CONNECT WITH US  

​ಆಪರೇಷನ್‌ ಲಂಚ : ಕೇಜ್ರಿವಾಲ್‌ ಮಗಳ ವಿರುದ್ದ ದೂರು ದಾಖಲು

 ನವದೆಹಲಿ : ಸರ್ಕಾರಿ ಅಧಿಕಾರಿಯೊಬ್ಬರಿಗೆ ಲಂಚ ನೀಡಲು ಮಂದಾದ ಆರೋಪದಲ್ಲಿ ದೆಹಲಿ ಮುಖ್ಯಮಂತ್ರಿ  ಅರವಿಂದ ಕೇಜ್ರಿವಾಲ್‌ ಅವರ ಪುತ್ರಿ ಹರ್ಷಿತಾ ಅವರ ವಿರುದ್ಧ ದೆಹಲಿ ಪೊಲೀಸ್‌ ಆಯಕ್ತರು ಹಾಗೂ ಭೃಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಲಾಗಿದೆ. 

ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಒಮೇಶ್‌ ಸೈಗಲ್‌ ಅವರು ಭೃಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದು,ಕೇಜ್ರಿವಾಲ್‌ ಅವರ ಹೇಳಿಕೆ ಯನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

ಸೆಕ್ಷನ್‌ 12 ಭೃಷ್ಟಾಚಾರ ತಡೆ ಖಾಯ್ದೆಯಡಿಯಲ್ಲಿ ಅಪರಾಧಕ್ಕೆ ಪ್ರಚೋದಿಸುವುದು ಅಪರಾಧವಾಗಿದ್ದು, ಅಪರಾಧ ಎಸಗುವಂತೆ ಪ್ರಚೋದನೆ ನೀಡಿದವರಿಗೂ ಶಿಕ್ಷೆಯಾಗಬೇಕಿದೆ ಎಂದು ಸೈಗಲ್‌ ಉಲ್ಲೇಖೀಸಿದ್ದಾರೆ. 

ಭಗತ್‌ ಸಿಂಗ್‌ ಕ್ರಾಂತಿ ಸೇನೆಯ ಅಧ್ಯಕ್ಷ ತೇಜಿಂದರ್‌ ಸಿಂಗ್‌ ಬಗ್ಗಾ ಅವರು ದೆಹಲಿ ಪೊಲೀಸ್‌ ಆಯುಕ್ತರಿಗೆ ಕೇಜ್ರಿವಾಲ್‌ ಮಾಡಿರುವ ಭಾಷಣದ ಸಿಡಿ ಸಹಿತ ದೂರು ನೀಡಿದ್ದು,ಲಂಚ ನೀಡಲು ಮುಂದಾದ  ಹರ್ಷಿತಾ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಕೇಜ್ರಿವಾಲ್‌ ಅವರು  ಮೇ 17 ರಂದು ಆಟೋಚಾಲಕರ ಸಭೆ ಉದ್ದೇಶಿಸಿ ಮಾತನಾಡುವ ವೇಳೆ  ಭ್ರಷ್ಟಾಚಾರ ಕುರಿತಾದ ತಮ್ಮ ಮಗಳ ಇತ್ತೀಚಿನ ಅನುಭವವನ್ನು ಹಂಚಿಕೊಂಡು , "ತಮ್ಮ ಮಗಳು ಕಲಿಕಾ ಚಾಲನ ಪರವಾನಗಿ ಪಡೆಯಲು ಕಚೇರಿಗೆ ಹೋಗಿದ್ದಾಗ, ತನ್ನ ಹೆಸರು ಬಹಿರಂಗಪಡಿಸದೇ ತಕ್ಷಣ ಪರವಾನಗಿ ನೀಡಲು ಅಧಿಕಾರಿಯೊಬ್ಬರಿಗೆ ಲಂಚದ ಆಮಿಷ ಒಡ್ಡಿದಳು. ನನ್ನ ಹತ್ತಿರ ಕೆಲ ದಾಖಲೆ ಇಲ್ಲ. ಆದರೂ ದುಡ್ಡು ಪಡೆದು ಡಿ.ಎಲ್‌. ನೀಡಿ ಎಂದಳು. ಅಧಿಕಾರಿಯು ಆಕೆ ಎಲ್ಲಾದರೂ ಮೊಬೈಲ್‌ ಫೋನಿನಲ್ಲಿ ಸ್ಟಿಂಗ್‌ ಆಪರೇಶನ್‌ ಮಾಡುತ್ತಿದ್ದಾಳೆಯೆ ಎಂದು ಗಮನಿಸಿದ. ಬಳಿಕ ಅಧಿಕಾರಿ ಲಂಚಕ್ಕೆ ಒಪ್ಪಿಕೊಳ್ಳಲಿಲ್ಲ. ಆಕೆ ಹೆಚ್ಚು ಮೊತ್ತದ ಆಮಿಷ ಒಡ್ಡಿದರೂ ಅಧಿಕಾರಿ ಜಗ್ಗ ಲಿಲ್ಲ. ಇದು ನನ್ನ ಮಗಳೊಬ್ಬಳ ಅನುಭವವಲ್ಲಿ ಬಹುತೇಕರಿಗೆ ಈ ಅನುಭವವಾಗಿದೆ' ಎಂದು ಹೇಳಿದ್ದರು. 

ಬಳಿಕ ತಮ್ಮ ಮಗಳು ಎಲ್ಲ ದಾಖಲೆಗಳನ್ನು ತಂದಾಗ ಆಕೆಯ ಗುರುತು ಅಧಿಕಾರಿಗೆ ತಿಳಿಯಿತು. ಈಕೆ ಸಿಎಂ ಮಗಳೆ ಎಂದು ಹೌಹಾರಿದರು. ಇಡೀ ಇಲಾಖೆಯೇ ಬಂದು ಆಕೆಗೆ ಡಿಎಲ್‌ ಮಾಡಿಸಿಕೊಡಲು ಸಹಕರಿಸಿತೆಂದು ಕೇಜ್ರಿವಾಲ್‌ ಹೇಳಿದ್ದರು.

Trending videos

Back to Top