CONNECT WITH US  

ಯುದ್ಧ ವಿಮಾನ ಪತನ ವೇಳೆ 6 ನಾಯಿ ಮರಿ ಬಚಾವ್‌!

ಬದ್ಗಾಂ (ಜಮ್ಮು-ಕಾಶ್ಮೀರ): ವಿಮಾನ ಪತನ ವೇಳೆ ಅದರ ಅಡಿಗೆ ಬಿದ್ದರೆ ಕಥೆ ಅಷ್ಟೇ! ಆದರೆ ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಸೋಯ್‌ಬಾಘ… ಗ್ರಾಮ ದಲ್ಲಿ ವಾಯುಪಡೆ ಯುದ್ಧ ವಿಮಾನ ಮಿಗ್‌-21, ಸೋಮವಾರ ಬೆಳಗ್ಗೆ 10.59ಕ್ಕೆ ಪತನವಾದ ವೇಳೆ 6 ಪುಟ್ಟ ನಾಯಿ ಮರಿಗಳು ಅದೃಷ್ಟವಶಾತ್‌ ಬದುಕಿಕೊಂಡಿವೆ.

ಬೆಳಗಿನ ಜಾವ ಎಂದಿನಂತೆ ಹಾರಾಟನಿರತವಾಗಿದ್ದ ವಿಮಾನ ಗ್ರಾಮದಲ್ಲಿ ಪತನಗೊಂಡಿತ್ತು. ಈ ವೇಳೆ ಪೈಲಟ್‌ ಯಶಸ್ವಿಯಾಗಿ ಪಾರಾಗಿದ್ದರು. ವಿಮಾನ ಬಿದ್ದ ಪ್ರದೇಶದಲ್ಲಿ ಪುಟ್ಟ ಕಂದರವಿದ್ದು, ಅದರ ಒಳಗೆ ನಾಯಿಮರಿಗಳು 6 ತಿಂಗಳ ಹಿಂದಷ್ಟೇ ಜನಿಸಿದ್ದವು.

ವಿಮಾನ ಪತನ ಬಳಿಕ ಉಳಿದವರ ಹುಡುಕಾಟಕ್ಕಾಗಿ ತೆರಳಿದ್ದ ಗ್ರಾಮ ಸ್ಥರಿಗೆ ಆಶ್ಚರ್ಯವೋ ಆಶ್ಚರ್ಯ. ವಿಮಾನ ಬಿದ್ದ ಸ್ಥಳದಲ್ಲಿ ಕೆಲವು ಸಣ್ಣ ಮರಗಳಿದ್ದು ಅವುಗಳು ವಿಮಾನ ಮತ್ತಷ್ಟು ಜಾರುವುದನ್ನು ತಡೆದಿದೆ. ಅಲ್ಲದೇ ಕೆಳಗಿನ ಕಂದರದಲ್ಲಿದ್ದ ನಾಯಿ ಮರಿಗಳು, ಸ್ವಲ್ಪ ದೂರದಲ್ಲಿದ್ದ ಕೆಲವು ಮನೆಗಳು ಮತ್ತು ಶಾಲೆ ಕೂಡ ಬಚಾವ್‌ ಆಗಿದೆ.

ಬಳಿಕ ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬ್ಲ್ಯಾಕ್‌ ಬಾಕ್ಸ್‌ ಪತ್ತೆ ನಡೆಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಮೂಲಗಳು ಹೇಳಿವೆ. "ಶ್ರೀನಗರ ವಾಯುನೆಲೆಯಿಂದ ವಿಮಾನ ಹಾರಾಟ ಕೈಗೊಂಡಿತ್ತು. ಇದೊಂದು ದೈನಂದಿನ ತರಬೇತಿ ಹಾರಾಟವಾಗಿತ್ತು. ಘಟನೆ ಸಂಬಂಧ ತನಿಖೆ ಆದೇಶಿಸಲಾಗಿದೆ' ಎಂದು ರಕ್ಷಣಾ ವಕ್ತಾರ ಕರ್ನಲ್‌ ಗೋಸ್ವಾಮಿ ತಿಳಿಸಿದ್ದಾರೆ.

Trending videos

Back to Top