CONNECT WITH US  

ಮತ್ತೆ ಪರೋಲ್‌ಗೆ ಸಂಜಯ್‌ ದತ್‌ ಅರ್ಜಿ ಸಲ್ಲಿಕೆ

ಮುಂಬೈ: ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ 42 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್‌ ದತ್‌, ಪರೋಲ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯಾವ ಕಾರಣಕ್ಕಾಗಿ ದತ್‌ ಪರೋಲ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಸಾಮಾನ್ಯವಾಗಿ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾದ ವೇಳೆ ಮತ್ತು ಕೈದಿಯ ಹಾಜರಿ ಅವಶ್ಯಕತೆ ಇದೆ ಸಂದರ್ಭದಲ್ಲಿ ಮಾತ್ರ ಪರೋಲ್‌ ನೀಡಲಾಗುತ್ತದೆ. ಹೀಗಾಗಿ ದತ್‌ ಸಲ್ಲಿಸಿರುವ ಅರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿದ ಬಳಿಕವಷ್ಟೇ ವಿಭಾಗೀಯ ಆಯುಕ್ತರು ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯ ಪುಣೆಯ ಯೆರವಾಡಾ ಜೈಲಿನಲ್ಲಿರುವ ದತ್‌ಗೆ 2013ರ ಅಕ್ಟೋಬರ್‌ನಲ್ಲಿ ಫ‌ರ್ಲೋ ಪಡೆದುಕೊಂಡಿದ್ದರು. ಬಳಿಕ ಅದನ್ನು 14 ದಿನ ವಿಸ್ತರಿಸಲಾಗಿತ್ತು. 2013ರ ಡಿಸೆಂಬರ್‌ನಲ್ಲಿ ದತ್‌ಗೆ 30 ದಿನಗಳ ಪರೋಲ್‌ ನೀಡಲಾಗಿತ್ತು. ನಂತರ ಅದನ್ನು 2 ಬಾರಿ ವಿಸ್ತರಿಸಲಾಗಿತ್ತು. ಹೀಗೆ ಜೈಲು ಸೇರಿದ ಮೇಲೆ ಒಟ್ಟಾರೆ 146 ದಿನ ಅವರು ವಿವಿಧ ಕಾರಣ ನೀಡಿ ಜೈಲಿನಿಂದ ಹೊರಗೆ ಇದ್ದರು.

Trending videos

Back to Top