CONNECT WITH US  

ಹಬ್ಬಕ್ಕಾಗಿ ಉಂಡೆಗಳು

ಹಬ್ಬಗಳು ಬಂದಾಕ್ಷಣ ಸಾಮಾನ್ಯವಾಗಿ ಏನಾದರೊಂದು ಬಗೆಯ ಸಿಹಿ ಬೇಕೇಬೇಕು. ಇಲ್ಲಿವೆ ಕೆಲವು ಸಿಹಿಸಿಹಿ ಉಂಡೆಗಳ ರಿಸಿಪಿ.

ಗೋಧಿ ಖರ್ಜೂರದ ಉಂಡೆ
ಬೇಕಾಗುವ ಸಾಮಗ್ರಿ : ಗೋಧಿಹುಡಿ- ಒಂದು ಕಪ್‌, ಕಡ್ಲೆಹುಡಿ - ಒಂದು ಕಪ್‌, ಕೊಬ್ಬರಿ ತುರಿ - ಅರ್ಧ ಕಪ್‌,  ಖರ್ಜೂರದ ತರಿ - ನಾಲ್ಕು ಚಮಚ, ಸಕ್ಕರೆಹುಡಿ - ಒಂದು ಕಪ್‌, ತುಪ್ಪ - ಅರ್ಧ ಕಪ್‌, ದ್ರಾಕ್ಷಿ-ಗೋಡಂಬಿ - ನಾಲ್ಕು ಚಮಚ, ಏಲಕ್ಕಿ - ಸುವಾಸನೆಗಾಗಿ.
ತಯಾರಿಸುವ ವಿಧಾನ : ಸಕ್ಕರೆಗೆ ಏಲಕ್ಕಿ ಸೇರಿಸಿ ಪುಡಿ ಮಾಡಿಡಿ. ಬಾಣಲೆಗೆ ಸ್ವಲ್ಪ$ ತುಪ್ಪ ಹಾಕಿ ಕೊಬ್ಬರಿ, ಗೋಡಂಬಿ, ದ್ರಾಕ್ಷಿ ಇವನ್ನು ಬೇರೆಬೇರೆಯಾಗಿ ಹುರಿದು ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಅದೇ ಬಾಣಲೆಯಲ್ಲಿ ಗೋಧಿಹುಡಿ ಮತ್ತು ಕಡ್ಲೆಹುಡಿಯನ್ನು ಬೇರೆಬೇರೆಯಾಗಿ ಘಂ ಎಂದು ಹುರಿದು ಮಿಕ್ಸಿಂಗ್‌ ಬೌಲ್‌ಗೆ ಹಾಕಿಡಿ. ಇದು ಆರಿದ ಮೇಲೆ, ಸಕ್ಕರೆಪುಡಿ ಮತ್ತು ಬೇಕಷ್ಟು ಬಿಸಿತುಪ್ಪ ಸೇರಿಸಿಕೊಂಡು ಉಂಡೆ ಕಟ್ಟಿ.

ಕಡ್ಲೆ ಬೇಳೆ ಸಿಹಿ ಉಂಡೆ
ಬೇಕಾಗುವ ಸಾಮಗ್ರಿ : ಕಡ್ಲೆಬೇಳೆ - ಎರಡು ಕಪ್‌, ಬೆಲ್ಲದ ಪುಡಿ - ಎರಡು ಕಪ್‌, ತುಪ್ಪ - ನಾಲ್ಕು ಚಮಚ, ಒಣ ಕೊಬ್ಬರಿ - ಅರ್ಧ, ದ್ರಾಕ್ಷಿ-ಗೋಡಂಬಿ - ನಾಲ್ಕು ಚಮಚ, ಏಲಕ್ಕಿ - ಸುವಾಸನೆಗಾಗಿ.

ತಯಾರಿಸುವ ವಿಧಾನ : ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಗಟ್ಟಿಪಾಕ ಮಾಡಿಕೊಳ್ಳಿ. ನೀರಿಗೆ ಪಾಕವನ್ನು ಹಾಕಿದಾಗ ಗಟ್ಟಿಯಾಗಬೇಕು ಕಡ್ಲೆಬೇಳೆಯನ್ನು ಹುರಿದು ತರಿತರಿಯಾಗಿ ಪುಡಿಮಾಡಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಇದಕ್ಕೆ ತುಪ್ಪ ಹಾಗು ಹುರಿದಕೊಬ್ಬರಿ, ಗೇರುಬೀಜ, ದ್ರಾಕ್ಷಿ, ಏಲಕ್ಕಿ ಪುಡಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ಬೇಕಷ್ಟು ಬೆಲ್ಲದ ಪಾಕ ಸೇರಿಸಿಕೊಂಡು ಉಂಡೆ ಕಟ್ಟಿ. 

