CONNECT WITH US  

ರೂಪಾಯಿ 20 ತಿಂಗಳು, ಸೆನ್ಸೆಕ್ಸ್‌ ಆರೂವರೆ ತಿಂಗಳ ಕನಿಷ್ಠಕ್ಕೆ

ಮುಂಬೈ: ಸತತ 5ನೇ ದಿನವೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ಗುರುವಾರ 69 ಪೈಸೆ ಕುಸಿಯುವ ಮೂಲಕ 64.23 ರೂ.ಗೆ ತಲುಪಿದೆ. ಇದು ಕಳೆದ 20 ತಿಂಗಳಲ್ಲೇ ಡಾಲರ್‌ ಎದುರು ರೂಪಾಯಿಯ ಕನಿಷ್ಠ ಮೌಲ್ಯವಾಗಿದೆ. ಮತ್ತೂಂದೆಡೆ ಸೆನ್ಸೆಕ್ಸ್‌ ಕೂಡಾ 118 ಅಂಕ ಕುಸಿತ ಕಾಣುವ ಮೂಲಕ ಆರೂವರೆ ತಿಂಗಳ ಕನಿಷ್ಠ ಮಟ್ಟ ತಲುಪಿದೆ.

ರೂಪಾಯಿಗೆ ಹೊಡೆತ: ಆಮದುದಾರರು ಮತ್ತು ಬ್ಯಾಂಕ್‌ಗಳು ಭಾರೀ ಪ್ರಮಾಣದಲ್ಲಿ ಡಾಲರ್‌ ಖರೀದಿಗೆ ಮುಂದಾದ ಹಿನ್ನೆಲೆಯಲ್ಲಿ ಗುರುವಾರ ಕೂಡಾ ಡಾಲರ್‌ ಎದುರು ರೂಪಾಯಿ ಮೌಲ್ಯ 69 ಪೈಸೆ ಕುಸಿತ ಕಂಡು 64.23 ರೂ.ಗೆ ತಲುಪಿದೆ. ಇದು ಕಳೆದ 20 ತಿಂಗಳಲ್ಲೇ ರೂಪಾಯಿಯ ಕನಿಷ್ಠ ಮೌಲ್ಯವಾಗಿದೆ. ಕಳೆದ 5 ವಹಿವಾಟು ದಿನಗಳಲ್ಲಿ ರೂಪಾಯಿ ಮೌಲ್ಯ 108 ಪೈಸೆಯಷ್ಟು ಕಡಿಮೆಯಾಗಿದೆ.

ಡಾಲರ್‌ಗೆ ಬೇಡಿಕೆ ಹೆಚ್ಚಾಗಿದ್ದು ಅಡ್ಡಿ ಕೂಡಾ ರೂಪಾಯಿ ಮೌಲ್ಯ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಸೆನ್ಸೆಕ್ಸ್‌ ಮತ್ತೆ ಬಿತ್ತು: ಬುಧವಾರವಷ್ಟೇ 723 ಅಂಕಗಳ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಗುರುವಾರ 118 ಅಂಕ ಕುಸಿಯುವ ಮೂಲಕ 26,599 ಅಂಕಗಳಿಗೆ ತಲುಪಿದೆ. ಇದು ಆರೂವರೆ ತಿಂಗಳಲ್ಲೇ ಕನಿಷ್ಠ. ಸುಧಾರಣಾ ಮಸೂದೆಗಳಿಗೆ ಎದುರಾದ ಕಂಟಕ, ತೆರಿಗೆ ವಿವಾದ- ಇಳಿಕೆಗೆ ಕಾರಣ.

Trending videos

Back to Top