CONNECT WITH US  

ನಟ ಸಲ್ಮಾನ್ ಖಾನ್ ಮೆದುಳೇ ಇಲ್ಲದ ವ್ಯಕ್ತಿ: ರಾಜ್ ಠಾಕ್ರೆ ವ್ಯಂಗ್ಯ

ಮುಂಬೈ: ಮುಂಬಯಿ ಸರಣಿ ಸ್ಫೋಟದ ದೋಷಿ,ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಉಗ್ರ ಯಾಕೂಬ್ ಮೆಮೊನ್ ಪರವಾಗಿ ಟ್ವೀಟ್ ಮಾಡಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಮೆದುಳಿಲ್ಲದ ವ್ಯಕ್ತಿ ಎಂದು ಮುಂಬಯಿ ನವನಿರ್ಮಾಣ್ ಸೇನಾ(MNS) ಸಂಸ್ಥಾಪಕ ರಾಜ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಸಲ್ಲು ದಿನಪತ್ರಿಕೆ ಓದುವುದಿಲ್ಲ,ದೇಶದ ಕಾನೂನಿನ ಬಗ್ಗೆ ಆತನಿಗೆ ಅರಿವಿಲ್ಲ ಹೀಗಾಗಿ ಯಾಕೂಬ್ ಪರವಾಗಿ ಟ್ವೀಟ್ ಮಾಡಿದ್ದರು ಎಂದು ಎಂ.ಎನ್.ಎಸ್ ನಾಯಕ ಇದೇ ಸಂದರ್ಭದಲ್ಲಿ ಹೇಳಿದರು.

''ಯಾಕೂಬ್‌ ಮೆಮೊನ್'ರನ್ನು ಗಲ್ಲಿಗೇರಿಸಬೇಡಿ, ಅವನನ್ನು ನಂಬಿಕೊಂಡು ಆತನ ಕುಟುಂಬವಿದೆ. ತಲೆ ಮರೆಸಿಕೊಂಡಿರುವ ಸ್ಪೋಟದ ರೂವಾರಿ  ಟೈಗರ್ ಮೆಮನ್'ನನ್ನು  ಹಿಡಿದು ಪರೇಡ್‌ ನಡೆಸಿ ಗಲ್ಲಿಗೇರಿಸಿ'' ಎಂದು ಈ ಹಿಂದೆ ಸಲ್ಲು ಭಾಯ್ ಟ್ವೀಟ್ ಮಾಡಿ ವಿವಾದಕ್ಕೀಡಗಿದ್ದರು.

ಅಲ್ಲದೆ ಈ ಟ್ವೀಟ್'ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಷ ವ್ಯಕ್ತವಾದ ಹಿನ್ನಲೆಯಲ್ಲಿ ಟ್ವೀಟ್ ಹಿಂಪಡೆದು ಸಲ್ಮಾನ್ ಖಾನ್ ಬೇಷರತ್ ಕ್ಷಮೆಯಾಚಿಸಿಸಿದ್ದರು.

ಮುಂಬಯಿ ನವನಿರ್ಮಾಣ್ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆಯು ಸಲ್ಮಾನ್ ಖಾನ್ ಕುಟುಂಬಕ್ಕೆ ಆಪ್ತರಾಗಿದ್ದು, ಅಲ್ಲದೆ ಸಲ್ಲು ಮಿಯಾನೊಂದಿಗೆ ಉತ್ತಮ ಗೆಳೆತನ ಹೊಂದಿದವರಾಗಿದ್ದಾರೆ. ಆದರೆ ಠಾಕ್ರೆಯ ಈ ಹೊಸ ಹೇಳಿಕೆಯು ಈಗ ಕುಟುಂಬ ವರ್ಗದಲ್ಲಿ ಅಚ್ಚರಿ ಮೂಡಿಸಿದೆ.

-ಕಪ್ಪು ಮೂಗುತ್ತಿ

Trending videos

Back to Top