ರವೆ ಉಂಡೆ
ಬೇಕಾಗುವ ಸಾಮಗ್ರಿ : ಬೋಂಬೆ ರವೆ - ಒಂದು ಕಪ್‌, ಸಕ್ಕರೆ - ಒಂದು ಕಪ್‌, ತುಪ್ಪ - ಕಾಲು ಕಪ್‌, ಗೋಡಂಬಿ- ದ್ರಾಕ್ಷಿ - ಎಂಟು ಚಮಚ, ಏಲಕ್ಕಿ - ಸುವಾಸನೆಗಾಗಿ.
ತಯಾರಿಸುವ ವಿಧಾನ : ಬಾಣಲೆಗೆ ಸ್ವಲ್ಪ$ ತುಪ್ಪ ಹಾಕಿಕೊಂಡು ಗೋಡಂಬಿ, ದ್ರಾಕ್ಷಿ, ಮತ್ತು ರವೆಯನ್ನು ಬೇರೆಬೇರೆಯಾಗಿ ಹುರಿದಿಟ್ಟುಕೊಳ್ಳಿ. ಸಕ್ಕರೆಗೆ ಸ್ವಲ್ಪ ನೀರು ಹಾಕಿ ಪಾಕಕ್ಕಿಡಿ. ಇದು ಒಂದೆಳೆ ಪಾಕಕ್ಕೆ ಬಂದ ಕೂಡಲೇ ಇದಕ್ಕೆ ಏಲಕ್ಕಿಪುಡಿ ಹಾಕಿ ಒಲೆಯಿಂದ ಇಳಿಸಿ. ನಂತರ ಹುರಿದಿಟ್ಟ ರವೆ ಗೋಡಂಬಿ ಇತ್ಯಾದಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸ್ವಲ್ಪ$ ಆರಿದ ಮೇಲೆ ಉಂಡೆ ಕಟ್ಟಿ.

ಪೌಷ್ಟಿಕ ಉಂಡೆ
ಬೇಕಾಗುವ ಸಾಮಗ್ರಿ : ರಾಗಿಹುಡಿ - ಒಂದು ಕಪ್‌, ಗೋಧಿಹುಡಿ - ಒಂದು ಕಪ್‌, ಬೆಲ್ಲದಪುಡಿ - ಎರಡು ಕಪ್‌, ತುಪ್ಪ - ನಾಲ್ಕು ಚಮಚ, ನೆಲಕಡ್ಲೆ ಬೀಜ - ಎಂಟು ಚಮಚ, ಕೊಬ್ಬರಿ ತರಿ - ಅರ್ಧ ಕಪ್‌, ಗೋಡಂಬಿ- ದ್ರಾಕ್ಷಿ - ನಾಲ್ಕು ಚಮಚ, ಏಲಕ್ಕಿ - ಸುವಾಸನೆಗಾಗಿ.

ತಯಾರಿಸುವ ವಿಧಾನ : ಬೆಲ್ಲವನ್ನು ಗಟ್ಟಿಪಾಕ ಮಾಡಿಕೊಳ್ಳಿ. ಮೇಲೆ ತಿಳಿಸಿದ ಎÇÉಾ ಸಾಮಗ್ರಿಗಳನ್ನು ಬೇರೆಬೇರೆಯಾಗಿ ಹುರಿದು ಮಿಕ್ಸಿಂಗ್‌ ಬೌಲ್‌ಗೆ ಹಾಕಿಡಿ. ಇದಕ್ಕೆ ತುಪ್ಪ  ಸೇರಿಸಿ ಮಿಶ್ರಮಾಡಿ. ನಂತರ ಬೇಕಷ್ಟು ಬೆಲ್ಲ ಪಾಕ ಸೇರಿಸಿಕೊಂಡು ಉಂಡೆ ಕಟ್ಟಿ.

ಪುರಿ ಉಂಡೆ
ಬೇಕಾಗುವ ಸಾಮಗ್ರಿ : ಪುರಿ - ಮೂರು ಕಪ್‌, ಬೆಲ್ಲದ ಪುಡಿ - ಒಂದೂವರೆ ಕಪ್‌, ಕೊಬ್ಬರಿ, ಗೋಡಂಬಿ, ನೆಲಕಡ್ಲೆ ಬೀಜ - ತಲಾ ನಾಲ್ಕು ಚಮಚ.

ತಯಾರಿಸುವ ವಿಧಾನ : ಹುರಿಯಕ್ಕಿಯನ್ನು ಹುರಿದಿಡಿ. ಬೆಲ್ಲವನ್ನು ಗಟ್ಟಿ ಪಾಕ ಮಾಡಿಕೊಳ್ಳಿ. ನೆಲಕಡ್ಲೆಯನ್ನು ಹುರಿದು ಸಿಪ್ಪೆ$ ತೆಗೆದು ತರಿತರಿಯಾಗಿಸಿ. ಕೊಬ್ಬರಿ ಮತ್ತು ಗೋಡಂಬಿಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದಿಡಿ. ಎಲ್ಲವನ್ನೂ ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಬೇಕಷ್ಟು ಬೆಲ್ಲಪಾಕ ಸೇರಿಸಿಕೊಂಡು ಉಂಡೆ ಕಟ್ಟಿ.

ಗೀತಾಸದಾ

Trending videos

Back to Top