CONNECT WITH US  

ನಕ್ಸಲ್‌ ದಾಳಿಗೆ 3 ಬಿಎಸ್ಸೆಫ್ ಯೋಧರು ಹುತಾತ್ಮ

ಮಲ್ಕಾನ್‌ಗಿರಿ (ಒಡಿಶಾ): ಇಲ್ಲಿಯ ಅರಣ್ಯ ಪ್ರದೇಶವೊಂದರಲ್ಲಿ ಪಹರೆ ಕಾಯುತ್ತಿದ್ದ ಭದ್ರತಾ ಪಡೆಯ ಸೇನಾನೆಲೆ ಬಳಿ ನಕ್ಸಲರು ನೆಲಬಾಂಬ್‌ ಸ್ಫೋಟಿಸಿ, ಯೋಧರ ಮೇಲೆ ಗುಂಡಿನ ದಾಳಿ ಮಾಡಿದ ಪರಿಣಾಮ 3 ಸೈನಿಕರು ಮತ್ತು ಓರ್ವ ನಾಗರಿಕ ಮೃತಪಟ್ಟು, 6 ಸೈನಿಕರು ಗಾಯಗೊಂಡಿದ್ದಾರೆ.

104ನೇ ಬೆಟಾಲಿಯನ್‌ ಪಡೆಯು ತನ್ನ ಜಾನ್‌ಬಾಯ್‌ ನೆಲೆಯ ಬಳಿ ಇರುವಾಗ ಬೆಳಗ್ಗೆ 7:30ಕ್ಕೆ ನಕ್ಸಲರು ನೆಲಬಾಂಬ್‌ ಸ್ಫೋಟಿಸಿದರು. ಬಳಿಕ ಅಲ್ಲೇ ಇದ್ದ ಅವರು ಬಿಎಸ್‌ಎಫ್ ಯೋಧರ ಮೇಲೆ ಗುಂಡಿನ ದಾಳಿ ಮಾಡಿದರು. ಈ ವೇಳೆ ಭದ್ರತಾ ಪಡೆ ಯೋಧರೂ ಪ್ರತಿ ದಾಳಿ ಮಾಡಿದರು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ವೇಳೆ ಅಶೋಕ್‌ ಕುಮಾರ್‌ ಎಂಬ ಒಬ್ಬ ಅಧಿಕಾರಿ ಕಣ್ಣು ಕಳೆದುಕೊಂಡಿದ್ದಾರೆ. ಇವರನ್ನೂ ಸೇರಿ ಗಾಯಗೊಂಡ 6 ಸೈನಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Trending videos

Back to Top