಲ್ದಾರ್‌ ಕೆ.ಟಿ.ಮಂಜಪ್ಪ, ಡಿಡಿಪಿಐ ವಿ.ಸುಮುಂಗಲ ಮುಂತಾದ ಅಧಿಕಾರಿಗಳು ಹಾಜರಿದ್ದರು. ಚನ್ನಪಟ್ಟಣದ ಮಾಲತಿ ಮತ್ತು ತಂಡ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ವಾರ್ತಾ ಇಲಾಖೆ ವತಿಯಿಂದ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಸಂದರ್ಭಗಳ ಛಾಯಾ ಚಿತ್ರಗಳು ಮತ್ತು ಮಾಹಿತಿ ಪ್ರದರ್ಶನ ಏರ್ಪಡಿಸಿದ್ದರು.
 


Trending videos

Back to Top