CONNECT WITH US  

ಮಾಧ್ಯಮಗಳಿಗೆ ಇಸ್ರೇಲ್‌ ಕತೆ ಹೇಳುತ್ತಿದ್ದ ಕಲಾಂ

ಸ್ವಾರ್ಥಕ್ಕೆ ಮಾಧ್ಯಮಗಳನ್ನು ಬೈಯುವಂತೆ ಕಲಾಂ ಯಾವತ್ತೂ ಅವುಗಳನ್ನು ನಿಂದಿಸಿದವರಲ್ಲ. ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದು ಅವುಗಳ ಮೇಲೆ ಸುಖಾಸುಮ್ಮನೆ ಹರಿಹಾಯ್ದು ಹೆಗಲು ತೊಳೆದುಕೊಂಡವರಲ್ಲ. ಆದರೂ ಅವರಿಗೆ ಮಾಧ್ಯಮಗಳ ಮೇಲೆ ಸಣ್ಣದೊಂದು ಬೇಸರವಿದ್ದುದು ಮಾತ್ರ ಸುಳ್ಳಲ್ಲ. ಅದು-ನಮ್ಮ ದೇಶದ ಮಾಧ್ಯಮಗಳೇಕೆ ಬರೀ ಋಣಾತ್ಮಕ ಸುದ್ದಿಗಳನ್ನೇ ವರದಿ ಮಾಡುತ್ತವೆ?

ಈ ಕಳವಳ ಕಲಾಂರ ವೃತ್ತಿ ಜೀವನದುದ್ದಕ್ಕೂ ಇತ್ತು. ನ್ಯೂಸ್‌ಪೇಪರ್‌ ಮತ್ತು ಟೀವಿ ಚಾನೆಲ್‌ಗ‌ಳಲ್ಲಿ ಪ್ರಮುಖ ಸ್ಥಾನದಲ್ಲಿರುವವರು ಮಾತಿಗೆ ಸಿಕ್ಕಾಗ ಅವರು ಈ ಬಗ್ಗೆ ಅನೇಕ ಬಾರಿ ಕಳವಳ ವ್ಯಕ್ತಪಡಿಸಿದ್ದರು. ತಮ್ಮ ಭಾಷಣಗಳಲ್ಲೂ ಮೇಲಿಂದ ಮೇಲೆ ಇದನ್ನು ಪ್ರಸ್ತಾಪಿಸಿದ್ದರು. ನಮ್ಮ ಶಕ್ತಿ ಹಾಗೂ ಸಾಮರ್ಥ್ಯ ಬಗ್ಗೆ, ನಾವು ಸಾಧಿಸಿ ತೋರಿಸಿದ್ದರ ಬಗ್ಗೆ ವರದಿ ಮಾಡಲು ಮಾಧ್ಯಮಗಳೇಕೆ ಹಿಂದೇಟು ಹಾಕುತ್ತವೆ ಎಂದು ಅವರು ಪ್ರಶ್ನಿಸುತ್ತಿದ್ದರು. ನಮ್ಮದು ಮಹಾನ್‌ ದೇಶ. ಇಲ್ಲಿ ಅಚ್ಚರಿ ಹುಟ್ಟಿಸುವಷ್ಟು ಯಶೋಗಾಥೆಗಳಿವೆ. ನಾವು ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು ಗೋಧಿ ಮತ್ತು ಅಕ್ಕಿ ಉತ್ಪಾದಿಸುತ್ತೇವೆ. ರಿಮೋಟ್‌ ಸೆನ್ಸಿಂಗ್‌ ಉಪಗ್ರಹ ತಂತ್ರಜ್ಞಾನದಲ್ಲಿ ಜಗತ್ತಿನಲ್ಲೇ ನಾವು ಮೊದಲಿಗರು. ಡಾ.ಸುದರ್ಶನ್‌ರನ್ನು ನೋಡಿ- ಅವರು ಗುಡ್ಡಗಾಡು ಜನರಿಗೆ ಮಾನವರಂತೆ ಬದುಕಲು ಕಲಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತಂದಿದ್ದಾರೆ. ಇಂತಹುದೇ ಲಕ್ಷಾಂತರ ಗೆಲುವಿನ ಕಥೆಗಳು ನಮ್ಮ ದೇಶದ ಹಾದಿ ಬೀದಿಗಳಲ್ಲಿ ಸಿಗುತ್ತವೆ. ಆದರೂ ಮಾಧ್ಯಮಗಳು ಇವುಗಳನ್ನೆಲ್ಲ ಬಿಟ್ಟು ಋಣಾತ್ಮಕ ವರದಿಗಳನ್ನು ಪ್ರಸಾರ ಮಾಡುತ್ತವೆ. ಹೀಗೇಕೆ? ಮಾಧ್ಯಮಗಳಿಗೆ ಏನಾಗಿದೆ? ಇದು ಕಲಾಂ ಪ್ರಶ್ನೆ. ಮುಂದಿನದನ್ನು ಅವರ ಮಾತುಗಳಲ್ಲೇ ಕೇಳಿ. ನಾನೊಮ್ಮೆ ಇಸ್ರೇಲ್‌ನ ಟೆಲ್‌ ಅವಿವ್‌ನಲ್ಲಿದ್ದೆ. ಆವತ್ತು ದೇಶದಲ್ಲಿ ಅನೇಕ ಬಾಂಬ್‌ ದಾಳಿಗಳಾಗಿದ್ದವು. ಮರುದಿನ ಬೆಳಿಗ್ಗೆ ಕುತೂಹಲದಿಂದ ನ್ಯೂಸ್‌ಪೇಪರ್‌ ಕೈಗೆತ್ತಿಕೊಂಡೆ. ಏನಾಶ್ಚರ್ಯ! ಮುಖಪುಟದಲ್ಲಿ ಕೇವಲ 5 ವರ್ಷಗಳಲ್ಲಿ ಮರುಭೂಮಿಯನ್ನು ಆರ್ಕಿಡ್‌ ಬೆಳೆಯುವ ಹಸಿರು ಭೂಮಿಯನ್ನಾಗಿಸಿದ ಯಹೂದಿಯೊಬ್ಬನೆಯ ಸಾಧನೆಯ ಕತೆಯಿತ್ತು. ಅವನ ಸಾಧನೆಯನ್ನು ನೋಡಿ ಸಾವಿರಾರು ಜನರು ಸ್ಫೂರ್ತಿ ಪಡೆಯುವಂತೆ ವರದಿ ಬರೆಯಲಾಗಿತ್ತು. ಬಾಂಬ್‌ ದಾಳಿಯ ಭಯಾನಕ ವರದಿಗಳು, ಸಾವು ನೋವಿನ ಚೀರಾಟಗಳೆಲ್ಲ ಒಳಪುಟದಲ್ಲಿ ಜಾಗ ಪಡೆದಿದ್ದವು. ಭಾರತದಲ್ಲಾಗಿದ್ದರೆ? ಪತ್ರಿಕೆಗಳ ಮುಖಪುಟದಲ್ಲಿ ರಕ್ತವೇ ಹರಿದಿರುತ್ತಿತ್ತು.

