CONNECT WITH US  

ಮಗಳ ಮೂಗು ಸರ್ಜರಿ: ದತ್‌ಗೆ 30 ದಿನ ಪರೋಲ್‌!

ಪುಣೆ/ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್‌ ದತ್‌ಗೆ ಮತ್ತೆ 30 ದಿನಗಳ ಪರೋಲ್‌ ಸಿಕ್ಕಿದ್ದು, ಬುಧವಾರ ಸಂಜೆ ಪುಣೆ ಜೈಲಿಂದ ತಮ್ಮ ಮುಂಬೈ ನಿವಾಸಕ್ಕೆ ಆಗಮಿಸಿದ್ದಾರೆ. ವಿಚಿತ್ರವೆಂದರೆ ಈ ಸಲ ದತ್‌ಗೆ ಪೆರೋಲ್‌ ಸಿಕ್ಕಿರುವುದು ಮಗಳ ಮೂಗಿನ ಶಸ್ತ್ರಚಿಕಿತ್ಸೆಗಾಗಿ! ಕಳೆದ ಜನವರಿಯಲ್ಲಿ 14 ದಿನಗಳ ರಜೆಯ ಬಳಿಕ ಸಂಜಯ್‌ ದತ್‌ ಪುಣೆಯ ಯೆರವಾಡ ಜೈಲಿಗೆ ಹಿಂತಿರುಗಿದ್ದರು. 2013ರ ಮೇನಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಸಂಜಯ್‌ ದತ್‌, 146 ದಿನಗಳನ್ನು ರಜೆಯ ಮೇಲೆಯೇ ಕಳೆದಿದ್ದಾರೆ. ಈಗ ಮತ್ತೆ ಅವರು ಪರೋಲ್‌ಗೆ ಮನವಿ ಮಾಡಿಕೊಂಡಿದ್ದು, ವಿಭಾಗೀಯ ಆಯುಕ್ತರು 30 ದಿನಗಳ ಕಾಲ ಪರೋಲ್‌ ಮಂಜೂರು ಮಾಡಿದ್ದಾರೆ.ದತ್‌ಗೆ ಪದೇ ಪದೇ ಪರೋಲ್‌ ದೊರಕುತ್ತಿರುವುದಕ್ಕೆ ಈ ಹಿಂದೆ ಟೀಕೆಗಳು ವ್ಯಕ್ತವಾಗಿದ್ದವು.

Trending videos

Back to Top