CONNECT WITH US  

ಗಿರೀಶ್‌ ಕರ್ನಾಡ್‌ ಹೇಳಿಕೆ: ಭುಗಿಲೆದ್ದ ಆಕ್ರೋಶ

ರಾಮನಗರ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಹೆಸರು ನಾಮಕರಣ ಮಾಡುವಂತೆ ಹೇಳಿಕೆ ನೀಡಿರುವ ಸಾಹಿತಿ ಗಿರೀಶ್‌ ಕಾರ್ನಾಡ್‌ರನ್ನು ಗಡಿಪಾರು ಮಾಡಬೇಕು ಎಂದು ಒಕ್ಕಲಿಗರ ವೇದಿಕೆ ಮತ್ತು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ವೇದಿಕೆ ರಸ್ತೆ ತಡೆದು ಪ್ರತಿಭಟಿಸಿತು.

ಗಿರೀಶ್‌ ಕಾರ್ನಾಡ್‌ರ ಹೇಳಿಕೆ ಖಂಡಿಸಿ ನಗರದ ಐಜೂರು ವೃತ್ತದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿದ ಸದಸ್ಯರು, ಗಿರೀಶ್‌ ಕಾರ್ನಾಡ್‌ರ ಪ್ರತಿಕೃತಿಯನ್ನು ದಹಿಸಿದರು. ಕೆಂಪೇಗೌಡರ ಹೆಸರಿಗೆ ಕಳಂಕ ಹಚ್ಚುತ್ತಿದ್ದರೂ ಅದೇ ವೇದಿಕೆಯಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನಿದ್ದ ಬಗ್ಗೆಯೂ ಪ್ರತಿಭಟನಾಕಾರರು ಕಿಡಿಕಾರಿದರು.

ಕೆಂಪೇಗೌಡ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಡಾ.ಎಚ್‌.ಎಂ.ಕೃಷ್ಣಮೂರ್ತಿ ಮಾತನಾಡಿ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಿಮಾತೃ ಕೆಂಪೇಗೌಡರ ಹೆಸರು ನಾಮಕರಣ ಮಾಡುವುದು ಸೂಕ್ತವಾಗಿದೆ. ಟಿಪ್ಪು ಹೆಸರ ನಾಮಕರಣ ಮಾಡುವಂತೆ ಸಾಹಿತಿ ಗಿರೀಶ್‌ ಕಾರ್ನಾಡ್‌ರ ಹೇಳಿಕೆ ನೀಡಬಾರದಿತ್ತು. ಕನ್ನಡ ಮಣ್ಣಿನಲ್ಲಿ ಹುಟ್ಟಿ ಅಪ್ಪಟ ಕನ್ನಡಿಗರೊಬ್ಬರ ಹೆಸರು ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ಸ್ನೇಹ ಕೂಟ ಸಂಘಟನೆ ಅಧ್ಯಕ್ಷ ಎಚ್‌.ಪಿ.ನಂಜೇಗೌಡ ಮಾತನಾಡಿ, ಸಮಾಜ ಒಡೆಯುವ, ಶಾಂತಿ ಕದಡುವ ವಾತಾವರಣ ಸೃಷ್ಟಿಸಿರುವ ಗಿರೀಶ್‌ ಕಾರ್ನಾಡ್‌ರಿಗೆ ನೀಡಿರುವ ಜಾnನಪೀಠ ಪ್ರಶಸ್ತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್‌ ಗೌಡ, ಬಿ.ಟಿ.ದಿನೇಶ್‌, ಎಂ.ಡಿ.ಶಿವಕುಮಾರ್‌, ಶಿವರಾಜು, ಕೆ.ಪುಟ್ಟರಾಜು, ಎಂ.ಕೆ.ಶಿವಣ್ಣ, ಮಂಜನಾಥ ಗೌಡ, ಭೈರೇಗೌಡ, ಎಸ್‌.ಟಿ.ನಂದೀಶ್‌, ಸಿ.ರಮೇಶ್‌, ಚಿಕ್ಕಣ್ಣ, ದೇವರಾಜು ಇತರರಿದ್ದರು.
 

Trending videos

Back to Top