ವಿದೇಶೀ ಮೋಹವೇಕೆ?

ಕಲಾಂ ಯಾವತ್ತೂ ಕೇಳುತ್ತಿದ್ದ ಮತ್ತೂಂದು ಪ್ರಶ್ನೆಯಿದೆ. ಅದೇನೆಂದರೆ- ನಮಗೇಕೆ ಇಷ್ಟೊಂದು ವಿದೇಶೀ ಮೋಹ? ನಮಗೆ ವಿದೇಶದ ಟೀವಿ ಸೆಟ್‌ ಬೇಕು. ಧರಿಸಲು ಫಾರಿನ್‌ ಶಟೇì ಬೇಕು. ನಾವು ಬಳಸುವ ತಂತ್ರಜ್ಞಾನವೆಲ್ಲ ವಿದೇಶದ್ದಾಗಿರಬೇಕು. ಜನರು ವಿದೇಶದಿಂದ ಆಮದಾದ ವಸ್ತುಗಳ ಬಗ್ಗೆ ಈ ಪಾಟಿ ಮೋಹ ಬೆಳೆಸಿಕೊಂಡು ದೇಶೀ ವಸ್ತುಗಳನ್ನು ಕಡೆಗಣಿಸುತ್ತಾರಲ್ಲ, ಹೀಗೇಕೆ ಎಂದು ಅವರು ಯಾವಾಗಲೂ ಕೇಳುತ್ತಿದ್ದರು. ಆತ್ಮಗೌರವ ನಮ್ಮಲ್ಲಿ ಮೂಡುವುದು ನಮ್ಮತನದಲ್ಲಿ ನಮಗಿರುವ ನಂಬಿಕೆಯಿಂದ ಎಂಬುದು ನಮಗೆ ಗೊತ್ತಿಲ್ಲವೇ? ನಾವು ಯಾರನ್ನೂ ಗೆದ್ದಿಲ್ಲ. ನಾವು ಯಾರ ಜಮೀನನ್ನೂ ಕಸಿದುಕೊಂಡಿಲ್ಲ. ನಾವು ಯಾರ ಸಂಸ್ಕೃತಿಯನ್ನೂ ಇತಿಹಾಸವನ್ನೂ ಕಿತ್ತುಕೊಂಡು ಅವರ ಮೇಲೆ ನಮ್ಮ ಜೀವನ ಶೈಲಿಯನ್ನು ಹೇರಲು ಪ್ರಯತ್ನಿಸಿಲ್ಲ. ಏಕೆ? ಏಕೆಂದರೆ ನಾವು ಬೇರೆಯವರ ಸ್ವಾತಂತ್ರÂವನ್ನು ಗೌರವಿಸುತ್ತೇವೆ. ಹಾಗೆಯೇ ನಮ್ಮನ್ನೂ ನಾವು ವಿದೇಶೀ ಮೋಹದಿಂದ ಸ್ವತಂತ್ರಗೊಳಿಸಿಕೊಳ್ಳಬೇಕು. ಆಗಲೇ ನಾವು ಬೌದ್ಧಿಕ ಸ್ವಾತಂತ್ರÂ ಸಿಕ್ಕಾಗಲೇ ನಾವು ಸಂಪೂರ್ಣ ಸ್ವತಂತ್ರರಾದಂತೆ ಎನ್ನುತ್ತಿದ್ದರು ಕಲಾಂ.

