CONNECT WITH US  

ಪುಣೆ: ಶಾಹು ಮಹಾರಾಜ್‌ ಪ್ರತಿಮೆ ಅನಾವರಣ

ಪುಣೆ: ಕೊಲ್ಹಾಪುರದ ಗತ ಅರಸು ಛತ್ರಪತಿ ಶಾಹು ಮಹಾರಾಜ್‌ ಅವರ ಪ್ರತಿಮೆಯನ್ನು ಇಲ್ಲಿನ ಕೆನ್ನಡಿ ರಸ್ತೆ ಕ್ಯಾಂಪಸ್‌ನಲ್ಲಿರುವ ಆಲ್‌ ಇಂಡಿಯಾ ಶ್ರೀ ಶಿವಾಜಿ ಮೆಮೊರಿಯಲ್‌ ಸೊಸೈಟಿ ಆವರಣದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅನಾವರಣಗೊಳಿಸಿದರು.

ಪ್ರಗತಿಪರ ಮತ್ತು ಸುಧಾರಣಾ ನೀತಿ ಧೋರಣೆಗಳಿಂದ ಪ್ರಸಿದ್ಧರಾಗಿದ್ದ ಶಾಹು ಮಹಾರಾಜ್‌ ಅವರನ್ನು ಕೊಂಡಾಡಿದ ಪ್ರಣವ್‌ ಮುಖರ್ಜಿ, ಅನೇಕ ವರ್ಷಗಳ ಹಿಂದೆಯೇ ಹಿಂದುಳಿದ ವರ್ಗದವರಿಗಾಗಿ ಶಾಹು ಮಹಾರಾಜ್‌ ಮೀಸಲಾತಿ ಜಾರಿಗೆ ತಂದಿದ್ದರು ಎಂದರು.

ಶಿಕ್ಷಣ, ಹಿಂದುಳಿದ ವರ್ಗದವರ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಛತ್ರಪತಿ ಶಾಹು ಮಹಾರಾಜ್‌ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ ಅವರು, ತನ್ನ ರಾಜ್ಯದಲ್ಲಿ ಹಿಂದುಳಿದ ವರ್ಗದವರಿಗೆ ಸರಕಾರಿ ಸೇವೆಗಳಲ್ಲಿ ಶೇ. 50ರಷ್ಟು ಸ್ಥಾನ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೆ ಶಿಕ್ಷಣ ಒದಗಿಸುವ ಮೂಲಕ ಸಮಾನತೆಯನ್ನು ಪ್ರತಿಪಾದಿಸಿದ್ದರು. ಬಾಲ್ಯ ವಿವಾಹ ನಿಲ್ಲಿಸಲು ಕ್ರಮ ತೆಗೆದುಕೊಂಡಿದ್ದ ಶಾಹು ಮಹಾರಾಜ್‌ ಮಹಾನ್‌ ಸಮಾಜ ಸುಧಾರಕರಾಗಿದ್ದರು. ಮಹಿಳೆಯರ ಶಿಕ್ಷಣದ ವಿಚಾರದಲ್ಲೂ ಕಾಳಜಿ ವಹಿಸಿದ್ದರು. ಅವರು ಒಂದು ರೀತಿಯಲ್ಲಿ ಸಂತ ಮತ್ತು ರಾಜರಾಗಿದ್ದರು ಎಂದು ಕೊಂಡಾಡಿದರು.

ರಾಜ್ಯಪಾಲ ಕೆ.ಶಂಕರ್‌ನಾರಾಯಣನ್‌, ಮುಖ್ಯಮಂತ್ರಿ ಪೃಥ್ವೀರಾಜ್‌ ಚವಾಣ್‌, ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಮೊದಲಾದವರು ಉಪಸ್ಥಿತರಿದ್ದರು.

Trending videos

Back to Top