CONNECT WITH US  

ಸಾಂಬಾರು (ಗಸಿ)

ಬೇಕಾದ ಸಾಮಗ್ರಿ
ತೆಂಗಿನ ಕಾಯಿ, ಘಾಟಿ ಮೆಣಸು, ಉದ್ದಿನ ಬೇಳೆ, ಕೊತ್ತಂಬರಿ ಕಾಳು, ತೊಗರಿ ಬೇಳೆ, ನೀರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ, ಒಗ್ಗರಣೆಗೆ ಸಾಸಿವೆ, ಒಣಮೆಣಸಿನ ಕಾಯಿ,ಕರಿಬೇವು, ಉಪ್ಪು, ಹುಣಸೇಹುಳಿ, ಖಾರದ ಪುಡಿ.
ಮಾಡುವ ವಿಧಾನ
ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೋವನ್ನು ಉಪ್ಪು, ಖಾರದ ಪುಡಿ, ಹುಣಸೇ ಹುಳಿ ಹಾಕಿ ಬೇಯಿಸಿ. ಉದ್ದಿನಬೇಳೆ, ಕೊತ್ತಂಬರಿ ಕಾಳು, ತೊಗರಿ ಬೇಳೆ,ಸ್ವಲ್ಪ ಮೆಂತೆ, ಸ್ವಲ್ಪ ಇಂಗು ಹಾಕಿ ಹುರಿಯಿರಿ. ಉದ್ದಿನಬೇಳೆ ಕೆಂಪಾಗುವಾಗ ಕರಿಬೇವು ಮತ್ತು ಸ್ವಲ್ಪ ಕಾಯಿ ಸೇರಿಸಿ ಹುರಿದು, ಕಾಯಿ ಜತೆಗೆ ಇದನ್ನು ಸೇರಿಸಿ ಹದವಾಗಿ ರುಬ್ಬಿ. ಬೇಯಿಸಿಟ್ಟ ತರಕಾರಿ ಜತೆಗೆ ಇದನ್ನು ಮಿಕ್ಸ್‌ ಮಾಡಿ ಸಿಮ್‌ನಲ್ಲಿಟ್ಟು ಕುದಿಸಿ. ಕೊನೆಯಲ್ಲಿ ಸಾಸಿವೆ ಒಗ್ಗರಣೆ ಹಾಕಿ.

Trending videos

Back to Top