CONNECT WITH US  

ಭಾರತ ವಿರೋಧಿ, ಐಸಿಸ್ ಪರ ನಿಲುವಿನ 32ವೆಬ್ ಸೈಟ್ ಬಂದ್

ನವದೆಹಲಿ: ಭಾರತ ವಿರೋಧಿ ಧೋರಣೆ ಹೊಂದಿದ್ದ ಹಾಗೂ ಐಸಿಸ್ ಉಗ್ರರ ಪರ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಸುಮಾರು 32 ವೆಬ್ ಸೈಟ್ ಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬಂದ್ ಮಾಡಿದೆ. ಭಯೋತ್ಪಾದನಾ ನಿಗ್ರಹ ತಂಡದ ಸಲಹೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

32 ವೆಬ್ ಸೈಟ್ ಗಳ ಯುಆರ್ಎಲ್ಸ್, ಫೈಲ್ಸ್, ವಿಡಿಯೋ, ವೆಬ್ ಸೈಟ್ ಶೇರಿಂಗ್ ಸೋರ್ಸ್ ಕೋಡ್ ಗಳನ್ನು ಬಂದ್ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಅನ್ವಯ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2009ರ ಅಡಿಯಲ್ಲಿ ನಿಷೇಧಿಸಿರುವುದಾಗಿ ಟೆಲಿಕಾಂ ಇಲಾಖೆ ಹೇಳಿಕೆಯಲ್ಲಿ ವಿವರಿಸಿದೆ.

ದೇಶದ ಸಮಗ್ರತೆ ಮತ್ತು ಏಕತೆಯ ದೃಷ್ಟಿಯಿಂದ ಇಂತಹ ದೇಶ ವಿರೋಧಿ ನಿಲುವಿನ ಮಾಹಿತಿಯನ್ನು ಬಂದ್ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಕೊಟ್ಟಿತ್ತು.

Trending videos

Back to Top