CONNECT WITH US  

ಕ್ಯಾರೆಟ್‌ ಸ್ಪೆಷಲ್‌

ಕಬ್ಬಿಣಾಂಶ, ಕ್ಯಾಲ್ಸಿಯಂ, ಕಾಬೋìಹೈಡ್ರೇಟ್ಸ್‌, ನಾರಿನಾಂಶ, ವಿಟಮಿನ್‌-ಎ, ವಿಟಮಿನ್‌-ಸಿ ಇತ್ಯಾದಿ ಉತ್ತಮ ಅಂಶಗಳನ್ನೊಳಗೊಂಡ "ಕ್ಯಾರೆಟ್‌'ನ್ನು ಹಲವಾರು ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು. ಇಲ್ಲಿವೆ ಕೆಲವು ರೆಸಿಪಿಗಳು.

ಕ್ಯಾರೆಟ್‌ ಕಚೋರಿ
ಬೇಕಾಗುವ ಸಾಮಗ್ರಿ : ಕ್ಯಾರೆಟ್‌ ತುರಿ - ಒಂದು ಕಪ್‌, ಸಕ್ಕರೆ - ಅರ್ಧ ಕಪ್‌, ತೆಂಗಿನ ತುರಿ - ಕಾಲು ಕಪ್‌, ಬಾದಾಮಿ ಮತ್ತು ಗೋಡಂಬಿ ಚೂರುಗಳು - ನಾಲ್ಕು ಚಮಚ, ಮೈದಾ ಹುಡಿ - ಒಂದು ಕಪ್‌, ಚಿರೋಟಿ ರವೆ - ಎರಡು ಚಮಚ, ಅರಸಿನ - ಕಾಲು ಚಮಚ, ಉಪ್ಪು - ರುಚಿಗೆ.

ತಯಾರಿಸುವ ವಿಧಾನ : ಮಿಕ್ಸಿಂಗ್‌ ಬೌಲ್‌ನಲ್ಲಿ ಮೈದಾ, ಚಿರೋಟಿ ರವೆ, ಅರಸಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ. ಬಾಣಲೆಗೆ ನಾಲ್ಕು ಚಮಚ ತುಪ್ಪ ಹಾಕಿ ಕ್ಯಾರೆಟ್‌ನ್ನು ಹಸಿವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಿ. ನಂತರ, ಇದಕ್ಕೆ ಕೊಬ್ಬರಿ ತುರಿ, ಗೋಡಂಬಿ, ಬಾದಾಮಿ ಸೇರಿಸಿ ಬಾಡಿಸಿಕೊಂಡು ಕೊನೆಗೆ ಸಕ್ಕರೆ ಹಾಕಿ ಮಗುಚಿ ಒಲೆಯಿಂದ ಇಳಿಸಿ. ಕಲಸಿಟ್ಟ ಹಿಟ್ಟನ್ನು ಸಣ್ಣ ಚಪಾತಿಯ ಹದಕ್ಕೆ ಲಟ್ಟಿಸಿ ಒಳಗೆ ಚೂರ್ಣ ತುಂಬಿ ಕಚೋರಿಯ ಶೇಪ್‌ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಕ್ಯಾರೆಟ್‌ ಸೂ¾ದಿ

ಬೇಕಾಗುವ ಸಾಮಗ್ರಿ: ಕ್ಯಾರೆಟ್‌ - ಒಂದು, ಬಾಳೆ ಹಣ್ಣು - ಒಂದು, ಗೋಡಂಬಿ - ನಾಲ್ಕು, ಖರ್ಜೂರ - ನಾಲ್ಕು, ಹಾಲು - ಎರಡು ಕಪ್‌, ಸಕ್ಕರೆ - ಆರು ಚಮಚ.

