CONNECT WITH US  

ದಾರಿ ತಪ್ಪಿದ ಮಹಾರಾಷ್ಟ್ರ ರಾಜ್ಯಪಾಲರ ಹೆಲಿಕಾಪ್ಟರ್‌!

ಮುಂಬಯಿ: ಮಹಾ ರಾಷ್ಟ್ರ ರಾಜ್ಯಪಾಲ ಸಿ.ಎಚ್‌.ವಿದ್ಯಾಸಾಗರ ರಾವ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ದಾರಿ ತಪ್ಪಿ ನಾಂದೇಡ್‌ನ‌ ಕಿನ್ವತ್‌ನ ಬದಲು ತೆಲಂಗಾಣದ ಗಡಿ ತಲುಪಿದ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ.

ಹೆಲಿಕಾಪ್ಟರ್‌ ಹಾದಿ ತಪ್ಪಿದ ಪರಿಣಾಮ ರಾಜ್ಯಪಾಲರು ಕಿನ್ವತ್‌ನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆಸುಮಾರು ಅರ್ಧ ತಾಸಿನಷ್ಟು ವಿಳಂಬವಾಗಿ ಆಗಮಿಸಿದರು.

ದಟ್ಟಾರಣ್ಯ ಮತ್ತು ಕಣಿವೆಗಳಿಂದಕೂಡಿದ ದುರ್ಗಮ ಪ್ರದೇಶದಿಂದಾಗಿ ಹೆಲಿಕಾಪ್ಟರ್‌ ಚಲಾಯಿಸುತ್ತಿದ್ದ ಪೈಲಟ್‌ಗೆ ದಾರಿ ತಪ್ಪಿದ್ದರಿಂದಾಗಿ ಈ ಘಟನೆ ಸಂಭವಿಸಿತು. 

ಹೆಲಿಕಾಪ್ಟರ್‌ ನಿಗದಿತ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಚಲಿಸುತ್ತಿರುವುದನ್ನು ಕಂಡುಕೊಂಡ ಪೈಲಟ್‌ ತತ್‌ಕ್ಷಣವೇ ಹೆಲಿಕಾಪ್ಟರ್‌ ಅನ್ನು ನಿಗದಿತ ಸ್ಥಳದತ್ತ ತಿರುಗಿಸಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು ಎಂದು ರಾಜಭವನದ ಮೂಲಗಳು ತಿಳಿಸಿವೆ.

Trending videos

Back to Top