CONNECT WITH US  

ಅಣಬೆ ಪಲಾವ್‌ ಮಾಡೋದು ಹೇಗೆ?

ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1/2 ಕೆಜಿ, ಈರುಳ್ಳಿ- 2 (ಕತ್ತರಿಸಿಟ್ಟುಕೊಳ್ಳಿ), ಹಸಿಮೆಣಸಿನಕಾಯಿ- 1 (ಕತ್ತರಿಸಿಕೊಳ್ಳಿ), ಟೊಮೆಟೊ- 1 (ಕತ್ತರಿಸಿಕೊಳ್ಳಿ),ಸಾಸಿವೆ- 1 ಟೀಚಮಚ, ಅಣಬೆ- 200 ಗ್ರಾಂ, ಜೋಳ- 1 ಕಪ್‌(ಬೇಯಿಸಿಕೊಳ್ಳಿ), ಎಣ್ಣೆ ಹುರಿಯಲು,ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಅನ್ನ ಮಾಡಿಟ್ಟುಕೊಳ್ಳಿ. ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಇದಕ್ಕೆ ಸಾಸಿವೆ, ಹಸಿಮೆಣಸಿನಕಾಯಿ ಹಾಕಿ ಎಲ್ಲವನ್ನು ಮಿಶ್ರ ಮಾಡಿ. ನಂತರ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ಇದಕ್ಕೆ ಬಟಾಣಿ ಮತ್ತು ಟೊಮ್ಯಾಟೊ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಇವು ಬೆಂದ ನಂತರ ಉಪ್ಪನ್ನು ಉದುರಿಸಿ. ನಂತರ ಅಣಬೆಗಳನ್ನು ಹಾಕಿ ನಿಧಾನವಾಗಿ ಕಲಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಅಣಬೆಗಳು ಬೆಂದ ನಂತರ ಇದರೊಂದಿಗೆ ಅನ್ನವನ್ನು ಬೆರೆಸಿ ನಿಧಾನವಾಗಿ ಚೆನ್ನಾಗಿ ಕಲಸಿ.
 

Trending videos

Back to Top