CONNECT WITH US  

ಮಳೆಗಾಲಕ್ಕಾಗಿ ಪೂರಿವೈವಿಧ್ಯ

ಹೊರಗೆ ಮಳೆ ಬೀಳುತ್ತಿರುವಾಗ, ಮನೆಯಲ್ಲಿಯೇ ರುಚಿಕರ, ಆರೋಗ್ಯಕರ ತಿನಿಸುಗಳನ್ನು ತಿನ್ನಬೇಕೆಂದು ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಮನಸ್ಸು ಬಯಸುತ್ತದೆ. ಮಾಡಿ ನೋಡಿ ಈ ಕರಿದ ತಿಂಡಿಗಳನ್ನು.

ಖಾರದ ಪೂರಿ
ಬೇಕಾಗುವ ಸಾಮಗ್ರಿ: 1 ಕಪ್‌ ಬೇಯಿಸಿ ಮಸೆದ ಆಲೂ, 1 ಕಪ್‌ ಗೋಧಿ ಹಿಟ್ಟು, 1-2 ಹಸಿಮೆಣಸು, 2 ಚಮಚ ಈರುಳ್ಳಿ ಚೂರು, 2 ಚಮಚ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ‌ ವಿಧಾನ: ಹಸಿಮೆಣಸು, ಈರುಳ್ಳಿ ಚೂರು, ಕೊತ್ತಂಬರಿಸೊಪ್ಪು ರುಬ್ಬಿ. ನಂತರ ಬೇಯಿಸಿ ಮಸೆದ ಆಲೂ, ಗೋಧಿಹಿಟ್ಟು, ರುಬ್ಬಿದ ಮಿಶ್ರಣ ಎಲ್ಲಾ ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಪೂರಿ ಲಟ್ಟಿಸಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಚಟ್ನಿ ಇಲ್ಲದೆ ಸಂಜೆಯ ಕಾಫಿ, ಟೀಯೊಂದಿಗೆ ತಿನ್ನಲು ಸ್ವಾದಿಷ್ಟವಾಗಿರುತ್ತದೆ.

ಓಟ್ಸ್‌ ಪೂರಿ
ಬೇಕಾಗುವ ಸಾಮಗ್ರಿ:  1 ಕಪ್‌ ಓಟ್ಸ್‌ ಪುಡಿ, 1 ಕಪ್‌ ಗೋಧಿಹಿಟ್ಟು , 1/2 ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ .

ತಯಾರಿಸುವ‌ ವಿಧಾನ: ಓಟ್ಸ್‌ ಪುಡಿ, ಗೋಧಿಹಿಟ್ಟು , ಜೀರಿಗೆ, ಉಪ್ಪು , ಸ್ವಲ್ಪ ನೀರು ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ. ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಲಟ್ಟಿಸಿ. ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ.

ಸರಸ್ವತಿ

Trending videos

Back to Top