CONNECT WITH US  

ಅರುಣಾಚಲ: ಡೀಸಿ ಇದ್ದ ಹೆಲಿಕಾಪ್ಟರ್‌ ನಾಪತ್ತೆ

ಇಟಾನಗರ: ಜಿಲ್ಲಾಧಿಕಾರಿಯೊಬ್ಬರು ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದ ಪವನ್‌ ಹನ್ಸ್‌ ಹೆಲಿಕಾಪ್ಟರ್‌ವೊಂದು ಅರುಣಾಚಲ ಪ್ರದೇಶದ ತಿರಾಪ್‌ ಜಿಲ್ಲೆಯಲ್ಲಿನ ದುರ್ಗಮ ಪ್ರದೇಶದಲ್ಲಿ ಮಂಗಳವಾರ ಕಣ್ಮರೆಯಾಗಿದೆ.

ಹೆಲಿಕಾಪ್ಟರ್‌ ರೀತಿಯ ಕುರುಹೊಂದು ತಿರಾಪ್‌ ಜಿಲ್ಲೆಯ ದೇವಮಾಲಿ ದಟ್ಟಾರಣ್ಯದಲ್ಲಿ ಪತ್ತೆಯಾಗಿದೆ. ಆದರೆ, ಪ್ರತಿಕೂಲ ಹವಾಮಾನ ಹಾಗೂ ದುರ್ಗಮ ಪ್ರದೇಶವಿರುವ ಕಾರಣ ಆ ಸ್ಥಳವನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಹೆಲಿಕಾಪ್ಟರ್‌ನಲ್ಲಿ ತಿರಾಪ್‌ ಜಿಲ್ಲಾಧಿಕಾರಿ ಕಮಲೇಶ್‌ ಜೋಶಿ, ಇಬ್ಬರು ಪೈಲೆಟ್‌ ಹಾಗೂ ಸಿಬ್ಬಂದಿಯೊಬ್ಬರು ಇದ್ದರು.

ಎರಡು ಇಂಜಿನ್‌ಗಳ ದೌಫೀನ್‌ ಎನ್‌3 ಸಂಖ್ಯೆಯ ಈ ಪವನ್‌ ಹನ್ಸ್‌ ಹೆಲಿಕಾಪ್ಟರ್‌ ಬೆಳಗ್ಗೆ 11ರ ವೇಳೆಗೆ ದೇವಮಾಲಿ ಎಂಬಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಕಮಲೇಶ್‌ ಅವರು ಅಸ್ಸಾಂನ ದೀಬ್ರೂಗಢದಿಂದ ಖೋನ್ಸಾಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

Trending videos

Back to Top