CONNECT WITH US  

ಸಾಯುವ ಮೊದಲು ಭದ್ರತಾ ಸಿಬ್ಬಂದಿಗೆ ಥ್ಯಾಂಕ್ಸ್‌ ಹೇಳಿದ್ದರು

ಶಿಲ್ಲಾಂಗ್‌: ಮೇಘಾಲಯ ರಾಜಧಾನಿ ಶಿಲ್ಲಾಂಗ್‌ ಐಐಎಂನಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದ ತಮಗೆ ಭದ್ರತೆ ಒದಗಿಸುತ್ತಿದ್ದ ಸಿಬ್ಬಂದಿಗೆ ನಿಧನರಾಗುವ ಕೆಲ ನಿಮಿಷಗಳ ಮೊದಲು ಅಬುಲ್‌ ಕಲಾಂ ಧನ್ಯವಾದ ಅರ್ಪಿಸಿದ್ದರು. ಗುವಾಹಟಿಯಿಂದ ಶಿಲ್ಲಾಂಗ್‌ಗೆ ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಕಲಾಂ ಅವರು ಸೋಮವಾರ ಸಂಜೆ ಆಗಮಿಸಿದರು. ಈ ವೇಳೆ, ಕಲಾಂ ಪ್ರಯಾಣಿಸುತ್ತಿದ್ದ ವಾಹನದ ಮುಂದೆ ತೆರೆದ ಜಿಪ್ಸಿ ವಾಹನದಲ್ಲಿ ಮೂವರು ಭದ್ರತಾ ಸಿಬ್ಬಂದಿ ಸಾಗುತ್ತಿದ್ದರು. ಆ ಪೈಕಿ ಒಬ್ಟಾತ ವಾಹನದ ಮೇಲೆ ಗನ್‌ ಹಿಡಿದು ನಿಂತಿದ್ದ. ಈ ವೇಳೆ, ಆ ಸಿಬ್ಬಂದಿಯನ್ನು ಕುಳಿತುಕೊಳ್ಳುವಂತೆ ಹೇಳಿ ಎಂದು ಅಧಿಕಾರಿಗಳಿಗೆ ಕಲಾಂ ಕೋರಿಕೊಂಡಿದ್ದರು. ಆದರೆ ಅದು ಪಾಲನೆಯಾಗಲಿಲ್ಲ. ಶಿಲ್ಲಾಂಗ್‌ ತಲುಪಿದ ಕೂಡಲೇ ಗನ್‌ ಹಿಡಿದು ವಾಹನದಲ್ಲಿ ನಿಂತಿದ್ದ ಸಿಬ್ಬಂದಿಯನ್ನು ಕರೆಸಿದ ಕಲಾಂ, ನನ್ನಿಂದಾಗಿ ನೀವು ಅಷ್ಟು ದೂರ ನಿಲ್ಲುವಂತಾಯಿತು ಎಂದು ಹೇಳಿದರು. ಅಲ್ಲದೆ ಭದ್ರತೆ ಒದಗಿಸಿದ್ದಕ್ಕೆ ಧನ್ಯವಾದ ಹೇಳಿದರು.

Trending videos

Back to Top