ತಯಾರಿಸುವ  ವಿಧಾನ : ಅರ್ಧ ಕಪ್‌ ಹಾಲು, ಅರ್ಧ ಕಪ್‌ ನೀರು ಸೇರಿಸಿ ಹೆಚ್ಚಿಟ್ಟುಕೊಂಡ ಕ್ಯಾರೆಟ್‌ನ್ನು ಬೇಯಿಸಿಕೊಳ್ಳಿ. ಆರಿದ ಮೇಲೆ ಇದಕ್ಕೆ ಉಳಿದ ಹಾಲು, ಬಾಳೆ ಹಣ್ಣು, ಖರ್ಜೂರ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಫ್ರಿಜ್‌ನಲ್ಲಿಟ್ಟು ತಂಪಾಗಿಸಿ. ಐಸ್‌ಫೀಸ್‌ ಸೇರಿಸಿ ಸರ್ವ್‌ ಮಾಡಿ.

ಕ್ಯಾರೆಟ್‌ ಸೂಪ್‌
ಬೇಕಾಗುವ ಸಾಮಗ್ರಿ : ಕ್ಯಾರೆಟ್‌ ತುರಿ - ಒಂದು ಕಪ್‌, ಟೊಮೆಟೋ - ನಾಲ್ಕು, ಹೆಚ್ಚಿದ ಈರುಳ್ಳಿ - ಅರ್ಧ ಕಪ್‌, ಲವಂಗ - ನಾಲ್ಕು, ಕಾಳುಮೆಣಸು - ಆರು, ಚೆಕ್ಕೆ - ಅರ್ಧ ಇಂಚು , ಸಕ್ಕರೆ - ಎರಡು ಚಮಚ, ಉಪ್ಪು - ರುಚಿಗೆ, ಲಿಂಬೆ - ಅರ್ಧ, ಮೈದಾ - ಎರಡು ಚಮಚ.

ತಯಾರಿಸುವ ವಿಧಾನ : ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಈರುಳ್ಳಿ ಫ್ರೆ„ ಮಾಡಿ, ನಂತರ ಇದಕ್ಕೆ ಕ್ಯಾರೆಟ್‌ ಸೇರಿಸಿ ಬಾಡಿಸಿಕೊಳ್ಳಿ. ಕೊನೆಗೆ ಎರಡು ಚಮಚ ಮೈದಾ ಸೇರಿಸಿ ಮಿಶ್ರಮಾಡಿ ಒಲೆಯಿಂದ ಇಳಿಸಿ. ಮಿಕ್ಸಿಜಾರಿಗೆ ಆರಿದ ಕ್ಯಾರೆಟ್‌ ಮಿಶ್ರಣ, ಬೇಯಿಸಿದ ಟೊಮೆಟೋಗಳನ್ನು ಹಾಕಿ ರುಬ್ಬಿ. ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಮಿಶ್ರಣ, ಉಪ್ಪು , ಬೇಕಾದಷ್ಟು ನೀರು, ಮೆಣಸಿನಹುಡಿ, ಸಕ್ಕರೆ, ಕೊತ್ತಂಬರಿಸೊಪ್ಪು$, ಜಜ್ಜಿದ ಚೆಕ್ಕೆ, ಕಾಳುಮೆಣಸು, ಲವಂಗ ಇತ್ಯಾದಿಗಳನ್ನು ಸೇರಿಸಿ ಕುದಿಸಿ. ಸರ್ವ್‌ ಮಾಡುವಾಗ ಲಿಂಬೆರಸ, ಹುರಿದ ಬ್ರೆಡ್‌ ಚೂರುಗಳು ಅಥವಾ ಖಾರ ಸೇಮೆಯನ್ನು ಸೇರಿಸಬಹುದು.

