CONNECT WITH US  

ಹೀರೆಕಾಯಿ ಸ್ಪೆಷಲ್‌

ಹೀರೇಕಾಯಿಯನ್ನು ನಾವು ನಮ್ಮ ಮನೆಯ ಕೈತೋಟದಲ್ಲಿ ಬೆಳೆಸಬಹುದು. ಇದರಿಂದ ನಾನಾ ವಿಧದ ರುಚಿಕರ ಹಾಗೂ ಆರೋಗ್ಯಕರ ಅಡುಗೆ ತಯಾರಿಸಬಹುದು. ಇಲ್ಲಿವೆ ಕೆಲವು ವಿಧಾನಗಳು.

ಹೀರೇಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿ: ಹೀರೆಕಾಯಿ ಹೋಳುಗಳು 1 ಕಪ್‌, ಕಾಯಿತುರಿ 1 ಕಪ್‌, ಹುಣಸೆಹಣ್ಣು , ರುಚಿಗೆ ತಕ್ಕಷ್ಟು ಉಪ್ಪು , 2 ಚಮಚ ಕೊತ್ತಂಬರಿ, ಹಸಿಮೆಣಸು 2, ಒಗ್ಗYರಣೆಗೆ ಸಾಸಿವೆ, ಕರಿಬೇವು, ಒಣ ಮೆಣಸು.

ತಯಾರಿಸುವ ವಿಧಾನ: ಹೀರೇಕಾಯಿಯ ಸಿಪ್ಪೆ$ತೆಗೆದು ಅದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಳಿಕ ಹಸಿಮೆಣಸು ಹಾಕಿ ಬೇಯಿಸಿಕೊಳ್ಳಿ. ಜಾಸ್ತಿ ನೀರು ಸೇರಿಸಬಾರದು. ಬೇಯಿಸಿದ ಮಿಶ್ರಣಕ್ಕೆ ಕಾಯಿತುರಿ, ಹುಣಸೆಹಣ್ಣು ಹಾಕಿ ರುಬ್ಬಿ ಉಪ್ಪು ಸೇರಿಸಿ. ಬಳಿಕ ಸಾಸಿವೆ, ಕರಿಬೇವು, ಒಣಮೆಣಸು ಹಾಕಿ ಒಗ್ಗರಿಸಿದರೆ ಗೊಜ್ಜು ರೆಡಿ. ಇದು ಅನ್ನ , ದೋಸೆ, ರೊಟ್ಟಿಗೂ ನಂಜಿಕೊಳ್ಳಲು ರುಚಿಯಾಗಿರುತ್ತದೆ.

ಹೀರೇಕಾಯಿ ಪಾಯಸ
ಬೇಕಾಗುವ ಸಾಮಗ್ರಿ: ಹೀರೇಕಾಯಿ - 2, ಹಾಲು 2 ಕಪ್‌, ರವೆ 1/4 ಕಪ್‌, ಬೆಲ್ಲ ಅಥವಾ ಸಕ್ಕರೆ ಒಂದೂವರೆ ಕಪ್‌, ಏಲಕ್ಕಿ ಹುಡಿ, ದ್ರಾಕ್ಷಿ , ಗೋಡಂಬಿ.

ತಯಾರಿಸುವ ವಿಧಾನ : ಹೀರೇಕಾಯಿನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ . ಬಳಿಕ ಬಾಣಲೆ ಒಲೆಯ ಮೇಲಿಟ್ಟು ರವೆಯನ್ನು ತುಪ್ಪದೊಂದಿಗೆ ಹುರಿದಿಟ್ಟುಕೊಳ್ಳಿ. ಹಾಲಿಗೆ ಸ್ವಲ್ಪ ನೀರು ಸೇರಿಸಿ ಬಿಸಿ ಮಾಡಿ. ಹಾಲು ಬಿಸಿಯಾದಾಗ ಅದಕ್ಕೆ ಹೀರೇಕಾಯಿ ಹೋಳುಗಳನ್ನು ಹಾಕಿ ಕುದಿಸಿ. ಕುದಿಯುತ್ತಾ ಬರುವಾಗ ಬೆಲ್ಲ ಇಲ್ಲವೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ಗೊಟಾಯಿಸಿರಿ. ಬಳಿಕ ಹುರಿದಿಟ್ಟು ರವೆಯನ್ನು ಹಾಕಿ ಮತ್ತೆ ಗೊಟಾಯಿಸಿ.
ರವೆಯನ್ನು ಸೇರಿಸುವುದರಿಂದ ಪಾಯಸ ಸ್ವಲ್ಪ ಗಟ್ಟಿಯಾಗುತ್ತದೆ. ಬಳಿಕ ಏಲಕ್ಕಿ ಹುಡಿ, ದ್ರಾಕ್ಷಿ , ಗೋಡಂಬಿ ಸೇರಿಸಿ. ರುಚಿರುಚಿಯಾದ ಪಾಯಸ ಸವಿಯಲು ರೆಡಿ.

