CONNECT WITH US  

ತೆಲುಗು ಚಿತ್ರರಂಗದ ಹಾಸ್ಯರತ್ನ ಎಂ.ಎಸ್‌ .ನಾರಾಯಣ್‌ ಇನ್ನಿಲ್ಲ

ಹೈದರಾಬಾದ್‌ : ತೆಲುಗು ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟ ಮೈಲಾವರಪು ಸೂರ್ಯ ನಾರಾಯಣ ಅವರು ಶುಕ್ರವಾರ ಬೆಳಗ್ಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಅವರಿಗೆ 63 ವರ್ಷ ಪ್ರಾಯ ವಯಸ್ಸಾಗಿತ್ತು.

700 ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ ಹಾಸ್ಯ ನಟರಾಗಿ ನಟಿಸಿ ಆಂಧ್ರಪ್ರದೇಶದಾಂಧ್ಯಂತ ನಗೆ ಯ ಅಲೆಯನ್ನೇ ಸೃಷ್ಟಿಸಿದ್ದ ನಾರಾಯಣ ಅವರು ಕನ್ನಡ,ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದರು.

ವಾರದ ಹಿಂದ ಅವರ ಹುಟ್ಟೂರಾದ ಪಶ್ಚಿಮ ಗೋದಾವರಿಯಲ್ಲಿ ತೀವ್ರ ಅಸ್ವಸ್ಥರಾದ ನಾರಾಯಣ್‌ ಅವರನ್ನು ಹೈದರಾಬಾದ್‌ನ ಆಸ್ಪತ್ರಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ .

ಎಂ.ಎಸ್‌.ಎನ್‌ ಅವರ ನಿಧನಕ್ಕೆ ತೆಲುಗು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದು,ತೀವ್ರ ಸಂತಾಪ ಸೂಚಿಸಿದ್ದಾರೆ.


Trending videos

Back to Top