CONNECT WITH US  

ಮಂಗಳೂರು ಶೈಲಿಯ ಮೊಟ್ಟೆಕರಿ

ಬಾಣಲೆಗೆ ಎಣ್ಣೆ ಮತ್ತು ಮೆಂತ್ಯೆ, ಸಾಸಿವೆ, ಧನಿಯಾ ಬೀಜ, ಕೆಂಪುಮೆಣಸಿನಕಾಯಿ ಹಾಕಿ ಮಂದಉರಿಯಲ್ಲಿ ಹುರಿಯಿರಿ. ನಂತರ ಬಾಣಲೆಯಿಂದ ತೆಗೆದು ಬಿಡಿ. ಅದೆ ಬಾಣಲೆಗೆ ಒಂದೂವರೆ ಟೇಬಲ್‌ ಚಮಚ ಎಣ್ಣೆ ಮತ್ತು ಕತ್ತರಿಸಿದ ಈರುಳ್ಳಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಅದಕ್ಕೀಗ ಅರಿಶಿಣ ಪುಡಿ, ಜಜ್ಜಿದ ಬೆಳ್ಳುಳ್ಳಿ , ತೆಂಗಿನತುರಿ ಹಾಕಿ ತಿರುಗಿಸುತ್ತಾ ಇರಿ. ಚೆನ್ನಾಗಿ ಫ್ರೈ ಆದಾಮೇಲೆ ಸ್ಟೌವ್‌ನಿಂದ ಕೆಳಗಿಳಿಸಿ. ಈಗ ಫ್ರೈ ಮಾಡಿದ ಸಾಮಾಗ್ರಿಗಳನ್ನೆಲ್ಲಾ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಅದಕ್ಕೆ ಕತ್ತರಿಸಿದ ಈರುಳ್ಳಿ, ಹುಣಸೆಹಣ್ಣು, ಸೇರಿಸಿ ರುಬ್ಬಿಕೊಳ್ಳಿ. ರುಬ್ಬುವಾಗ ತೆಂಗಿನಹಾಲು ಹಾಕಿ, ನಿಮಗೆ ತೆಂಗಿನಹಾಲು ಅಭ್ಯಾಸವಿಲ್ಲದಿದ್ದರೇ ನೀರು ಹಾಕಿ ರುಬ್ಬಿ.
ತಳ ಗಟ್ಟಿಯಿರುವ ಪಾತ್ರೆ ತೆಗೆದುಕೊಂಡು ಅದಕ್ಕೆ ಎರಡು ಟೇಬಲ್‌ ಚಮಚ ಎಣ್ಣೆ ಹಾಕಿ. ಎಣ್ಣೆ ಕಾಯ್ದ ಬಳಿಕ ಅದಕ್ಕೆ ಚಕ್ಕೆ, ಕರಿಬೇವು ಹಾಕಿ , ನಂತರ ಕತ್ತರಿಸಿದ ಈರುಳ್ಳಿ ಹಾಕಿ ಎರಡು ನಿಮಿಷ ತಿರುಗಿಸಿ. ಈಗ ರುಬ್ಬಿಕೊಂಡಿರುವ ಮಿಶ್ರಣವನ್ನು ಇದಕ್ಕೆ ಸೇರಿಸಿ, ತಿರುಗಿಸುತ್ತಾ ಇರಿ. ಅದಕ್ಕೆ ಸ್ವಲ್ಪ ಸಣ್ಣಗೆ ಹೆಚ್ಚಿದ ಟೊಮ್ಯಾಟೋವನ್ನು ಸೇರಿಸಿ. ಮಸಾಲೆ ಚೆನ್ನಾಗಿ ಬೇಯುತ್ತಿರುವಾಗ ಉಪ್ಪು, ಬೇಯಿಸಿದ ಆಲೂಗೆಡ್ಡೆ ಸೇರಿಸಿ ಮತ್ತು ಐದು ನಿಮಿಷ ಕುದಿಸಿ. ಉರಿ ತಗ್ಗಿಸಿ, ಅದಕ್ಕೆ ಬೇಯಿಸಿದ ಮೊಟ್ಟೆಗಳನ್ನು ಹಾಕಿ, ಕೊನೆಯಲ್ಲಿ ತೆಂಗಿನಹಾಲು ಹಾಕಿ. ಚೆನ್ನಾಗಿ ಮಿಕ್ಸ್‌ ಮಾಡಿ. ಸ್ಟೌವ್‌ನಿಂದ ಇಳಿಸಿಬಿಡಿ. ಈ ಮೊಟ್ಟೆ ಕರಿ, ಆಪಮ್‌, ನೀರುದೋಸೆ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.

 

Trending videos

Back to Top