CONNECT WITH US  

2005ಕ್ಕಿಂತ ಹಳೇ ನೋಟು ವಾಪಸ್‌ಗೆ 6 ತಿಂಗಳು ಸಮಯ

ಮುಂಬೈ: 2005ಕ್ಕಿಂತ ಮುಂಚೆ ಮುದ್ರಣವಾಗಿರುವ 100, 500, 1000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಇದ್ದ ಗಡುವನ್ನು ಆರ್‌ಬಿಐ ಇನ್ನೂ ಆರು ತಿಂಗಳು ವಿಸ್ತರಿಸಿದೆ. ಹೀಗಾಗಿ ಹಳೆಯ ನೋಟುಗಳನ್ನು ಹೊಂದಿದ್ದವರು ಬ್ಯಾಂಕುಗಳಿಗೆ ಹಿಂತಿರುಗಿಸಲು ಒಂದು ವಾರವಷ್ಟೇ ಉಳಿದಿದೆ ಎಂಬ ಆತಂಕಕ್ಕೆ ಒಳಗಾಗ ಬೇಕಾಗಿಲ್ಲ.

2015ರ ಜೂ. 30ರ ವರೆಗೆ ಹಳೆಯ ನೋಟುಗಳನ್ನು ಸಾರ್ವಜನಿಕರು ಹಿಂತಿರುಗಿಸಬಹುದಾಗಿದೆ. ಈ ಹಿಂದೆ 2005ಕ್ಕಿಂತ ಮುಂಚಿನ ನೋಟುಗಳ ವಿನಿಮಯಕ್ಕೆ 2015ರ ಜ.1 ಕೊನೆ ದಿನ ಎಂದು ಆರ್‌ಬಿಐ ಹೇಳಿತ್ತು. ಹಳೆಯ ನೋಟುಗಳು ಅದೇ ಮೌಲ್ಯವನ್ನು ಹೊಂದಿರಲಿದ್ದು, ಜನರು ಕಾನೂನು ರೀತಿಯಲ್ಲಿ ಅವುಗಳನ್ನು ಚಲಾವಣೆ ಮಾಡಬಹುದಾಗಿದೆ.

Trending videos

Back to Top