ಕ್ಯಾರೆಟ್‌ ವಿದ್‌ ನೆಲ್ಲಿಕಾಯಿಜ್ಯೂಸ್‌
ತಯಾರಿಸುವ ವಿಧಾನ : ಕ್ಯಾರೆಟ್‌ ತುರಿ - ಒಂದು ಕಪ್‌, ನೆಲ್ಲಿಕಾಯಿ - ಎರಡು, ಸಕ್ಕರೆ - ಆರು ಚಮಚ, ಜೇನುತುಪ್ಪ - ಎರಡು ಚಮಚ, ಚಿಟಿಕಿ ಏಲಕ್ಕಿ ತರಿ- ಬೇಕಿದ್ದರೆ ಮಾತ್ರ.
ತಯಾರಿಸುವ ವಿಧಾನ : ಮಿಕ್ಸಿಜಾರಿಗೆ ಕ್ಯಾರೆಟ್‌ ತುರಿ, ಹೆಚ್ಚಿದ ನೆಲ್ಲಿಕಾಯಿ, ಸಕ್ಕರೆ ಹಾಕಿ ನುಣ್ಣಗೆ ರುಬ್ಬಿ. ನಂತರ, ಬೇಕಷ್ಟು ನೀರು ಸೇರಿಸಿ ಪುನಃ ರುಬ್ಬಿ. ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಬೇಕಾದಷ್ಟು ಕೋಲ್ಡ್‌ ನೀರು ಹಾಗು ಜೇನುತುಪ್ಪ ಸೇರಿಸಿ ಕಲಕಿ ಸರ್ವ್‌ ಮಾಡಬಹುದು.

ಕ್ಯಾರೆಟ್‌ ಐಸ್‌ಕ್ರೀಮ್‌
ಬೇಕಾಗುವ ಸಾಮಗ್ರಿ : ಕ್ಯಾರೆಟ್‌ ತುರಿ - ಅರ್ಧ ಕಪ್‌, ಹಾಲು - ಎರಡು ಕಪ್‌, ಕಾರ್ನ್ ಫ್ಲೋರ್‌ - ಒಂದು ಚಮಚ, ಕಸ್ಟರ್ಡ್‌ ಪುಡಿ - ಒಂದು ಚಮಚ, ಸಕ್ಕರೆ - ಆರು ಚಮಚ, ಹಾಲಿನಪುಡಿ - ಎರಡು ಚಮಚ. ಬಾದಾಮಿ, ಗೋಡಂಬಿ ತರಿ - ನಾಲ್ಕು ಚಮಚ.

ತಯಾರಿಸುವ ವಿಧಾನ : ಒಂದೂವರೆ ಕಪ್‌ ಹಾಲು ಕುದಿಯಲು ಇಟ್ಟು ಇದಕ್ಕೆ ನೀರಿನಲ್ಲಿ ಕಲಸಿದ ಕಾರ್ನ್ಫ್ಲೋರ್‌ ಕಸ್ಟರ್ಡ್‌, ಹಾಲಿನ ಪುಡಿ, ಸಕ್ಕರೆ ಇವುಗಳನ್ನು ಒಂದೊಂದಾಗಿ ಸೇರಿಸುತ್ತಾ ಸಣ್ಣ ಉರಿಯಲ್ಲಿ ಮಗುಚುತ್ತಾ ಚೆನ್ನಾಗಿ ಕುದಿಸಿ. ಇದು ಆರಿದ ಮೇಲೆ ಹಾಲಿನಲ್ಲಿ ಬೇಯಿಸಿದ ಕ್ಯಾರೆಟ್‌ ಜೊತೆ ಮಿಕ್ಸಿಜಾರಿಗೆ ಹಾಕಿ ರುಬ್ಬಿ. ನಂತರ, ಇದಕ್ಕೆ ಗೋಡಂಬಿ ಬಾದಾಮಿ ತರಿಗಳನ್ನು ಸೇರಿಸಿ ಚೆನ್ನಾಗಿ ಕಲಕಿ ಫ್ರೀಜರ್‌ನಲ್ಲಿಟ್ಟು ಗಟ್ಟಿಮಾಡಿ ಚೆರಿಯಿಂದ ಅಲಂಕರಿಸಿ ಸರ್ವ್‌ಮಾಡಿ.    

ಗೀತಾಸದಾ  ಮೋಂತಿಮಾರು

Trending videos

Back to Top