CONNECT WITH US  

ಸಮಾಜ ಕಟ್ಟುವುದೆಂದರೆ ದೇಶ ಕಟ್ಟುವುದು

ಮುಂಬಯಿ: ಭಂಡಾರಿ ಸೇವಾ ಸಮಿತಿ ಮುಂಬಯಿ (ರಿ.) ಇದರ ವಜ್ರ ಮಹೋತ್ಸವ ಸಮಾರಂಭ ಆದಿತ್ಯವಾರ ಕುರ್ಲಾ ಪೂರ್ವದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗಹದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪುತ್ತೂರು (ಪುಣೆ) ಅವರು ದೀಪ ಬೆಳಗಿಸಿ ಬೆಳಿಗ್ಗೆ ವಜ್ರ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.

ಸಂಜೆ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪುತ್ತೂರು ಅಧ್ಯಕ್ಷತೆಯಲ್ಲಿ ಸಮಾರೋಪ ಹಾಗೂ ಸನ್ಮಾನ ಸಮಾರಂಭ ನಡೆದಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಿವಂಡಿ ನಗರಪಾಲಿಕೆಯ ನಗರಸೇವಕ ಸಂತೋಷ್‌ ಎಂ.ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಸಮಿತಿಯ ವಜೊÅàತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಗೌರವ ಅತಿಥಿಗಳಾಗಿ ಭಿವಂಡಿ ನಗರಸೇವಕಿ ಶ್ರೀಮತಿ ಶಶಿಲತಾ ಸಂತೋಷ ಶೆಟ್ಟಿ, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಮಾಧವ ಕೂಳೂರು, ನಿಕಟಪೂರ್ವ ಅಧ್ಯಕ್ಷ ಕಡಂದಲೆ ಸುರೇಶ್‌ ಎಸ್‌.ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ಭಂಡಾರಿ, ಉದ್ಯಮಿ ನಿತ್ಯಾನಂದ ಭಂಡಾರಿ ದುಬಾಯಿ, ಸ್ಟೆŒ„ಲೋ ಹೇರ್‌ ಡಿಸೆ„ನರ್ನ ಆಡಳಿತ ನಿರ್ದೇಶಕ ಅತ್ತೂರು ಶಿವರಾಮ ಭಂಡಾರಿ, ಉಡುಪಿ ನಗರ ಸಭಾ ಸದಸ್ಯ ನವೀನ್‌ ಎನ್‌.ಭಂಡಾರಿ, ಕಚ್ಚಾರು ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಗಂಗಾಧರ ಭಂಡಾರಿ ಬಿರ್ತಿ, ಭಂಡಾರಿ ಸಂಘ ಬೆಂಗಳೂರು ಅಧ್ಯಕ್ಷ ಶೇಖರ ಭಂಡಾರಿ ಮ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಸಮಾಜ ಕಟ್ಟುವುದು ಎಂದರೆ ದೇಶಕಟ್ಟುವುದು ಎಂದರ್ಥ. ತಾವೆಲ್ಲರೂ ಭಂಡಾರಿಗಳೆಂದು ಎದೆತಟ್ಟಿ ತಮ್ಮ ಸಮಾಜವನ್ನು ಗುರುತಿಸಬೇಕು. ಆವಾಗಲೇ ಅಖಂಡ ಸಮಾಜದಿಂದ ಗುರುತಿಸಲ್ಪಡಲು ಸಾಧ್ಯ. ಕುಲ-ಸಮಾಜವನ್ನು ತಿಳಿಸಲು ಹಿಂಜರಿಕೆ ಸಲ್ಲದು. ಏಕೀಭಾವ ಇಲ್ಲದಿದ್ದರೆ ಏನೂ ಸಾಧಿಸಲು ಅಸಾಧ್ಯ. ತಮ್ಮ ಸ್ವಂತಿಕೆಯ ಸಮುದಾಯವನ್ನು ಗೌರವಿಸಿದರೆ ಇತರೇ ಸಮಾಜಗಳೂ ತಮ್ಮನ್ನು ಗೌರವಿಸುತ್ತವೆ. ಮನಸ್ತಾಪಗಳಿಂದ ಮುಕ್ತರಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಸಂಘಟಿತರಾದರೆ ಸಮುದಾಯದ ಸಾಂಘಿತ್ವದಿಂದ ಸಭಾಗಹ ಮಾತ್ರವಲ್ಲ ವಿಶ್ವವನ್ನೇ ಕಟ್ಟಲು ಸಾಧ್ಯ ಎಂದು ಸಂತೋಷ್‌ ಎಂ.ಶೆಟ್ಟಿ ತಿಳಿಸಿದರು.

