CONNECT WITH US  

ರುದ್ರ ವೀಣೆ ಮಿಡಿಯಿತು

ಈ ಸಿನಿಮಾದಲ್ಲಿ ಕಾರ್ನಾಡ್‌ ಒಳ್ಳೇ ಅಪ್ಪ!ಗಿರೀಶ್‌ ಕಾರ್ನಾಡ್‌ ಅಂದು ಫ‌ುಲ್‌ ಖುಷಿಯಲ್ಲಿದ್ದರು. ಆ ಖುಷಿಗೆ ಕಾರಣ "ರುದ್ರತಾಂಡವ'. ಈ ಚಿತ್ರದಲ್ಲಿ ಗಿರೀಶ್‌ ಕಾರ್ನಾಡ್‌ ಒಳ್ಳೆಯ ತಂದೆಯಾಗಿ ಕಾಣಿಸಿಕೊಂಡಿರುವುದು. ಅದಕ್ಕಿಂತ ಹೆಚ್ಚಾಗಿ ಒಂದೊಳ್ಳೆಯ ಟೀಮ್‌ನಲ್ಲಿ ಕೆಲಸ ಮಾಡಿರುವುದು. ಆ ಖುಷಿ ಹಂಚಿಕೊಳ್ಳುತ್ತಲೇ ಅಂದು ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದರು ಕಾರ್ನಾಡ್‌.

ಅಂದಿನ ಮತ್ತೂಂದು ವಿಶೇಷ,ಅಪ್ಪಂದಿರು ಆಗಮಿಸಿದ್ದು, ಚಿತ್ರದ ಒಂದೊಂದು ಹಾಡು ರಿಲೀಸ್‌ ಮಾಡಿದ್ದು. ನಾಯಕ ಚಿರಂಜೀವಿ ಸರ್ಜಾ ಅವರ ತಂದೆ ವಿಜಯ್‌ ಕುಮಾರ್‌, ಚಿತ್ರತಂಡಕ್ಕೆ ಶುಭ ಹಾರೈಸಿದರೆ, ನಾಯಕಿ ರಾಧಿಕಾ ಅವರ ತಂದೆ ದೇವರಾಜ್‌, ಚಿತ್ರಕ್ಕೆ ಗೆಲುವು ಸಿಗಲಿ ಅಂದರು. ನಿರ್ದೇಶಕ ಗುರುದೇಶಪಾಂಡೆ ಅವರ ತಂದೆ ಮಾರ್ತಾಂಡರಾವ್‌ ದೇಶಪಾಂಡೆ ಚಿತ್ರಕ್ಕೆ ಒಳಿತಾಗಲಿ ಅಂದರು. ಮದರಂಗಿ ಕೃಷ್ಣ ಅವರ ತಂದೆ ನಾಗಪ್ಪ, ಎಲ್ಲರಿಗೂ ಶುಭವಾಗಲಿ ಅಂತ ಹಾರೈಸಿದರು. ಅಷ್ಟೊತ್ತಿಗೆ ಮೈಕ್‌ ನಿರ್ದೇಶಕ ಗುರು ದೇಶಪಾಂಡೆ ಅವರ ಕೈಗೆ ಬಂದಿತ್ತು. ಚಿತ್ರದೊಳಗಿರುವ ಅಂಶಗಳ ಬಗ್ಗೆ ವಿವರ ಕೊಟ್ಟರು. ಕೋಲಾರ, ಬಂಗಾರಪೇಟೆ ಸುತ್ತಮುತ್ತ ನಡೆದ ಚಿತ್ರೀಕರಣದ ಅನುಭವ ಕುರಿತು ಮಾತಾಡಿದರು. ಜನವರಿ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಚಿತ್ರ ತೆರೆಗೆ ತರುವುದಾಗಿ ಅವರು ಹೇಳಿಕೊಂಡರು. ನಾಯಕ, ನಾಯಕಿಯ ಅಭಿನಯ, ಸಂಗೀತ ನಿರ್ದೇಶಕರ ಹಾಡುಗಳು, ಗಿರೀಶ್‌ ಕಾರ್ನಾಡ್‌ ಅವರೊಂದಿಗಿನ ಕೆಲಸ
ಮತ್ತು ನಿರ್ಮಾಪಕರ ಅದ್ಧಿರಿತನದ ವೆಚ್ಚ ಕುರಿತು ಹೇಳಿಕೊಂಡರು. ಗಿರೀಶ್‌ಕಾರ್ನಾಡ್‌ ಅವರು ಚಿತ್ರ ಒಪ್ಪಿಕೊಂಡಿದ್ದು, ಅದರೊಳಗಿನ ಹೂರಣ ಮತ್ತು ಗಟ್ಟಿಯಾಗಿರುವ ಪಾತ್ರಕ್ಕಾಗಿಯಂತೆ. "ಚಿತ್ರದಲ್ಲಿ ನಾನು ಹೇಗೆಲ್ಲಾ ನಟಿಸಿದ್ದರೂ ಅದಕ್ಕೆ ಕಾರಣ ಗುರುದೇಶಪಾಂಡೆ. ಎಲ್ಲಾ ಕ್ರೆಡಿಟ್‌ ಅವರಿಗೇ ಸಲ್ಲಬೇಕು' ಎಂದರು.

ನಾಯಕ ಚಿರಂಜೀವಿ ಸರ್ಜಾಗೆ ಈ ಚಿತ್ರ ಹೊಸ ಇಮೇಜ್‌ ತಂದುಕೊಡಲಿದೆ ಎಂಬ ವಿಶ್ವಾಸವಿದೆಯಂತೆ. ಚಿಕ್ಕಣ್ಣ ಇಲ್ಲಿ ದೊಡ್ಡ ಪಾತ್ರವನ್ನೇ ಮಾಡಿದ್ದಾರಂತೆ. ಕುಮಾರ್‌
ಗೋವಿಂದ್‌ ಸಿನಿಮಾದ ಅಂದವನ್ನು ಹೊಗಳಿದರು. ನಾಯಕ ಧ್ರುವ ಸರ್ಜಾ, ನಿರ್ಮಾಪಕ ವಿನೋದ್‌, ಕ್ಯಾಮೆರಾಮೆನ್‌ ಜಗದೀಶ್‌ವಾಲಿ, ಸಂಭಾಷಣೆಗಾರರಾದ ಜಡೇಶ್‌ ಮತ್ತು
ಗುರುವೇಂದ್ರ ಈ ವೇಳೆ ಇದ್ದರು.


Trending videos

Back to Top