ಹೆಲಿಕಾಪ್ಟರ್ ಅವಘಡ: ಸ್ವಲ್ಪದರಲ್ಲೇ ಗಡ್ಕರಿ ಪಾರು

ಹಾಲ್ಡಿಯಾ (ಪಶ್ಚಿಮ ಬಂಗಾಳ): ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಲಿಕಾಪ್ಟರ್ ದುರತದಿಂದ ಬುಧವಾರ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ಗಡ್ಕರಿ ಸ್ವಾಗತಕ್ಕೆಂದು ಹಾಕಿದ್ದ ರೆಡ್ಕಾಪೆìಟ್ಗಳು ಹೆಲಿಕಾಪ್ಟರ್ನ ಪಂಕಗಳಿಗೆ ಸಿಲುಕಿಕೊಂಡಿತು. ಇದರಿಂದ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ತೊಂದರೆಯಾಯಿತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.
ಲ್ಯಾಂಡಿಂಗ್ ಆಗುವ ವೇಳೆ ಬಟ್ಟೆ (ರೆಡ್ಕಾಪೆìಟ್) ಹೆಲಿಕಾಪ್ಟರ್ನ ರೆಕ್ಕೆಗಳಿಗೆ ಸಿಲುಕಿಕೊಂಡಿತು. ಆದರೆ, ಯಾವುದೇ ಅನಾಹುತವಾಗಿಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ಗಡ್ಕರಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುವ ಪ್ರದೇಶದಲ್ಲಿ ಯಾವುದೇ ಬಾವುಟ ಕಟ್ಟದಂತೆ, ರೆಡ್ಕಾಪೆìಟ್ ಹಾಸದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.