CONNECT WITH US  

ಉದ್ಯೋಗಸ್ಥ ನಾರಿಯರಲ್ಲಿ ಹೆಚ್ಚುತ್ತಿದೆ ಧೂಮಪಾನ ವ್ಯಸನ

ದೇಶದ ಉದ್ಯೋಗಸ್ಥ ಮಹಿಳೆಯರ ಪೈಕಿ ಗಂಭೀರವಾಗಿ ಮತ್ತು ಅಪರೂಪಕ್ಕೊಮ್ಮೆ ಧೂಮಪಾನ ಮಾಡುವವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು ತಮ್ಮ ಹೃದಯದ ಆರೋಗ್ಯವನ್ನು ಕಡೆಗಣಿಸಿ ಧೂಮಪಾನ ವ್ಯಸನಿಗಳಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಹೇಳಿದೆ.

ಸಮೀಕ್ಷೆ ನಡೆಸಿದ್ದು ಯಾರು?
ಅಸೋಸಿಯೇಟೆಡ್‌ ಛೇಂಬರ್ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಆಫ್ ಇಂಡಿಯಾ(ಅಸೋಚಾಮ್‌) ಕಳೆದ ನಾಲ್ಕು ವಾರಗಳ ಕಾಲ 22ರಿಂದ 30 ವರ್ಷ ವಯೋಮಿತಿಯ ಉದ್ಯೋಗಸ್ಥ ಮಹಿಳೆಯರ ಧೂಮಪಾನ ಮಾದರಿಯ ಕುರಿತು ಅಧ್ಯಯನ ನಡೆಸಿತ್ತು.

ಯಾವ್ಯಾವ ನಗರಗಳು?
ಬೆಂಗಳೂರು, ಅಹಮದಾಬಾದ್‌, ಚೆನ್ನೈ, ದೆಹಲಿ, ಹೈದರಾಬಾದ್‌, ಜೈಪುರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಈ ಅಧ್ಯಯನ.

ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರು
2,000

ಯಾವ ವಯಸ್ಸಿನವರು?
22 ರಿಂದ 30

*ಹೆಚ್ಚು ಸಂಬಳ ಪಡೆವ, ಬಿಡುವಿಲ್ಲದ ಜೀವನ ಶೈಲಿ ಹೊಂದಿರುವ ಯುವ ಉದ್ಯೋಗಸ್ಥ ಮಹಿಳೆಯರಲ್ಲಿ ಧೂಮಪಾನ ಮಾಡುವ ಅಭ್ಯಾಸ ಹೆಚ್ಚಾಗುತ್ತಿದೆ. ವಾಣಿಜ್ಯ ಪ್ರದೇಶಗಳಲ್ಲಿ ಮಹಿಳೆಯರು ಧೂಮಪಾನದಲ್ಲಿ ತೊಡಗಿರುವುದು ಸಾಮಾನ್ಯವಾಗಿ ಕಾಣುವ ದೃಶ್ಯ.

*ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರಲ್ಲಿ ಶೇ.2ರಷ್ಟು ಮಾತ್ರ ಭಾರೀ ಧೂಮಪಾನ ವ್ಯಸನಿಗಳು. ಅವರಲ್ಲಿ ಬಹುತೇಕರು ತಮ್ಮ ಈ ವ್ಯಸನಕ್ಕೆ ಕಾರಣ ಕೆಲಸದೊತ್ತಡ ಕಾರಣ ಎಂದು ತಿಳಿಸಿದ್ದಾರೆ.

* ಇನ್ನೊಂದಷ್ಟು ಮಹಿಳೆಯರು ತಾವು ತೂಕ ಇಳಿಸಿಕೊಳ್ಳಲು ಧೂಮಪಾನ ಮಾಡುತ್ತೇವೆ ಎಂದಿದ್ದಾರೆ.

*ಶೇ.40ರಷ್ಟು ಮಹಿಳೆಯರು ತಾವು ಲಘು ಧೂಮಪಾನಿಗಳು, ದಿನಕ್ಕೆ 1 ಅಥವಾ 2 ಸಿಗರೆಟ್‌ ಸೇದುತ್ತೇವೆ ಎಂದಿದ್ದಾರೆ. ಕೆಲವರು ತಾವು ಮದ್ಯ ಸೇವಿಸುವಾಗ ಮಾತ್ರ ಸಿಗರೆಟ್‌ ಸೇದುತ್ತೇವೆ ಎಂದಿದ್ದಾರೆ.

*ಇನ್ನು ಕೆಲವರು ತಾವು, ಸ್ವತಂತ್ರರು, ಕೂಲ್‌ ಎಂದು ತೋರಿಸಿಕೊಳ್ಳಲು ಧೂಮಪಾನ ಮಾಡುತ್ತಾರೆ. ಇನ್ನೂ ಕೆಲವರು ಧೂಮಪಾನ ಅಂತಸ್ತಿನ ಪ್ರಶ್ನೆ ಎನ್ನುತ್ತಾರೆ.

Trending videos

Back to Top