CONNECT WITH US  

ಮನೆಯಲ್ಲಿ ಸಾಕು ಪ್ರಾಣಿಗಳು ಎಲ್ಲಿರಬೇಕು?

ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತ ಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ ಕೊಟ್ಟಿಗೆಗಳು ದಕ್ಷಿಣ ದಿಕ್ಕಿನಲ್ಲಿ ಕಟ್ಟುವುದು ಸರಿ ಅಲ್ಲ. ಹಾಗೆಯೇ ಕುರಿ, ಕೋಳಿ, ಹಂದಿ ಸಾಕಣಿಕೆ ನಿಷಿದ್ಧವಲ್ಲ. ಆದರೆ ಪರಿಶುದ್ಧವಾದ ಪರಿಸರ ಕಾಪಾಡಲ್ಪಡಲಿ

ಮನೆಯ ವಾಸ್ತುವಿಗೆ ಪಂಚ ಭೂತ ತತ್ವಾಧಾರಿತ ಬೆಳಕು, ಗಾಳಿ, ನೀರು, ಮಣ್ಣು ಹಾಗೂ ಆಕಾಶ ಧಾತುಗಳು ಪ್ರಾಮುಖ್ಯವಾದವು ಎಂಬದುನಾವೆಲ್ಲಾ ತಿಳಿದ ವಿಚಾರ. ಆದರೆ ಈ ಪಂಚ ಭೂತ ತತ್ವಗಳು ನಿರಂತರವಾಗಿ ಮಲಿನವಾಗಲೂ ತೊಡಗುತ್ತವೆ ಕ್ಷಿಪ್ರವಾಗಿ. ಹೀಗಾಗಿ ಈ ಪಂಚ ಭೂತಾತ್ಮಕ ಘಟಕಗಳು ಒಂದು ಸಾವಯವ ಚಕ್ರದ ನಿಯಂತ್ರಣಕ್ಕೆ ಒಳಗೊಂಡಾಗ ತಂತಾನೆ ಇವು ಅಶುದ್ಧತೆಯಿಂದ ಶುದ್ಧತೆಗೆ ಪರಿವರ್ತನೆಗೊಳ್ಳುತ್ತವೆ.

ಮನುಷ್ಯ ಮಿದುಳಿನ ವಿಕಾಸದಿಂದಾಗಿ ಪರಿಸರವನ್ನು ಮಲಿನಗೊಳಿಸದ ಹಾಗೆ ಹೇಗೆ ರಕ್ಷಿಸಬೇಕೆಂಬುದನ್ನು ತಿಳಿದಿರುತ್ತಾನೆ. ಆದರೆ ಸಾಕು ಪ್ರಾಣಿಗಳಿಗೆ ಬುದ್ಧಿ ವಿಕಸನ ಇರುವುದಿಲ್ಲ. ತಮ್ಮನ್ನೇ ತಾವು ಶುದ್ಧಿಕರಿಸಿಕೊಳ್ಳುವ ವಿಚಾರದಲ್ಲಿ ಅವು ಹಿಂದೆ ಬೀಳುತ್ತವೆ. ಕಟ್ಟಿಕೊಂಡ ಮನೆಯಲ್ಲಿ ಸ್ವಾಭಾವಿಕವಾಗಿ ಅವು ಶುದಟಛಿವಾಗಿರಲು ಸಾಧ್ಯವಾಗದು. ಹೀಗಾಗಿ ಮನೆಯೊಳಗಡೆ ಪ್ರಾಣಿಗಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸಬೇಕು.

ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಹಾಸಿಗೆಯ ಮೇಲೆ ಮಲಗಿಸಿಕೊಳ್ಳುವ,ಅವುಗಳೊಂದಿಗೆ ಆಟವಾಡುವ, ಮನೆಯಲ್ಲೇ ಒಂದೆಡೆ ಚೈನಿಗೆ ಕಟ್ಟಿ ಈ ಪ್ರಾಣಿಗಳ ಸ್ವಾತಂತ್ರ್ಯಕ್ಕೆ ಮೊಟಕು ಹಾಕುವ ಕಾಯಕವನ್ನ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಾರೆ. ಹಲವರನ್ನು ಗಮನಿಸಿರಬಹುದು.

