CONNECT WITH US  

ಬಾದಾಮಿ ಪಾಯಸ

ಬೇಕಾಗುವ ಸಾಮಗ್ರಿ: ಶ್ಯಾವಿಗೆ 3 ಚಮಚ, ಸಪ್ಪೆ ಖೋವಾ 3 ಚಮಚ, ಕುಂಕುಮ ಕೇಸರಿ 2 ಎಸಳು, ಏಲಕ್ಕಿ ಪುಡಿ 1 ಚಮಚ, ತುಪ್ಪ 1 ಚಮಚ, ಬಾದಾಮಿ 10, ಹಾಲು ಅರ್ಧ ಲೀಟರ್‌, ಸಕ್ಕರೆ 5 ಚಮಚ, ಒಣದ್ರಾಕ್ಷಿ 10 ರಿಂದ 15, ಗೋಡಂಬಿ 10.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ ಕಾಯಿಸಿ. ಬಿಸಿತುಪ್ಪಕ್ಕೆ ಶ್ಯಾವಿಗೆ, ಗೋಡಂಬಿ, ದ್ರಾಕ್ಷಿ ಹಾಕಿ ಹದವಾಗಿ ಹುರಿದುಕೊಳ್ಳಿ. ಬಾದಾಮಿ,
ಉಳಿದ ಗೋಡಂಬಿ ಹಾಗೂ ಖೋವಾ ಸೇರಿಸಿ ನುಣ್ಣಗೆ ರುಬ್ಬಿ. ಕಾಯಿಸಿದ ಹಾಲಿಗೆ ಹಾಕಿ ಮಿಕ್ಸ್‌ ಮಾಡಿ. ಹುರಿದ ಶ್ಯಾವಿಗೆಯನ್ನು ಸೇರಿಸಿ ಕುದಿಬಂದ ಮೇಲೆ ಒಲೆಯಿಂದ ಇಳಿಸಿ. ಆರಲು ಬಿಡಿ. ತಂಪಾದ ಮೇಲೆ ತಿನ್ನಿ.
- ಚಂದ್ರಪ್ಪ

Trending videos

Back to Top