CONNECT WITH US  

ಸೇವಾವಧಿಯಲ್ಲಿ ಹೆಚ್ಚಿನ ಶಿಕ್ಷಣ ಪಡೆದರೆ ಪ್ರೋತ್ಸಾಹಧನ

ನವದೆಹಲಿ: ಸೇವಾವಧಿಯಲ್ಲಿದ್ದಾಗಲೇ ಹೆಚ್ಚಿನ ಶಿಕ್ಷಣ ಪೂರೈಸುವ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಇಂಥ ನೌಕರರಿಗೆ ಹೆಚ್ಚಿನ ಪ್ರೋತ್ಸಾಹ ಧನ ಸಿಗುವಂತಾಗಲು ಈಗಿನ ನಿಯಮಗಳಿಗೆ ತಿದ್ದುಪಡಿ ತರಲು ಚಿಂತನೆ ನಡೆಸಿದೆ. ಈ ಬಗ್ಗೆ ವಿವಿಧ ಸಚಿವಾಲಯಗಳಿಂದ ಸಲಹೆ-ಸೂಚನೆ ಯಾಚಿಸಿದೆ.

ಹೊಸ ನಿಯಮ ಜಾರಿಗೆ ಬಂದರೆ ಸೇವಾವಧಿ ಸಂದರ್ಭದಲ್ಲೇ ಹೆಚ್ಚಿನ ಶಿಕ್ಷಣ ಪೂರೈಸಿದ ನೌಕರರಿಗೆ 2 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೂ ಪ್ರೋತ್ಸಾಹ ಧನ ಸಿಗಲಿದೆ. ತಿದ್ದುಪಡಿಯು ಅಂಗೀಕಾರವಾದರೆ ಇನ್ನಷ್ಟು ಶೈಕ್ಷಣಿಕ ಅರ್ಹತೆಗಳನ್ನು ಈಗಿನ ಅರ್ಹತೆಗಳೊಂದಿಗೆ ಹೆಚ್ಚುವರಿಯಾಗಿ ಸೇರಲಿವೆ. ಪ್ರೋತ್ಸಾಹಧನದ ಪ್ರಮಾಣವು ಅವರವರ ಶೈಕ್ಷಣಿಕ ಅರ್ಹತೆ ಮೇಲೆ ನಿರ್ಧಾರವಾಗುತ್ತದೆ. ಸೇವಾವಧಿ ವೇಳೆ ಎಂಜಿನಿಯರಿಂಗ್‌ ಮುಗಿಸಿದವರಿಗೆ 8 ಸಾವಿರ ರೂ., ಪಿಎಚ್‌ಡಿ ಮುಗಿಸಿದವರಿಗೆ 10000ರೂ., ಸಣ್ಣಪುಟ್ಟ ಶೈಕ್ಷಣಿಕ ಅರ್ಹತೆ ಪೂರೈಸಿದವರಿಗೆ 2000 ರೂ. ಪ್ರೋತ್ಸಾಹಧನ ನೀಡುವ ಪ್ರಸ್ತಾಪ ಇದೆ.

Trending videos

Back to Top