CONNECT WITH US  

ಬರೇ 1 ನಿಮಿಷದಲ್ಲೇ 124 ತೆಂಗಿನಕಾಯಿ ಒಡೆದು ವಿಶ್ವ ದಾಖಲೆ; Watch

Kerala man smashing all the way. (Source: Abeesh P Domanic/Facebook)

ನೂರಾರು ವಿಧದ ಕಸರತ್ತುಗಳ ಮೂಲಕ ದಾಖಲೆಗಳನ್ನು ಚಿಂದಿ ಉಡಾಯಿಸಿ ಗಿನ್ನೆಸ್ ದಾಖಲೆ ನಿರ್ಮಿಸುತ್ತಾರೆ. ಇದೀಗ ಅಂತಹ ದಾಖಲೆಗೆ ಮತ್ತೊಂದು ಸೇರ್ಪಡೆ ಎಂಬಂತೆ ಕೇರಳದ  ಪೂಂಜಾರ್ ನ ಯುವಕನೊಬ್ಬ ವಿಶ್ವ ದಾಖಲೆ ಸಾಧಿಸಿ ತೋರಿಸಿದ್ದಾರೆ. ಒಂದೇ ಕೈಯಲ್ಲಿ ಅತೀ ವೇಗವಾಗಿ ತೆಂಗಿನ ಕಾಯಿಯನ್ನು ಒಡೆಯುವ ವಿಡಿಯೋ ವೀಕ್ಷಿಸಿ...

ತ್ರಿಶ್ಶೂರ್ ನಲ್ಲಿರುವ ಶೋಭಾ ಸಿಟಿಯ ಮಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಉದ್ಯೋಗಿ ಡೋಮನ್ನಿಕ್ ಕೇವಲ ಒಂದು ನಿಮಿಷದೊಳಗೆ ಬರಿಗೈಯಲ್ಲಿ 124 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಜರ್ಮನಿಯ ಮುಹಮ್ಮದ್ ಕಾಹ್ರಿಮಾನೋವಿಕ್ ಕೇವಲ ಒಂದು ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನು ಒಡೆದು ನಿರ್ಮಿಸಿದ್ದ ದಾಖಲೆಯನ್ನು ಡೋಮನ್ನಿಕ್ ಮುರಿದಿದ್ದಾರೆ.

Trending videos

Back to Top