ಹೀರೇಕಾಯಿ ಬೋಂಡಾ
ಬೇಕಾಗುವ ಸಾಮಗ್ರಿ: ಹೀರೇಕಾಯಿ 1, ಕಡ್ಲೆಹಿಟ್ಟು 1/4 ಕೆ.ಜಿ., ಅಕ್ಕಿ ಹಿಟ್ಟು 2 ಚಮಚ, ಮೆಣಸಿನ ಹುಡಿ 1 ಚಮಚ, ಜೀರಿಗೆ, ಓಮದ ಕಾಳು ಸ್ವಲ್ಪ , ಇಂಗು, ಉಪ್ಪು$, ಕರಿಯಲು ಬೇಕಾದಷ್ಟು ಎಣ್ಣೆ, 

ತಯಾರಿಸುವ ವಿಧಾನ : ಹೀರೇಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ವೃತ್ತಾಕಾರವಾಗಿ ಕತ್ತರಿಸಿ. ನಂತರ ಕಡ್ಲೆಹಿಟ್ಟು , ಅಕ್ಕಿಹಿಟ್ಟು, ಮೆಣಸಿನ ಪುಡಿ, ಇಂಗು, ಉಪ್ಪನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಹಿಟ್ಟು ತಯಾರಿಸಿ. ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪ ಇರಬೇಕು. ಬಳಿಕ ಎಣ್ಣೆ ಕಾಯಿಸಿ ಕತ್ತರಿಸಿದ ಹೀರೇಕಾಯಿ ತುಂಡುಗಳನ್ನು ಕಲಸಿಟ್ಟ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ಬಿಸಿಬಿಸಿಯಿರುವಾಗಲೇ ಚಹಾ, ಕಾಫಿಯ ಜೊತೆ ಸವಿಯಿರಿ.

ಹೀರೇಕಾಯಿ ದೋಸೆ
ಬೇಕಾಗುವ ಸಾಮಗ್ರಿ: ಸಣ್ಣ ಹೀರೇಕಾಯಿ - 1, ಅಕ್ಕಿ-1 ಕಪ್‌, ಕಾಯಿತುರಿ 1/2 ಕಪ್‌, ಒಣಮೆಣಸಿನಕಾಯಿ - 2, ಹುಣಸೇಹಣ್ಣು ಸ್ವಲ್ಪ$, ಬೆಲ್ಲ ನಿಂಬೆ ಗಾತ್ರ, ಕೊತ್ತಂಬರಿಬೀಜ 1 ಚಮಚ, ಜೀರಿಗೆ ಅರ್ಧ ಚಮಚ, ಉಪ್ಪು$ರುಚಿಗೆ, ಎಣ್ಣೆ .

