CONNECT WITH US  

ನಿರಂತರ 6ನೇ ದಿನ ಮುಂಬಯಿ ಶೇರು ಕುಸಿತ : 140 ಅಂಕ ನಷ್ಟ

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ನಿರಂತರ ಆರನೇ ದಿನದ ಕುಸಿತಕ್ಕೆ ಗುರಿಯಾಗಿ ಇಂದು ಬುಧವಾರದ ವಹಿವಾಟನ್ನು 139.61 ಅಂಕಗಳ ನಷ್ಟದೊಂದಿಗೆ 38,018.31 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 43.35 ಅಂಕಗಳ ಕುಸಿತವನ್ನು ಕಂಡು ದಿನದ ವಹಿವಾಟನ್ನು 11,476.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಡಾಲರ್‌ ಎದುರು ರೂಪಾಯಿ ದುರ್ಬಲವಾಗಿರುವುದು, ದಿನೇ ದಿನೇ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರುತ್ತಿರುವುದು ಮತ್ತು ಈ ಕಾರಣಕ್ಕೆ ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಹಿನ್ನಡೆ ತೋರಿ ಬಂದಿರುವುದು ಸೆನ್ಸೆಕ್ಸ್‌ ಮತ್ತು ನಿಫ್ಟಿ ನಿರಂತರ ಸೋಲಿಗೆ ಕಾರಣವಾಗಿದೆ.

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,930 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,041 ಶೇರುಗಳು ಮುನ್ನಡೆ ಸಾಧಿಸಿದವು; 1,719 ಶೇರುಗಳು ಹಿನ್ನಡೆಗೆ ಗುರಿಯಾದವು; 170 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.  


Trending videos

Back to Top