CONNECT WITH US  

ಬೈಕ್‌ ಇಂಜಿನ್‌ ಹೆಲಿಕಾಪ್ಟರ್‌: ನಕ್ಸಲ್‌ ತಂತ್ರ! ಲಘು ಹಾರಾಟದ ಉದ್ದೇಶ

ಗಯಾ: ಇಷ್ಟು ದಿನ ಹೊಂಚು ಹಾಕಿ ಪೊಲೀಸರ ಮೇಲೆ ದಾಳಿ ನಡೆಸುವುದು, ಶಸ್ತ್ರಾಸ್ತ್ರಗಳನ್ನು ಕದ್ದೊಯ್ಯುವುದು ಮತ್ತು ಸೇನಾ ಕಾಪ್ಟರ್‌ಗಳ ಮೇಲೆ ದಾಳಿ ನಡೆಸುವುದನ್ನು ಮಾಡುತ್ತಿದ್ದ ನಕ್ಸಲರು, ಇದೀಗ ಸ್ವತಃ ತಾವೇ ಲಘು ಹೆಲಿಕಾಪ್ಟರ್‌ ಮತ್ತು ರಿಮೋಟ್‌ ಚಾಲಿತ ಸ್ಫೋಟಕಗಳನ್ನು ತಯಾರಿಸಲು ಯೋಜನೆ ರೂಪಿಸಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇದು ಬಿಹಾರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ನಕ್ಸಲರ ಉಪಟಳವನ್ನು ಮಟ್ಟಹಾಕಲು ಹರಸಾಹಸ ಪಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಾರೀ ಆತಂಕ ತಂದಿದೆ. ಲಘು ಹಾರಾಟದ ಉದ್ದೇಶ

ಕಳೆದ ವಾರವಷ್ಟೇ ಬಿಹಾರದ ಗಯಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಮೂವರು ನಕ್ಸಲರನ್ನು ಬಂಧಿಸಲಾಗಿತ್ತು. ಬಂಧಿತ ನಕ್ಸಲರಿಂದ ಶಸ್ತ್ರಾಸ್ತ್ರಗಳ ಜೊತೆ ಸಾಕಷ್ಟು ಪ್ರಮಾಣದ ಲಿಖೀತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ನಕ್ಸಲರು, ಮೋಟಾರ್‌ ಸೈಕಲ್‌ ಇಂಜಿನ್‌ ಮತ್ತು ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಲಘು ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಯತ್ನಿಸಿರುವುದು ತಿಳಿದು ಬಂದಿದೆ.

ದಟ್ಟ ಮತ್ತು ಕಡಿದಾದ ಅರಣ್ಯ ಪ್ರದೇಶ ದಲ್ಲಿ ತೀರಾ ಸಣ್ಣ ಅವಧಿಯ ಪ್ರಯಾಣಕ್ಕೆ ಅನುವಾಗುವಂತಹ ಹೆಲಿಕಾಪ್ಟರ್‌ ಸಿದ್ಧಪಡಿಸು ವುದು ನಕ್ಸಲರ ಯೋಜನೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಾಪ್ಟರ್‌ ಏಕೆ?: ನಕ್ಸಲರ ಬಳಿ ಲಭ್ಯವಾದ ಲಿಖೀತ ದಾಖಲೆಗಳು ಅವರ ಮುಂದಿನ ಕಾರ್ಯತಂತ್ರಗಳ ಮೇಲೆ ಬೆಳಕು ಚೆಲ್ಲಿವೆ. ಅದರನ್ವಯ, ತಾವು ಕಾರ್ಯನಿರ್ವಹಿಸುತ್ತಿರುವ ಒಂದು ಅರಣ್ಯದಿಂದ, ಸಮೀಪದ ಇನ್ನೊಂದು

ಅರಣ್ಯ ಪ್ರದೇಶಕ್ಕೆ ತೆರಳಲು ಹೆಲಿಕಾಪ್ಟರ್‌ ತಯಾರಿಸಲು ನಕ್ಸಲರು ಯೋಜನೆ ರೂಪಿಸಿ ದ್ದಾರೆ. ಇಬ್ಬರು ಮಾತ್ರವೇ ಕೂರಬಹುದಾದ ಇಂಥ ಮಿನಿ ಕಾಪ್ಟರ್‌ಗಳು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ (ಉದಾಹರಣೆಗೆ: ಅರಣ್ಯ

ಪ್ರದೇಶದಲ್ಲಿ ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ) ತ್ವರಿತವಾಗಿ ತೆರಳಲು ಅನುಕೂಲ ವಾಗುತ್ತದೆ ಎಂಬುದು ನಕ್ಸಲರ ನಂಬುಗೆ. ಹೀಗಾಗಿ ಹೀರೋ ಹೊಂಡಾ ಮೋಟಾರ್‌ ಬೈಕ್‌ನ ಇಂಜಿನ್‌ ಅನ್ನು ಬಳಸಿ ಕಾಪ್ಟರ್‌ ನಿರ್ಮಿಸಲು ಅವರು ಯೋಜಿಸಿದ್ದರು. ಆದರೆ ಇಂಥ ಕಾಪ್ಟರ್‌ ನಿರ್ಮಾಣಕ್ಕೆ ಸ್ಕೆಚ್‌ ತಯಾರಿಸಲಾಗಿತ್ತೇ ಇಲ್ಲವೇ ಎಂಬುದರ ಬಗ್ಗೆ ಸಿಆರ್‌ಪಿಎಫ್ ಸಿಬ್ಬಂದಿ ಮಾಹಿತಿ ನೀಡಿಲ್ಲ.

ಇನ್ನು ಕಾಪ್ಟರ್‌ಗಳ ಜೊತೆಗೆ ಮೋಟಾರ್‌ ಶೆಲ್‌ಗ‌ಳು ಮತ್ತು ರಿಮೋಟ್‌ ಚಾಲಿತ ಸ್ಫೋಟಕಗಳನ್ನು ತಯಾರಿಸಲು ಯತ್ನ ನಡೆಸಿರುವುದು ಕೂಡ ಕಂಡು ಬಂದಿದೆ. ಈ ಹಿಂದೆಯೂ ಯತ್ನ ನಡೆದಿತ್ತು: ಕೆಲ ವರ್ಷಗಳ ಹಿಂದೆ ಇದೇ ರೀತಿಯ ಹೆಲಿಕಾಪ್ಟರ್‌ವೊಂದನ್ನು ಸಿದ್ಧಪಡಿಸುವ ನಕ್ಸಲರ ಸಂಚನ್ನು ಪೊಲೀಸರು ಬಯಲಿಗೆಳೆದಿದ್ದರು. ಆದರೆ, ಅದು ನಕ್ಸಲರ ಆರಂಭಿಕ ಪ್ರಯತ್ನವಾಗಿದ್ದರಿಂದ ಹೆಲಿಕಾಪ್ಟರ್‌ ಹಾರುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೆ, ನಕ್ಸಲರು ರಾಕೆಟ್‌ ಸಿದ್ಧಪಡಿಸುವ ಪ್ರಯತ್ನಕ್ಕೂ ಮುಂದಾಗಿದ್ದರು. ಆದರೆ, ಅದನ್ನು ತಯಾರಿಸುವಾಗಲೇ ಸ್ಫೋಟಗೊಂಡು ಹಲವು ನಕ್ಸಲರು ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Trending videos

Back to Top