ರೈಲು ನಿಲ್ದಾಣದಲ್ಲಿ ಹಸ್ತಮೈಥುನ; ಮಹಿಳೆಯಿಂದ ಫೇಸ್ ಬುಕ್ ಲೈವ್

ಬಾಂದೇಲ್ : ಇಲ್ಲಿನ ರೈಲು ನಿಲ್ದಾಣದಲ್ಲಿ ನಿನ್ನೆ ಭಾನುವಾರ ಮಧ್ಯಾಹ್ನ 1.15ರ ಸುಮಾರಿಗೆ 50 ವರ್ಷ ದಾಟಿದ, ಮಾನಸಿಕವಾಗಿ ಅಸ್ಥಿರನಾಗಿದ್ದ, ವ್ಯಕ್ತಿಯೋರ್ವ, ಹೌರಾ ಕಡೆಗೆ ಹೋಗುವ ಲೋಕಲ್ ಟ್ರೈನ್ ನಿರ್ಗಮನದ ಕೆಲವೇ ನಿಮಿಷಗಳ ಮುನ್ನ, ಮಹಿಳಾ ಕಂಪಾರ್ಟ್ಮೆಂಟ್ ಎದುರುಗಡೆ, ಎಲ್ಲರ ಕಣ್ಣಿಗೆ ಕಾಣುವ ರೀತಿಯಲ್ಲಿ, ಹಸ್ತ ಮೈಥುನ ಮಾಡಿಕೊಂಡ ಘಟನೆ ನಡೆದಿದೆ.
ಇದನ್ನು ಕಂಡ ಮಹಿಳಾ ರೈಲು ಪ್ರಯಾಣಿಕರೊಬ್ಬರು ಅದೇ ಕ್ಷಣದಲ್ಲಿ ತನ್ನ ಮೊಬೈಲ್ನಲ್ಲಿ ಆತನ ಹೇಸಿಗೆ ಕೃತ್ಯವನ್ನು ಚಿತ್ರೀಕರಿಸಿಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮ್ ಮಾಡಿದರು.
ಬಳಿಕ ತನ್ನ ಸಹ ಪ್ರಯಾಣಿಕರನ್ನು ಜಾಗೃತ ಗೊಳಿಸಿದ ಆಕೆ ವಿಕ್ಷಿಪ್ತ ಆರೋಪಿ ವ್ಯಕ್ತಿಯನ್ನು ಸೆರೆ ಹಿಡಿದಿರಾದರೂ ಆತ ಅವರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋದ. ಆದರೂ ಆ ಬಳಿಕ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.