ತಯಾರಿಸುವ ವಿಧಾನ : ಮೊದಲಿಗೆ ಅಕ್ಕಿಯನ್ನು ತೊಳೆದು ನೆನೆಸಿಕೊಳ್ಳಿ. ಹೀರೇಕಾಯಿಯನ್ನು ಸಿಪ್ಪೆ ತೆಗೆದು ಸಣ್ಣಸಣ್ಣದಾಗಿ ಹೆಚ್ಚಿಕೊಳ್ಳಿ . ನಂತರ ಅಕ್ಕಿಗೆ ತೆಂಗಿನತುರಿ, ಕೊತ್ತಂಬರಿಬೀಜ, ಜೀರಿಗೆ, ಬೆಲ್ಲ, ಉಪ್ಪು$, ಹುಣಸೇಹಣ್ಣು, ಒಣಮೆಣಸಿನಕಾಯಿ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ . ರುಬ್ಬಿದ ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಲಿ. ಬಳಿಕ ಹೆಚ್ಚಿಕೊಂಡ ಹೀರೇಕಾಯಿಯನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬೆರೆಸಿ. ಬಳಿಕ ದೋಸೆ ಕಾವಲಿಗೆ ಎಣ್ಣೆ ಸವರಿ ದೋಸೆ ಹೊಯ್ದು ಬೇಕಾದರೆ ಅದರ ಮೇಲೆ ಸ್ವಲ್ಪ ತುಪ್ಪ ಸವರಿ ಮುಚ್ಚಿ ಬೇಯಿಸಿ. ಉಪ್ಪು, ಖಾರ, ಹುಳಿ, ಬೆಲ್ಲ ಹಾಕಿರುವುದರಿಂದ ಚಟ್ನಿ ಬೇಕಾಗಿಲ್ಲ. ತಿನ್ನಲು ರುಚಿಯಾಗಿರುತ್ತದೆ.

ಹೀರೇಕಾಯಿ ರೊಟ್ಟಿ
ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು 1 ಕಪ್‌, ತುರಿದ ಹೀರೇಕಾಯಿ 1 ಕಪ್‌, ಮೊಸರು 1/2 ಕಪ್‌, ಕ್ಯಾರೆಟ್‌ ತುರಿ 1/4 ಕಪ್‌, ತೆಂಗಿನತುರಿ-1/2 ಕಪ್‌, ಸಣ್ಣದಾಗಿ ಹೆಚ್ಚಿದ ಈರುಳ್ಳಿ 1, ಕೊತ್ತಂಬರಿ ಸೊಪ್ಪು$ಸ್ವಲ್ಪ, ಜೀರಿಗೆ 1 ಚಮಚ, ಉಪ್ಪು$ರುಚಿಗೆ, ಅವಲಕ್ಕಿ 1 ಕಪ್‌, ಹಸಿಮೆಣಸಿನಕಾಯಿ 2, ಎಣ್ಣೆ .

ತಯಾರಿಸುವ ವಿಧಾನ:  ಅವಲಕ್ಕಿಯನ್ನು ತೊಳೆದು ಮೊಸರಿನಲ್ಲಿ ನೆನೆಸಿಕೊಳ್ಳಿ, ಬಳಿಕ ಹೀರೇಕಾಯಿ, ಕ್ಯಾರೆಟ್‌, ಈರುಳ್ಳಿಯನ್ನು ತುರಿದುಕೊಳ್ಳಿ. ಬಳಿಕ ಅಕ್ಕಿಹಿಟ್ಟಿಗೆ ತುರಿದ ಹೀರೇಕಾಯಿ, ಕ್ಯಾರೆಟ…, ತೆಂಗಿನತುರಿಯನ್ನು ಹಾಕಿ. ಬಳಿಕ ಕೊತ್ತಂಬರಿ ಸೊಪ್ಪು , ನೆನೆಸಿಟ್ಟ ಅವಲಕ್ಕಿ, ಜೀರಿಗೆ ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ ಮಿಶ್ರಣ ಮಾಡಿಕೊಳ್ಳಿ. ಹೀರೆಕಾಯಿಯಲ್ಲಿ ನೀರಿನಂಶ ಇರುವುದರಿಂದ ಬೇಕಾದರೆ ಮಾತ್ರ ಸ್ವಲ್ಪ ನೀರು ಸೇರಿಸಿ ರೊಟ್ಟಿಯ ಹಿಟ್ಟಿನ ಹದಕ್ಕೆ ಕಲಸಿ. ನಂತರ ಒಂದು ಬಾಳೆಲೆಯಲ್ಲಿ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಹಾಕಿ ತೆಳುವಾಗಿ ರೊಟ್ಟಿ ತಟ್ಟಿ ಕಾದ ಕಾವಲಿಗೆ ಎಣ್ಣೆ ಸವರಿ ಎರಡೂ ಬದಿ ಕೆಂಪಗೆ ಹದವಾಗಿ ಬೇಯಿಸಿ ಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಸ್ವಾತಿ

Trending videos

Back to Top