CONNECT WITH US  

ಇದು ರೀಯಲ್; ಈ ಸಲ್ಮಾನ್ ಖಾನ್ 10 ವರ್ಷದಲ್ಲಿ 57 ಕೊಲೆಗೈದಿದ್ದಾನೆ!

ಬರೇಲಿ: ಹತ್ಯೆ ನಡೆಯದೇ ಯಾವುದೇ ದರೋಡೆ ಕೆಲಸ ಪೂರ್ಣವಾಗುವುದಿಲ್ಲ...ಇದು ಸಲ್ಮಾನ್ ಖಾನ್ ತನಿಖೆ ವೇಳೆ ಉತ್ತರಪ್ರದೇಶ ಪೊಲೀಸರಿಗೆ ನೀಡಿದ ಉತ್ತರ. ಹಾಗಂತ ಈ ಸಲ್ಮಾನ್ ಸಿನಿಮಾ ನಟ ಅಲ್ಲ. ನಟ ಸಲ್ಮಾನ್ ರೀಲ್ ನಲ್ಲಿ ಕೊಲೆ ಮಾಡಿದ್ದರೆ, ಈ ನಟೋರಿಯಸ್ ದರೋಡೆಕೋರ ಸಲ್ಮಾನ್ ಖಾನ್ ಕಳೆದ 10 ವರ್ಷದಲ್ಲಿ 57 ಮಂದಿಯನ್ನು ಹತ್ಯೆಗೈದಿರುವ ಆಘಾತಕಾರಿ ವಿಷಯವನ್ನು ಹೊರಹಾಕಿದ್ದಾನೆ.

ತನ್ನ 16ನೇ ವಯಸ್ಸಿನಲ್ಲಿ ಸಲ್ಮಾನ್ ಮೊದಲ ಮರ್ಡರ್ ಕೆಲಸ ಮಾಡಿಬಿಟ್ಟಿದ್ದ. ಹೀಗೆ ಮುಂದುವರಿದ ಆತ ಹತ್ತು ವರ್ಷಗಳಲ್ಲಿ ನಟೋರಿಯಸ್ ದರೋಡೆಕೋರನಾಗಿಬಿಟ್ಟಿದ್ದ, ಜೊತೆತೆ ರೋಹಿಲ್ ಖಂಡ್ ಮೂಲದ ಚಾಯ್ಮಾರ್ ಗ್ಯಾಂಗ್ ಲೀಡರ್ ಆಗಿ ಬೆಳೆದು ಬಿಟ್ಟಿದ್ದ ಎಂಬ ಅಂಶ ಉತ್ತರಪ್ರದೇಶ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.

ಪೊಲೀಸ್ ತನಿಖೆ ವೇಳೆ ಆತ ಕಳೆದ 10 ವರ್ಷಗಳಲ್ಲಿ 57 ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಆತನ ವಯಸ್ಸು ಕೇವಲ 26! ಹಾಗಾಗಿ ಈ ಸಲ್ಮಾನ್ ಖಾನ್ ಭಾರತದ ಅತ್ಯಂತ ಕಿರಿಯ ಕುಖ್ಯಾತ ಸರಣಿ ಹಂತಕನಾಗಿದ್ದಾನೆ. 

ವಿಚಾರಣೆ ವೇಳೆ ಸಲ್ಮಾನ್ ತನ್ನ ರಾಕ್ಷಸಿ ಕೃತ್ಯದ ವಿವರವನ್ನು ಒಂದೊಂದಾಗಿಯೇ ಬಾಯ್ಬಿಟ್ಟಿದ್ದಾನೆ. ಬರೇಲಿ, ಬಾದೌನ್, ಪಿಲಿಭಿಟ್, ಕಾನೌಜ್, ಶಹಜಹಾನ್ ಪುರ್, ಕಾನ್ಪುರ್, ಹಾರ್ಡೊಯಿ ಹೀಗೆ ಹಲವು ಜಿಲ್ಲೆಗಳಲ್ಲಿ ನಡೆಸಿರುವ ದರೋಡೆ, ಹತ್ಯೆಯ ವಿವರವನ್ನು ನೀಡಿದ್ದಾನೆ ಎಂದು ಬರೇಲಿ ಸರ್ಕಲ್ ಇನ್ಸ್ ಪೆಕ್ಟರ್ ಅಸಿತ್ ಶ್ರೀವಾತ್ಸವ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಇವರ ಗ್ಯಾಂಗ್ ಮೊದಲು ಮನೆಯನ್ನು ಗುರುತಿಸಿ ಅಲ್ಲಿಗೆ ಎಂಟ್ರಿ ಕೊಡುತ್ತಿದ್ದರು. ಮೊದಲು ಸಾಕ್ಷಿಯನ್ನು ನಾಶಮಾಡುತ್ತಿದ್ದರಂತೆ, ನಂತರ ನಗದು ಹಾಗೂ ಚಿನ್ನಾಭರಣ ದೋಚುತ್ತಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲಿದ್ದವರನ್ನು ಹತ್ಯೆಯುತ್ತಿದ್ದರು ಎಂದು ಅವರು ವಿವರಿಸಿದ್ದಾರೆ. ಸುಮಾರು 50 ದರೋಡೆ ಪ್ರಕರಣ ನಡೆಸಿರುವ ಬಗ್ಗೆ ಸಲ್ಮಾನ್ ತಪ್ಪೊಪ್ಪಿಕೊಂಡಿದ್ದಾನೆ.

ಸಲ್ಮಾನ್ ನ ಗ್ಯಾಂಗ್ ನಲ್ಲಿರುವವರೆಲ್ಲಾ ಅನಕ್ಷರಸ್ಥರು. ಅಷ್ಟೇ ಅಲ್ಲ ಇದರಲ್ಲಿ ಹಿಂದೂಗಳೂ ಇದ್ದಾರೆ. ಹಾಗಾಗಿ ಹಿಂದೂ, ಮುಸ್ಲಿಂ ಹಬ್ಬಗಳನ್ನು ಒಟ್ಟಾಗಿ ಸೇರಿಕೊಂಡು ಆಚರಿಸುತ್ತಿದ್ದರಂತೆ. ಇದೀಗ ಪೊಲೀಸರು ಅವರ ಅಡ್ಡಾಗಳನ್ನು ಸೆದೆಬಡಿಯುವ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Trending videos

Back to Top