CONNECT WITH US  

ಆಂಧ್ರ ನಕ್ಸಲರಿಂದ ಟಿಡಿಪಿ ನಾಯಕರ ಅಪಹರಣ

ಹೈದರಾಬಾದ್‌: ವಿಶಾಖಪಟ್ಟಣಂ ಜಿಲ್ಲೆಯ ಮೂವರು ಟಿಡಿಪಿ (ತೆಲಗು ದೇಶಂ ಪಕ್ಷ) ನಾಯಕರನ್ನು ಅಪಹರಿಸಿ ನಕ್ಸಲರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಧರಕೊಂಡಾ ಮಂಡಲ ಪಂಚಾಯತ್‌ ಅಧ್ಯಕ್ಷ ಎಂ.ಬಾಲಯ್ಯ, ಎಂ.ಮಹೇಶ್‌ ಮತ್ತು ವಿ.ಬಾಲಯ್ಯ ಎಂಬ ಟಿಡಿಪಿ ನಾಯಕರ ಸಂಪರ್ಕ ಸಾಧಿಸಿದ್ದ ನಕ್ಸಲರು, ಅವರನ್ನು ಭೇಟಿಯಾಗಲು ಇಚ್ಛಿಸಿದ್ದಾರೆ. ಅದರಂತೆ ಈ ಮೂವರು ಸ್ಥಳೀಯ ನಾಯಕರು ಸೋಮವಾರ ಚರ್ಚಿಸಲು ಹೋದಾಗ ಇವರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

Trending videos

Back to Top