CONNECT WITH US  

ಪೆಟ್ರೋಲ್‌ 55 ರೂ., ಡೀಸೆಲ್‌ 50 ರೂ.ಗೆ: ಇಲ್ಲಿದೆ ಸಚಿವ ಗಡ್ಕರಿ ಉಪಾಯ

ಹೊಸದಿಲ್ಲಿ : ''ದೇಶದಲ್ಲಿನ ಇಥೆನಾಲ್‌ ಘಟಕಗಳು ಗರಿಷ್ಠ ಉತ್ಪಾದನೆ ಮಾಡಿದಲ್ಲಿ  ಮತ್ತು ಪರ್ಯಾಯ ಇಂಧನಗಳು ಗರಿಷ್ಠ ಪ್ರಮಾಣದಲ್ಲಿ ಬಳಕೆಯಾದಲ್ಲಿ  ಲೀಟರ್‌ ಡೀಸೆಲ್‌ ಬೆಲೆ 50 ರೂ.ಗೆ ಮತ್ತು ಲೀಟರ್‌ ಪೆಟ್ರೋಲ್‌ ಬೆಲೆ 55 ರೂ. ಗೆ ಇಳಿಯಲು ಸಾಧ್ಯ'' ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. 

ದೇಶದಲ್ಲಿ ಪರ್ಯಾಯ ಇಂಧನಗಳಾದ ಇಥೆನಾಲ್‌, ಮಿಥೆನಾಲ್‌, ಬಯೋ ಫ್ಯೂಯೆಲ್‌ ಮತ್ತು ಸಿಎನ್‌ಜಿ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾದಲ್ಲಿ ಪೆಟ್ರೋಲಿಯಂ ಮೇಲಿನ ಅವಲಂಬನೆ ಕಡಿಮೆಯಾಗಿ ಪೆಟ್ರೋಲ್‌, ಡೀಸೆಲ್‌ ದರಗಳು ಇಳಿಯಲು ಸಾಧ್ಯವಿದೆ ಎಂದು ಗಡ್ಕರಿ ಹೇಳಿದರು. 

ಗಡ್ಕರಿ ಅವರು ದುರ್ಗ್‌ ಜಿಲ್ಲೆಯ  ಛರೋಡಾ ದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದರು. 4,251 ಕೋಟಿ ರೂ. ಮೌಲ್ಯದ ಎಂಟು ನಿರ್ಮಾಣ ಕಾಮಗಾರಿಗಳಿಗೆ ಅವರು ಶಿಲಾನ್ಯಾಸ ಮಾಡಿದರು. ಇವುಗಳಲ್ಲಿ ರಾಯಪುರ - ದುರ್ಗ್‌ ಸೇರಿದಂತೆ ಒಟ್ಟು ನಾಲ್ಕು  ಫ್ಲೈ ಓವರ್‌ ಗಳು ಸೇರಿವೆ. 


Trending videos

Back to Top