ಎಲ್ಲೋ ಮನೆಯಿಂದ ಹೊರಗೆಳೆದು ತಂದು ಸಾರ್ವಜನಿಕ ಸ್ಥಳದಲ್ಲಿ (ಉದಾ-ನಾಯಿಗಳನ್ನು) ಕಕ್ಕಸು, ಮೂತ್ರ ಇತ್ಯಾದಿ ವಿಸರ್ಜನೆಗಳನ್ನು ನೆರವೇರಿಸುತ್ತಾರೆ. ಇದು ಸಾಕು ಪ್ರಾಣಿಗಳು ಬೇಕು, ಆದರೆ ಅವುಗಳ ಜವಾಬ್ದಾರಿಯುಕ್ತವಾಗಿ ನಡೆಸಬೇಕೆಂಬ ಯೋಚನೆಯಲ್ಲಿ ಇವರು ಇರಲಾರರು. ಹಾಗೆಂದು ಒಂದು ರೀತಿಯ ಪ್ರೀತಿ ಹಾಗೂ ವಾತ್ಸಲ್ಯವನ್ನ ಈ ಪ್ರಾಣಿಗಳ ಕುರಿತು
ತೋರಿಸುತ್ತಾರೆ. ಆದರೂ ಸ್ವಾತಂತ್ರ್ಯ ಹರಣ ನಡೆದಿರುತ್ತದೆ.

ಎಷ್ಟೋ ಮನೆಗಳಲ್ಲಿ ಗಿಣಿ, ಬಣ್ಣದ ಪಕ್ಷಿ, ಲವ್‌ ಬರ್ಡ್ಸ್‌ ಇತ್ಯಾದಿ ಸಾಕುತ್ತಾರೆ. ಆದರೆ ಈ ಮೂಕ ಜೀವಿಗಳನ್ನು ಬಂಧಿಸಿರುತ್ತಾರೆ.
ಸ್ವತ್ಛಂದ ಹಾರಾಟಗಳಿಗೂ ತಡೆ ತರುತ್ತಾರೆ.

ಇದು ಮನೆಯೊಳಗಿನ ಮೂಕ ರೋದನಕ್ಕೆ ಸಾಕ್ಷಿಯಾಗುತ್ತವೆ. ಜೀವಗಳು ಪರಿತಪಿಸುವ ವರ್ತಮಾನ ಮನೆಯಲ್ಲಿ ನಡೆಯುವುದು
ಸಹಾ ಸರಿಯಾದುದಲ್ಲ. ತಿಳಿದಿರಲಿ.ಇನ್ನು ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ ಕೊಟ್ಟಿಗೆಗಳುದಕ್ಷಿಣ ದಿಕ್ಕಿನಲ್ಲಿ ಕಟ್ಟಲ್ಪಡುವುದು ಸರಿ ಅಲ್ಲ. ಹಾಗೆಯೇ ಕುರಿ, ಕೋಳಿ, ಹಂದಿಸಾಕಣಿಕೆಗಳು ನಿಷಿದಟಛಿವಲ್ಲ. ಆದರೆ ಪರಿಶುದ್ಧವಾದ ಪರಿಸರ ಕಾಪಾಡಲ್ಪಡಲಿ.

ಜೀವೋ ಜೀವಸ್ಯ ಜೀವನಂ ಎಂಬ ಮಾತು ರೂಢಿಯಲ್ಲಿದೆ. ಜೀವಕ್ಕೆ ಜೀವವೇ ಆಹಾರವಾಗಿದೆ ವಿನಾ ಅನ್ಯ ಮಾರ್ಗಗಳಿಲ್ಲ. ಆದರೆ ಈ ಜೀವ ಜೀವದ ಆಹಾರದ ಬಗೆಗಿನ ಸಂಬಂಧ ಹಿಂಸಾ ಸ್ವರೂಪದ ಆವರಣಗಳನ್ನು ಸಾಧ್ಯವಾದಷ್ಟು ಕಡಿಮೆಯಾಗಿರುವಂತೆ ಜಾಗ್ರತೆವಹಿಸಬೇಕು. ಈ ಜಾಗ್ರತೆಯು ಅಜಾಗ್ರತೆಯಾದಲ್ಲಿ ಕೆಟ್ಟ ಪರಿಣಾಮಗಳಿಗೆ ದಾರಿಯಾಗದೇ ಇರದು. ಪ್ರಕೃತಿಗೆ ಬದುಕೂ ಬೇಕು. ನಾಶವೂ ಬೇಕು. ಅನಿವಾರ್ಯವಾಗುವ ಅಳತೆಯಲ್ಲಿ ನಾಶವಿದ್ದಾಗ, ಕ್ರೌರ್ಯಕ್ಕೆ ಸ್ಥಳವಿರದು. ಪೂರ್ತಿ ಕ್ರೌರ್ಯವೇ ತುಂಬಿ ಹೋದರೆ, ಜಗದ್ರಕ್ಷಕ ಸ್ವರೂಪಿಯಾದ ಪ್ರಕೃತಿ ಮುನಿಯದಿರಲಾರಳು.

ಮೊ: 8147824707

- ಅನಂತಶಾಸ್ತ್ರಿ


Trending videos

Back to Top