ಸದಸ್ಯರೇ ಸಂಸ್ಥೆಯ ರೂವಾರಿಗಳು. ಸಂಸ್ಥೆ ಏನಾದರೂ ಸಾಧಿಸಿದರೆ ಅದು ಸದಸ್ಯರ ಒಳಿತಿಗೆ ಪೂರಕವಾಗುವುದೇ ವಿನಃ ಸಂಸ್ಥೆಯ ಪದಾಧಿಕಾರಿಗಳಿಗಲ್ಲ. ಆದುದರಿಂದ ಎಲ್ಲಾ ಸದಸ್ಯರು ಸಕ್ರಿಯರಾಗಿ ಸಮಿತಿಯನ್ನು ಬಲ ಪಡಿಸಿದರೆ ಮಾತ್ರ ಸಮಾಜೋದ್ಧಾರ ಸಾಧ್ಯ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಬಾಲಕೃಷ್ಣ ಪುತ್ತೂರು ತಿಳಿಸಿದರು.

ಸಮಾರಂಭದಲ್ಲಿ ಭಂಡಾರಿ ಸಮಾಜದ ಸಾಧಕರುಗಳಾದ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದ ಜೀಣೊìàದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ವಿಜಯ ಭಂಡಾರಿ ಬೆ„ಲೂರು, ನಿಕಟಪೂರ್ವ ಆಡಳಿತ ಮೊಕ್ತೇಸರ ಸುಭಾಶ್‌ ಭಂಡಾರಿ ಕಚ್ಚಾರು, ಶ್ರೀಮತಿ ವಿದ್ಯಾ ಪ್ರಕಾಶ್‌ ಭಂಡಾರಿ ಕಟ್ಲ (ಬ್ಯೂಟಿ ಸಲೂನ್‌ ಮತ್ತು ಸ್ಪಾ ಸಂಸ್ಥೆಯ ಸಲಹಾಗಾರ್ತಿ), ಮತ್ತು ಮುಂಬಯಿ ಸಮಿತಿಯಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ ನ್ಯಾ| ಕೆ.ಡಿ.ಕಾರ್ಕಳ ಪರವಾಗಿ (ಅವರ ಸಂಬಂಧಿ ಶ್ರೀಮತಿ ಪ್ರೇಮಾ ಭಂಡಾರಿ), ಮಾಧವ ಆರ್‌. ಭಂಡಾರಿ, ನ್ಯಾಯವಾದಿ ಸುಂದರ್‌ ಜಿ. ಭಂಡಾರಿ ಅವರನ್ನು ಪ್ರಸಕ್ತ ಅಧ್ಯಕ್ಷರು, ಮಾಜಿ ಗೌ| ಪ್ರ| ಕಾರ್ಯದರ್ಶಿಗಳಾದ, ಯು.ಸತೀಶ್‌ ಭಂಡಾರಿ, ವಿಶ್ವನಾಥ ಬಿ.ಭಂಡಾರಿ, ಟಿ.ಸೀತಾರಾಮ ಭಂಡಾರಿ ಅವರನ್ನು ಪ್ರಸಕ್ತ ಗೌ| ಪ್ರ| ಕಾರ್ಯದರ್ಶಿ, ಮಾಜಿ ಗೌ| ಕೋಶಾಧಿಕಾರಿಗಳಾದ ಭುಜಂಗ ಭಂಡಾರಿ, ವಿಜಯಾನಂದ ಭಂಡಾರಿ (ಪರವಾಗಿ ಜಯಾನಂದ ಭಂಡಾ ರಿ), ದಿ| ಭಾಸ್ಕರ್‌ ಭಂಡಾರಿ ಡೊಂಬಿವಲಿ (ಅವರ ಸುಪುತ್ರಿ ಶಶಿ ಎಸ್‌.ಭಂಡಾರಿ), ರಮೇಶ್‌ ಭಂಡಾರಿ ಪೊವಾಯಿ, ವೆಂಕಟೇಶ್‌ ಭಂಡಾರಿ ಅವರನ್ನು ಹಾಲಿ ಕೋಶಾಧಿಕಾರಿ ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಶ್ರೀಮತಿ ತಾರಾ ಆರ್‌. ರಾವ್‌, ಮಾ| ರೋಹಿತ್‌ ಕೆ.ಭಂಡಾರಿ, ಕು| ಚೆ„ತನ್ಯ ಪಿ.ಭಂಡಾರಿ ಪರವಾಗಿ ತಾಯಿ ಸುಜಾತಾ ಭಂಡಾರಿ, ಸ್ವಾತಿ ಎಸ್‌. ಭಂಡಾರಿ ಮತ್ತು ಬಾಲಕೃಷ್ಣ ಪುಣೆ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಸತ್ಕರಿಸಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಜೊತೆ ಕಾರ್ಯದರ್ಶಿ ನಾರಾಯಣ ಆರ್‌.ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲಲಿತಾ ವಿ.ಭಂಡಾರಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಕೇಶ್‌ ಭಂಡಾರಿ ಮತ್ತು ಸಮಿತಿಯ ಇತರೇ ಪದಾಧಿಕಾರಿಗಳು, ಉಪಸಮಿತಿಗಳ ಮುಖ್ಯಸ್ಥರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಕು| ಗಾಯತ್ರಿ ಎ.ಭಂಡಾರಿ ಪ್ರಾರ್ಥನೆಗೆ„ದ‌ರು. ಜೊತೆ ಕೋಶಾಧಿಕಾರಿ ವಿಜಯ ಭಂಡಾರಿ ನಲಸೋಪರ ಅವರು ಶ್ರೀ ಕಚ್ಚಾರು ನಾಗೇಶ್ವರ ದೇವರನ್ನು ಸ್ತುತಿಸಿದರು.

