CONNECT WITH US  

ಬಾಳೆ ಹಣ್ಣು ಹಲ್ವ

ಏನ್‌ ರುಚಿಗೊತ್ತಾ? ನಿಮ್ಗೆ ಸ್ವೀಟ್‌ ಇಷ್ಟ ಆಗಿªದ್ರೆ ಸಕ್ರೆ ಕಡಿಮೆ ಹಾಕ್ಕೊಳ್ಳಿ. ಈ ಸ್ವೀಟ್‌ನ ಮಾತ್ರ ಮಿಸ್‌ ಮಾಡ್ಬೇಡಿ. 

ಏನೇನ್‌ ಬೇಕು?: ಬಾಳೆಹಣ್ಣು 8, ಸಕ್ಕರೆ 7 ಕಪ್‌, ತುಪ್ಪ 5 ಕಪ್‌, ಏಲಕ್ಕಿ ಸ್ವಲ್ಪ, ಲವಂಗ 4, ಗೋಡಂಬಿ (ಬೇಕಿದ್ರೆ)

ಹೇಗ್‌ ಮಾಡೋದು?: 

*ಬಾಳೆಹಣ್ಣಿನ ಸಿಪ್ಪೆ ತೆಗೀರಿ, ಚಿಕ್ಕದಾಗಿ ಹೆಚ್ಚಿಕೊಳ್ಳಿ. 
*ಅದನ್ನ ಕಿವಿಚಿ ಅಥವಾ ಮಿಕ್ಸಿಮಾಡಿ.
*ದಪ್ಪತಳದ ಪಾತ್ರ ಸ್ಟೌ ಮೇಲಿಟ್ಟು ಅದಕ್ಕೆ ತುಪ್ಪಹಾಕಿ. ಬಿಸಿಮಾಡಿ.
*ಉರಿಯನ್ನ ಸಣ್ಣ ಫ್ಲೇಂನಲ್ಲಿಟ್ಟು ಕಿವಿಚಿದ ಬಾಳೆಹಣ್ಣು ಮತ್ತು ಸಕ್ಕರೆಯನ್ನ ಹಾಕಿ.
*ಕಾವಲಿ ಸಟ್ಟುಗದಿಂದ ತಿರುಗಿಸುತ್ತಿರಿ.
*ನಡುನಡುವೆ ತುಪ್ಪ ಹಾಕಿ.
*ಸುಮಾರು ಹೊತ್ತು ತಿರುವಿದ ಬಳಿಕ ಗಟ್ಟಿಯಾಗುತ್ತ ಬರತ್ತೆ. ಕಂದು ಬಣ್ಣಕ್ಕೆ ತಿರುಗತ್ತೆ. 
*ತಳಬಿಟ್ಟು ಕಡುಕಂದು ಬಣ್ಣಕ್ಕೆ ಬರುವಾಗ ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ.
*ನೀಟಾಗಿ ಸ್ಪ್ರೆಡ್‌ ಮಾಡಿ. ಬೇಕಾದ ಶೇಪ್‌ಗೆ ಕಟ್‌ ಮಾಡಿ. 
*ಬಿಸಿ ಬಿಸಿ ಬಾಯಿYಡಕ್ಕೆ ಹೋಗ್ಬೇಡಿ. ಆರೋವರೆಗೆ ಸಮಾಧಾನದಿಂದಿರಿ. ಆರಿ ತಣ್ಣಗಾದ ಮೇಲೆ ತಿನ್ನಿ.

Trending videos

Back to Top