CONNECT WITH US  

ಸಮಾಜವಾದಿ ಪಕ್ಷದ ಬಣಗಳಿಗೆ ದೊಣ್ಣೆ, ಕತ್ತಿ ಚುನಾವಣಾ ಚಿಹ್ನೆ!

ನವದೆಹಲಿ: ಸಮಾಜವಾದಿ ಪಕ್ಷ ಇಬ್ಭಾಗವಾದ ಹಿನ್ನೆಲೆಯಲ್ಲಿ ಇದೀಗ ಮುಲಾಯಂ ಸಿಂಗ್‌ ಯಾದವ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್‌ ಸಿಂಗ್‌ ಯಾದವ್‌ ಬಣದ ಮಧ್ಯೆ ಚುನಾವಣಾ ಚಿಹ್ನೆಗಾಗಿ ತೀವ್ರ ಗುದ್ದಾಟ ನಡೆದಿದೆ.

ಈ ಜಗಳ ತಾರಕ್ಕೇರಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷದ ಮೂಲ ಸೈಕಲ್‌ ಚಿಹ್ನೆ ಯಾರಿಗೆ ಕೊಡಬೇಕು ಅನ್ನೋದೇ ಸಮಸ್ಯೆಯಾಗಿದೆ. ಆದ್ದರಿಂದ ಈ ಬಾರಿಯ ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಮುಲಾಯಂ ಸಿಂಗ್‌ ಬಣಕ್ಕೆ "ದೊಣ್ಣೆ'ಯ ಚಿತ್ರ ಮತ್ತು ಅಖೀಲೇಶ್‌ ಬಣಕ್ಕೆ "ಕತ್ತಿ'ಯ ಚಿತ್ರವನ್ನು ನೀಡಲಾಗುವುದು. ಎರಡೂ ಬಣಗಳು ಚಿಹ್ನೆಗೆ ಹೊಡೆದಾಡುತ್ತಿರುವುದರಿಂದ ಸದ್ಯ ಇದೇ ಚಿಹ್ನೆ ಮಾತ್ರ ಚುನಾವಣಾ ಆಯೋಗಕ್ಕೆ ಸೂಕ್ತವಾಗಿ ಕಂಡಿದೆ. ಎರಡೂ ಬಣಗಳು ಈ ಬಾರಿಯ ಚುನಾವಣೆಯಲ್ಲಿ ಇದೇ ಚಿಹ್ನೆ ಬಳಸಿ ಚುನಾವಣೆ ಎದುರಿಸಬೇಕು ಎಂದೂ ಅದು ತಾಕೀತು ಮಾಡಲಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.
 

Trending videos

Back to Top