CONNECT WITH US  

ಗಾಂಧೀಜಿ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠ

ಮಾಗಡಿ: ಗಾಂಧೀಜಿಯವರ ಸತ್ಯ, ಅಹಿಂಸಾ, ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠ ಎಂದು ಪುರಸಭಾ ಅಧ್ಯಕ್ಷೆ ನಿರ್ಮಲಾ ಸೀತಾರಾಮ್‌ ತಿಳಿಸಿದರು.

ಪಟ್ಟಣದ ಗಾಂಧಿನಗರದ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಸತ್ಯ, ಅಹಿಂಸೆ, ಹೋರಾಟ ಮನೋಭಾವದಿಂದ ಬ್ರಿಟಿಷ್‌ ಸಂಕೋಲೆಯಿಂದ ಭಾರತದೇಶವನ್ನು ಮುಕ್ತಗೊಳಿಸಿದ ಮಹಾನ್‌ ಚೇತನವಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರು ವಿಶ್ವ ಕಂಡ ಆದರ್ಶ ಪುರುಷ. ಆದರೆ ಇಂದಿನ ಯುವಕರಿಗೆ ಗಾಂಧೀಜಿ ಇದ್ದರು ಎಂಬುದಷ್ಟೇ ಗೊತ್ತಿದೆ. ಅವರ ಆದರ್ಶಗಳ ಬಗ್ಗೆ ಅರಿವಿಲ್ಲ. ಗಾಂಧೀಜಿ ತತ್ವಾದರ್ಶಗಳ ಪಾಲನೆಯಿಂದ ಸ್ವಾಸ್ಥÂ ಸಮಾಜ ನಿರ್ಮಾಣದ ಮೂಲಕ ಗ್ರಾಮ ಸ್ವರಾಜ್ಯ ಕಾಣಬಹುದು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಗಾಂಧೀಜಿ ಹುಟ್ಟುಹಬ್ಬದ ಆಚರಣೆ ಔಪಚಾರಿಕವಾಗಿದೆ. ಅವರ ಆದರ್ಶಗಳನ್ನು ಮರೆಯುತ್ತಿದ್ದಾರೆ. ಗಾಂಧೀಜಿ ಅವರ ಸತ್ಯ, ಅಹಿಂಸೆ ತತ್ವಾದರ್ಶಗಳು ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ನಾಂದಿಯಾಗಲಿದೆ ಎಂದರು.

ತಾಲೂಕು ಬುದ್ಧ, ಬಸವಣ್ಣ, ವಿವೇಕಾನಂದ ಯುವ ಸೇನೆ ಅಧ್ಯಕ್ಷ ಎಂ.ರವೀಶ್‌ ಮಾತನಾಡಿ, ಏಕತೆ, ದೇಶಪ್ರೇಮ, ಸಾಮರಸ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸದಿದ್ದರೆ ಸಮಾಜ ನೆಮ್ಮದಿಯಿಂದರಲು ಸಾಧ್ಯವಿಲ್ಲ. ಸ್ವಾತಂತ್ರÂ ಬಂದಿರುವುದನ್ನು ಉಳಿಸಿಕೊಳ್ಳಬೇಕು. ಇನ್ನೊಬ್ಬ ಗಾಂಧಿ ಹುಟ್ಟುವುದ್ದಿಲ್ಲ. ದೇಶ ಏನು ಮಾಡಿದೆ ಎಂಬುದನ್ನು ಬಿಟ್ಟು ದೇಶಕ್ಕೆ ತನ್ನ ಕೊಡುಗೆ ಏನು ಎಂಬುದು ಮುಖ್ಯವಾಗಿದೆ ಎಂದರು.

ದೇಶದ ಅಭಿವೃದ್ಧಿಯ ಬಗ್ಗೆ ಪ್ರತಿಯೊಬ್ಬರು ದಿನಕ್ಕೆ ಒಂದು ನಿಮಿಷವಾದರೂ ಯೋಚಿಸಿ ಗಾಂಧೀಜಿ ಅವರ ತತ್ವಾದರ್ಶ ಇಡೀ ಜಗತ್ತಿಗೆ ಸಾರಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಪಟ್ಟಣದಲ್ಲಿ ಅತಿಮುಖ್ಯವಾದ ಈ ವೃತ್ತದಲ್ಲಿ ಈಗಾಗಲೇ ಗಾಂಧಿ ಪ್ರತಿಮೆ ಇದ್ದು, ಈಗ ರಸ್ತೆ ಅಗಲೀಕರಣದಿಂದ ಪ್ರತಿಮೆ ಕಾಣದ ರೀತಿ ಇದೆ. ಈ ವ್ಯಾಪ್ತಿಯಲ್ಲಿ ಅನೇಕ ಸರ್ಕಾರಿ ಕಚೇರಿಗಳು ಹಾಗೂ ಶಾಲಾ, ಕಾಲೇಜುಗಳು ಇರುವುದರಿಂದ ಬೃಹತ್‌ ಪ್ರತಿಮೆ ನಿರ್ಮಿಸಲು ಶಾಸಕರ ಬಳಿ ಚರ್ಚಿಸುವಂತೆ ಪುರಸಭಾಧ್ಯಕ್ಷರಿಗೆ ನರಸಿಂಹಮೂರ್ತಿ ಮನವಿ ಮಾಡಿದರು.

ಬೆಳಗುಂಬ ಗ್ರಾಪಂ ಉಪಾಧ್ಯಕ್ಷ ಕೋಟಪ್ಪ, ಜಿಲ್ಲಾ ಹಾಪ್‌ ಕಾಮ್ಸ್‌ ಮಾಜಿ ನಿರ್ದೇಶಕ ಜಯಕುಮಾರ್‌, ಮುಖಂಡರಾದ ಸೀನಪ್ಪ, ರಾಜ್ಯ ಬೆಸ್ಕಾಂ ನೌಕರರ ಸಂಘದ ಮಾಜಿ ಖಜಾಂಚಿ ಟಿ.ಆರ್‌.ರಾಮಕೃಷ್ಣಪ್ಪ, ಕಲ್ಕೆರೆ ಶಿವಣ್ಣ, ಅಂಗಡಿ ಗೋಪಾಲ್‌, ಎಂ.ಜೆ.ವೆಂಕಟೇಶ್‌, ನಾಗೇಶ್‌, ನಿವೃತ್ತ ಶಿಕ್ಷಕ ನಂಜಯ್ಯ, ಕುಮಾರ್‌ ಮತ್ತಿತರು ಹಾಜರಿದ್ದರು.
 

Trending videos

Back to Top