ಸ್ವಾತಂತ್ರÂ ನನ್ನ ಮೊದಲ ಗುರಿ, ನಂತರ ಅಭಿವೃದ್ಧಿನನ್ನ ದೃಷ್ಟಿಯಲ್ಲಿ ಸ್ವಾತಂತ್ರÂ ಅತಿ ಪ್ರಮುಖವಾದ ಅಂಶ, ಎರಡನೆಯದು ಅಭಿವೃದ್ಧಿ ಎಂದು ಕಲಾಂ ಹೇಳುತ್ತಿದ್ದರು. ಸ್ವಾತಂತ್ರÂದ ಮೊದಲ ಹೆಜ್ಜೆಯನ್ನು ಭಾರತ 1857ರಲ್ಲಿ ಇಟ್ಟಿತು. ಅಂದು ದೇಶದಲ್ಲಿ ಸ್ವಾತಂತ್ರÂದ ಯುದ್ಧ ಆರಂಭವಾಯಿತು. ಕೊನೆಗೂ ನಾವು ಬ್ರಿಟಿಷರಿಂದ ಅದನ್ನು ಪಡೆಯುವಲ್ಲಿ ಯಶಸ್ವಿಯಾದೆವು. ಆದರೆ, ನಾವು ವಿದೇಶಿ ವಸ್ತುಗಳ ಮೋಹದಿಂದ ಬಿಡಿಸಿಕೊಂಡು, ಅವರ ವಿಚಾರ ಧಾರೆಗಳ ಹೊರತಾದ ಸ್ವತಂತ್ರ ದೃಷ್ಟಿಕೋನ ಬೆಳೆಸಿಕೊಂಡು ನಿಜವಾದ ಅರ್ಥದಲ್ಲಿ ಸ್ವತಂತ್ರರಾಗಬೇಕು. ಅಂತಹ ಸ್ವತಂತ್ರ ದೇಶವೊಂದನ್ನು ಕಟ್ಟುವ ಮಹತ್ಕಾರ್ಯ ನಮ್ಮಿಂದಾಗಬೇಕು. ಆಗಲೇ ನಿಜವಾದ ಸ್ವತಂತ್ರ ಭಾರತದ ಉದಯವಾಗುತ್ತದೆ. ನಾವು ಮುಕ್ತರಲ್ಲದಿದ್ದರೆ ಯಾರೂ ನಮ್ಮನ್ನು ಗೌರವಿಸುವುದಿಲ್ಲ ಎನ್ನುತ್ತಿದ್ದರು ಕಲಾಂ. ಭಾರತದ ಕುರಿತು ನಾನು ಹೊಂದಿರುವ ಎರಡನೆಯ ಗುರಿ ಅಭಿವೃದ್ಧಿ. 50 ವರ್ಷಗಳಿಂದ ನಾವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿಯೇ ಉಳಿದಿದ್ದೇವೆ. ಈಗ ನಾವು ನಮ್ಮನ್ನು ಅಭಿವೃದ್ಧಿ ಹೊಂದಿದವರಾಗಿ ನೋಡಿಕೊಳ್ಳುವ ಸಮಯ ಬಂದಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ನಾವು ಪ್ರಪಂಚದ ಮೊದಲ ಐದು ದೇಶಗಳ ಪಟ್ಟಿಯಲ್ಲಿದ್ದೇವೆ. ಬಹುತೇಕ ಕ್ಷೇತ್ರಗಳಲ್ಲಿ ನಮ್ಮ ಅಭಿವೃದ್ಧಿಯ ವೇಗ ಶೇ.10ರಷ್ಟಿದೆ. ನಮ್ಮ ಬಡತನ ಪ್ರಮಾಣ ಇಳಿಯುತ್ತಿದೆ, ನಮ್ಮ ಸಾಧನೆಗೆ ಜಾಗತಿಕ ಸ್ತರದಲ್ಲಿ ಮನ್ನಣೆ ದೊರೆಯಲಾರಂಭಿಸಿದೆ. ಆದರೂ ಅಭಿವೃದ್ಧಿ ಹೊಂದಿದ ದೇಶವಾಗಿ ಗುರುತಿಸಿಕೊಳ್ಳಲು ನಾವೇಕೆ ಹಿಂಜರಿಯುತ್ತಿದ್ದೇವೆ ಎಂದು ಕಲಾಂ ಪ್ರಶ್ನಿಸುತ್ತಿದ್ದರು.

Trending videos

Back to Top