CONNECT WITH US  

ಚನ್ನ ಬಟೂರ

ಬೇಕಾಗುವ ಸಾಮಗ್ರಿಗಳು:
ಕೂಬೂಲ್‌ ಕಡಲೆ -ಅರ್ಧ ಕಪ್‌, ಟೊಮ್ಯಾಟೋ- 2, ಈರುಳ್ಳಿ-2, ಶುಂಠಿ ಬೆಳ್ಳುಳ್ಳಿ ಪೇಸ್ಟ್‌- ಅರ್ಧ ಚಮಚ, ಅಚ್ಚ ಖಾರದ ಪುಡಿ-1 ಚಮಚ, ಚನ್ನ ಮಸಾಲ- 1 ಚಮಚ, ಗರಂ ಮಸಾಲ-1 ಚಮಚ,ಅರಿಶಿನ - 1 ಚಿಟಿಕೆ, ಎಣ್ಣೆ - 2 ಚಮಚ,
ಮಾಡುವ ವಿಧಾನ:
ಕಾಬೂಲ್‌ ಕಡಲೆಯನ್ನು ಹಿಂದಿನ ದಿನ ಸ್ವಲ್ಪ ಸೋಡ ಹಾಕಿ ನೆನೆಸಿಡಬೇಕು, ಕಡಲೆಯನ್ನು ಬೇಯಿಸಿ ಇಟ್ಟುಕೊಳ್ಳಬೇಕು. ಟೊಮ್ಯಾಟೋ, ಈರುಳ್ಳಿ ಮತ್ತು ಸ್ವಲ್ಪ ಕಡಲೆಯನ್ನು ಬೇರೆಬೇರೆಯಾಗಿ ಅರೆದುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಯಾದಾಗ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ಹುರಿಯಿರಿ. ಈರುಳ್ಳಿ ಅರೆದಿಟ್ಟುಕೊಂಡಿದ್ದನ್ನ ಹಾಕಿ. ನಂತರ ಬೇಯಿಸಿದ ಕಡಲೆಯನ್ನು ಹಾಕಿ. ಗರಂ ಮಸಾಲೆ, ಚೆನ್ನ ಮಸಾಲೆ ಮತ್ತು ಅಚ್ಚಖಾರದ ಪುಡಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿದ್ರೆ ಚೆನ್ನ ರೆಡಿ.

ಬಟೂರ:
ಮೈದಾ ಹಿಟ್ಟು - 2 ಕಪ್‌, ಆಲೂಗಡ್ಡೆ ಬೇಯಿಸಿದ್ದು - 2, ಅಡುಗೆ ಸೋಡ- 1 ಚಿಟಿಕಿ, ಮೊಸರು- 1 ಚಮಚ, ಬಾಂಬೆ ರವೆ- ಟ ಚಮಚ, ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೇಲಿನ ಎಲ್ಲ ಪದಾರ್ಥಗಳನ್ನ ಒಟ್ಟಿಗೆ ಹಾಕಿ ಕಲೆಸಿ 4 ಗಂಟೆ ಬಿಡಬೇಕು. ನಂತರ ಪೂರಿಯ ಹಾಗೆ ಲಟ್ಟಿಸಿ ಕರಿಯಬೇಕು. ಬಟೂರ ರೆಡಿ. ( ಬೇಕಾದಲ್ಲಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪಿನಲ್ಲಿ ಚೆನ್ನವನ್ನು ಅಲಂಕರಿಸಬಹುದು. ಜೊತೆಗೆ ನಿಂಬೆಹಣ್ಣಿನ ತುಂಡುಗಳನ್ನು ಇಡಬಹುದು)

- ಮಂದಸ್ಮಿತಾ ಕೆ.ಸಿ., ತೀರ್ಥಹಳ್ಳಿ

Trending videos

Back to Top