ಸಮಿತಿಯ ಉಪಾಧ್ಯಕ್ಷರುಗಳಾದ ನ್ಯಾಯವಾದಿ ಶೇಖರ್‌ ಎಸ್‌.ಭಂಡಾರಿ ಸ್ವಾಗತಿಸಿದರು. ಭುಜಂಗ ಗಿರಿಯ ಭಂಡಾರಿ ಸಂಸ್ಥೆಯ ಉದಯಕ್ಕೆ ಕಾರಣೀಭೂತರಾದ ಮಹಾನೀಯರ ಸೇವೆಯನ್ನು ಸ್ಮರಿಸಿ ಅಭಿವಂದಿಸಿದರು.

ಉಪಾಧ್ಯಕ್ಷ ಪದ್ಮನಾಭ ಭಂಡಾರಿ ಥಾಣೆ, ಗೌ| ಕೋಶಾಧಿಕಾರಿ ಪಾಂಡು ಸಿ.ಭಂಡಾರಿ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್‌.ಎಂ.ಭಂಡಾರಿ, ಸೀತಾರಾಮ ಭಂಡಾರಿ. ಪಿ.ಸಿ.ಶೇಖರ್‌ ಪುಣೆ, ಗುರುದಾಸ ಭಂಡಾರಿ,ಕರುಣಾಕರ ಭಂಡಾರಿ ಕಾಂದಿವಲಿ, ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ವನಿತಾ ಎಸ್‌. ಭಂಡಾರಿ ಅತಿಥಿಗಳನ್ನು ಪರಿಚಯಿಸಿ ಅತಿಥಿಗಳಿಗೆ ಪುಷ್ಪ ಗುಪcಗಳನ್ನೀಡಿ ಗೌರವಿಸಿದರು.

ಸಚಿನ್‌ ಆರ್‌. ಭಂಡಾರಿ ಮತ್ತು ಸರೀತ ಕೆ.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಪ್ರಭಾಕರ ಪಿ.ಭಂಡಾರಿ ಸಭಾ ಕಾರ್ಯಕ್ರಮ ನಿರ್ವಹಿಸಿ ಅಭಾರ ಮನ್ನಿಸಿದರು.

ಕಾರ್ಯಕ್ರಮದ ಅಂಗವಾಗಿ ಮುಂಬಯಿಯ ಜಯಶೀಲ ಭಂಡಾರಿ ಮತ್ತು ಬಳಗವು ರೋಮಾಂಚನ ದೃಶ್ಯಗಳ ವಿಸ್ಮಯ ಕಾರ್ಯಕ್ರಮ, ನವೀನ್‌ ಭಂಡಾರಿ ಕೊಪ್ಪ ಮತ್ತು ಬಳಗವು ಶಿವಾಣಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನೂ, ಸಮಿತಿಯ ಸದಸ್ಯ-ಸದಸ್ಯೆಯರು, ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top